Maharashtra: ಅಪ್ರಾಪ್ತೆ ಮೇಲೆ ಅತ್ಯಾಚಾರ; ದೂರು ದಾಖಲಿಸಿಕೊಳ್ಳಲು ಒಪ್ಪದ ಎರಡು ಪೊಲೀಸ್ ಠಾಣೆಗಳು
ಬಾಲಕಿ ಶಿರಡಿಯಿಂದ ವಾಪಸ್ ಬರುತ್ತಿದ್ದಳು. ಭಿವಂದಿ ಬೈಪಾಸ್ ಬಳಿ ರೈಲಿನಿಂದ ಇಳಿದುಕೊಂಡಳು. ನಂತರ ಕಲ್ಯಾಣ್ಗೆ ತೆರಳಿ ಉಲ್ಲಾಸನಗರಕ್ಕೆ ಹೋಗುವ ಲೋಕಲ್ ರೈಲನ್ನು ಹತ್ತಿದ್ದಳು.
ಮುಂಬೈ: 34 ವರ್ಷದ ಮಹಿಳೆಯರ ಭೀಕರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಸುದ್ದಿ ಮಾಡಿದೆ. ಅದರ ಬೆನ್ನಲ್ಲೇ ಅಪ್ರಾಪ್ತೆಯೊಬ್ಬಳ ಮೇಲೆ ರೇಪ್ ನಡೆದಿರುವ ವಿಚಾರ ಇಂದು ಬೆಳಕಿಗೆ ಬಂದಿದೆ. ಇಂದು ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ದುರ್ಘಟನೆ ನಡೆದಿದ್ದು, 15ವರ್ಷದ ಬಾಲಕಿ ಸಂತ್ರಸ್ತೆ. ಉಲ್ಲಾಸನಗರದ ರೈಲ್ವೆ ಸ್ಟೇಶನ್ ಆವರಣದಲ್ಲಿರುವ ರೈಲ್ವೆ ವಸತಿ ಗೃಹದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆರೋಪಿಯನ್ನೂ ಬಂಧಿಸಲಾಗಿದ್ದು, ಪೊಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಾಲಕಿ ಶಿರಡಿಯಿಂದ ವಾಪಸ್ ಬರುತ್ತಿದ್ದಳು. ಭಿವಂದಿ ಬೈಪಾಸ್ ಬಳಿ ರೈಲಿನಿಂದ ಇಳಿದುಕೊಂಡಳು. ನಂತರ ಕಲ್ಯಾಣ್ಗೆ ತೆರಳಿ ಉಲ್ಲಾಸನಗರಕ್ಕೆ ಹೋಗುವ ಲೋಕಲ್ ರೈಲನ್ನು ಹತ್ತಿದ್ದಳು. ಉಲ್ಲಾಸನಗರದಲ್ಲಿ ರಾತ್ರಿ 9ಗಂಟೆಗೆ ಅವಳು ಇಳಿದಾಗ ಆಕೆಗೆ ಇಬ್ಬರು ಸ್ನೇಹಿತರೂ ಸಿಕ್ಕಿದರು. ಮೂವರೂ ಸ್ಕೈವಾಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಹತ್ತಿರ ಬಂದಿದ್ದಾನೆ. ಆತ ತನ್ನ ಬಳಿ ಇದ್ದ ಸುತ್ತಿಗೆಯಿಂದ ಬಾಲಕಿಯ ಸ್ನೇಹಿತರನ್ನು ಹೆದರಿಸಿದ. ಅವರಿಬ್ಬರೂ ಓಡಿದ ನಂತರ ಈಕೆಯನ್ನು ಅಪಹರಿಸಿ, ರೇಪ್ ಮಾಡಿದ್ದಾನೆಂದು ರೈಲ್ವೆ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಆ ಬಾಲಕಿ ರಾತ್ರಿಯಿಡೀ ಸಂಕಷ್ಟಪಟ್ಟು, ಬೆಳಗ್ಗೆ ಅಲ್ಲಿಂದ ಪಾರಾಗಿದ್ದಾಳೆ. ನಂತರ ತನ್ನ ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿ ವಿಷಯ ಮುಟ್ಟಿಸಿ, ಆ ಸ್ನೇಹಿತೆ ನಮಗೆ ತಿಳಿಸಿದಳು ಎಂದು ಕಮಿಷನರ್ ಮಾಹಿತಿ ನೀಡಿದರು.
ದೂರು ದಾಖಲಿಸಿಕೊಳ್ಳಲು ಹಿಂದೇಟು ಬಾಲಕಿ ಅತ್ಯಾಚಾರಕ್ಕೆ ಒಳಗಾಗಿ ಕಷ್ಟಪಡುತ್ತಿದ್ದರೆ, ಎರಡು ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು ನಿಜಕ್ಕೂ ವಿಷಾದನೀಯ. ಈ ಎರಡೂ ಠಾಣೆಗಳ ಸಿಬ್ಬಂದಿ, ಕ್ರೈಂ ನಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪ್ರಕರಣ ದಾಖಲಿಸಲಿಲ್ಲ. ಈ ಬಗ್ಗೆಯೂ ತನಿಖೆ ನಡೆಸುತ್ತೇವೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಕೌನ್ಸಲಿಂಗ್ಗೆ ಕರೆದೊಯ್ಯಲಾಗುತ್ತದೆ ಎಂದು ರೈಲ್ವೆ ಕಮಿಷನರ್ ಖಾಲಿದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Rachita Ram: ನಾಮಧಾರಿಯಾಗಿರುವ ಚಿತ್ರ ಹಂಚಿಕೊಂಡ ರಚಿತಾ ರಾಮ್; ಏನು ವಿಶೇಷ?
ಎಸ್ಸಿ ಎಸ್ಟಿಯ 52 ಶಾಸಕರಿದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ