ಎಸ್ಸಿ ಎಸ್ಟಿಯ 52 ಶಾಸಕರಿದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ
Davanagere: ದೇಶದಲ್ಲಿ ಆರ್ಎಸ್ಎಸ್ ಒಂದಿದೆ, ಡಿಎಸ್ಎಸ್ ಹತ್ತಾರಿವೆ. ಹತ್ತಾರು ಸಂಘಟನೆ ಮಾಡುವುದನ್ನು ನಿಲ್ಲಿಸಿ ಒಂದಾಗಬೇಕು. ಎಸ್ಸಿ, ಎಸ್ಟಿ ಸಮುದಾಯದವರು ಒಂದಾಗಬೇಕೆಂದು ಮಾದಾರ ಚನ್ನಯ್ಯ ಸ್ವಾಮೀಜಿ ಕರೆ ನೀಡಿದ್ದಾರೆ.
ದಾವಣಗೆರೆ: ವಿಧಾನಸಭೆಯಲ್ಲಿ ಎಸ್ಸಿ, ಎಸ್ಟಿಯ 52 ಶಾಸಕರಿದ್ದಾರೆ. ಬೇರೆ ಪಕ್ಷಗಳಿಂದ ಬಂದ ಶಾಸಕರ ಬೆಂಬಲದಿಂದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. 13 ಶಾಸಕರ ಬೆಂಬಲದಿಂದ ಯಡಿಯೂರಪ್ಪ ಸಿಎಂ ಆಗಿದ್ದರು. ಎಸ್ಸಿ/ ಎಸ್ಟಿಯ 52 ಶಾಸಕರಿದ್ದರೂ ಅಧಿಕಾರ ಹಿಡಿಯಲಾಗಿಲ್ಲ. ಎಸ್ಸಿ, ಎಸ್ಟಿ ಸಮುದಾಯದವರು ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಿ ಎಂದು ದಾವಣಗೆರೆಯಲ್ಲಿ ನಡೆದ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂವಾದದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಉಪಜಾತಿಗಳಿವೆ. ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಉಪಜಾತಿಗಳಿವೆ. ಮುಂದಿನ ದಿನಗಳಲ್ಲಿ ಎಸ್ಸಿ, ಎಸ್ಟಿ ಸ್ವಾಮೀಜಿಗಳ ಸಭೆ ನಡೆಸುತ್ತೇವೆ. ಎಸ್ಸಿ, ಎಸ್ಟಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ದೇಶದಲ್ಲಿ ಆರ್ಎಸ್ಎಸ್ ಒಂದಿದೆ, ಡಿಎಸ್ಎಸ್ ಹತ್ತಾರಿವೆ. ಹತ್ತಾರು ಸಂಘಟನೆ ಮಾಡುವುದನ್ನು ನಿಲ್ಲಿಸಿ ಒಂದಾಗಬೇಕು. ಎಸ್ಸಿ, ಎಸ್ಟಿ ಸಮುದಾಯದವರು ಒಂದಾಗಬೇಕೆಂದು ಮಾದಾರ ಚನ್ನಯ್ಯ ಸ್ವಾಮೀಜಿ ಕರೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂವಾದ ನಡೆಸಲಾಗಿದೆ. ಈ ವೇಳೆ, ದಲಿತ ಮುಖ್ಯಮಂತ್ರಿ ಕೂಗು ಪ್ರತಿಧ್ವನಿಸಿದೆ. ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಸೇರಿ ಚಿಂತನೆ ನಡೆಸಿದ್ದಾರೆ. ಎಸ್ಸಿ, ಎಸ್ಟಿ ಸ್ವಾಮೀಜಿಗಳ ನಡೆ ಅಚ್ಚರಿ ಮೂಡಿಸಿದೆ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠ, ಛಲವಾದಿ ಗುರುಪೀಠದ ಶ್ರೀಗಳು ಭಾಗಿ ಆಗಿದ್ದಾರೆ. ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯದ 52 ಶಾಸಕರಿದ್ದಾರೆ. ಆದರೆ ಅಧಿಕಾರ ಹಿಡಿಯಲು ಆಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಬರಲು ಹಣದ ಆಫರ್ ಕೊಟ್ಟಿರಲಿಲ್ಲ: ಯುಟರ್ನ್ ಹೊಡೆದ ಶ್ರೀಮಂತ ಪಾಟೀಲ್
ಇದನ್ನೂ ಓದಿ: ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ