AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಬರಲು ಹಣದ ಆಫರ್ ಕೊಟ್ಟಿರಲಿಲ್ಲ: ಯುಟರ್ನ್ ಹೊಡೆದ ಶ್ರೀಮಂತ ಪಾಟೀಲ್

Belagavi: ನಾನೇ ಬಿಜೆಪಿಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದೆ. ನನ್ನದು ಯಾವುದೇ ಅಪೇಕ್ಷೆ ಇಲ್ಲವೆಂದು ನಾನು ಹೇಳಿದ್ದೆ. ಒಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ನಾನು ಕೇಳಿದ್ದೆ. ಮೋದಿರವರ ಕೆಲಸ, ಬಿಜೆಪಿ ವಿಚಾರಕ್ಕೆ ಬೆಂಬಲ ಎಂದಿದ್ದೆ ಎಂದು ತಿಳಿಸಿದ್ದಾರೆ.

ಬಿಜೆಪಿಗೆ ಬರಲು ಹಣದ ಆಫರ್ ಕೊಟ್ಟಿರಲಿಲ್ಲ: ಯುಟರ್ನ್ ಹೊಡೆದ ಶ್ರೀಮಂತ ಪಾಟೀಲ್
ಶ್ರೀಮಂತ ಪಾಟೀಲ್ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on:Sep 12, 2021 | 6:31 PM

Share

ಬೆಳಗಾವಿ: ರಾಜ್ಯದಲ್ಲಿ 40-50 ಲಕ್ಷ ಮರಾಠ ಸಮಾಜದ ಜನರಿದ್ದಾರೆ. ಶೈಕ್ಷಣಿಕ, ಸಾಮಾಜಿಕವಾಗಿ ನಾವು ಬಹಳಷ್ಟು ಹಿಂದೆ ಇದ್ದೇವೆ. ಹಿಂದಿನಿಂದ ಮರಾಠಾ ಸಮಾಜದ ಮೇಲೆ ಅನ್ಯಾಯವಾಗಿದೆ. ಸರ್ಕಾರದ ಮೇಲೆ ಒತ್ತಡ ತರದಿದ್ದರೆ ನಮ್ಮ ಕೆಲಸ ಆಗಲ್ಲ. ಸರ್ಕಾರದ ಬಳಿ ಬೇಡಿಕೊಳ್ಳುತ್ತಾ ಕುಳಿತರೆ ಏನೂ ಸಿಗುವುದಿಲ್ಲ. ಮರಾಠಾ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತೇವೆ ಎಂದು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

ಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ಕೊಟ್ಟಿದ್ರು ಎಂದು ಹೇಳಿದ್ದ ಶ್ರೀಮಂತ್ ಪಾಟೀಲ್ ಇಂದು ಯು ಟರ್ನ್ ಹಾಕಿದ್ದಾರೆ. ಬಿಜೆಪಿಯಿಂದ ಆಫರ್ ಬಗ್ಗೆ ಶ್ರೀಮಂತ ಪಾಟೀಲ್​ ಯುಟರ್ನ್‌ ಹೊಡೆದಿದ್ದಾರೆ. ಬಿಜೆಪಿಯವರು ಯಾವುದೇ ಹಣದ ಆಫರ್ ಕೊಟ್ಟಿರಲಿಲ್ಲ. ಆಪರೇಷನ್ ಕಮಲದ ವೇಳೆ ಯಾರೂ ಆಮಿಷ ನೀಡಿರಲಿಲ್ಲ. ನಾನೇ ಬಿಜೆಪಿಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದೆ. ಏನು ಅಪೇಕ್ಷೆ ಇಟ್ಟುಕೊಂಡು ಬಂದಿದ್ದೀರಿ ಅಂತಾ ಕೇಳಿದ್ರು. ನನ್ನದು ಯಾವುದೇ ಅಪೇಕ್ಷೆ ಇಲ್ಲವೆಂದು ನಾನು ಹೇಳಿದ್ದೆ. ಒಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ನಾನು ಕೇಳಿದ್ದೆ. ಮೋದಿರವರ ಕೆಲಸ, ಬಿಜೆಪಿ ವಿಚಾರಕ್ಕೆ ಬೆಂಬಲ ಎಂದಿದ್ದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರವಾಗಿ ಶ್ರೀಮಂತ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಮರಾಠ ಸಮುದಾಯಕ್ಕೆ ಮೇಯರ್ ಸ್ಥಾನ ನೀಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಾ ಸಮಾಜ ದೊಡ್ಡ ಸಂಖ್ಯೆಯಲ್ಲಿ ಇದೆ. ಹೀಗಾಗಿ ಮರಾಠಾ ಸಮಾಜಕ್ಕೆ ಮೇಯರ್ ಸ್ಥಾನ ನೀಡಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಒತ್ತಾಯ ಮಾಡಿದ್ದಾರೆ.

ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು: ಅಂಜಲಿ ನಿಂಬಾಳ್ಕರ್ ಶ್ರೀಮಂತ ಪಾಟೀಲ್ ವಿಚಾರದಲ್ಲಿ ಯೂಸ್ ಅಂಡ್ ಥ್ರೋ ಪಾಲಿಸಿ ಪ್ರಯೋಗಿಸಲಾಗಿದೆ. ಮರಾಠ ಸಮಾಜದ ಮೇಲೆ ಅನ್ಯಾಯ ಆಗ್ತಿದ್ರೆ ಸುಮ್ಮನಿರಲ್ಲ. ಸರ್ಕಾರ ರಚಿಸಲು ಶ್ರೀಮಂತ ಪಾಟೀಲ್‌ರನ್ನ ಕರೆದೊಯ್ದರು. ಉಪಯೋಗ ಆದ್ಮೇಲೆ ಏಕೆ ಸಂಪುಟದಿಂದ ತಗೆಯಲಾಯ್ತು ಎಂದು ಸರ್ಕಾರದ ವಿರುದ್ಧ ಶಾಸಕಿ ಅಂಜಲಿ ನಿಂಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿದ್ದಾರೆ.

ಮರಾಠ ಸಮುದಾಯಕ್ಕೆ 2ಎ ಮೀಸಲಾತಿಯನ್ನು ನೀಡಬೇಕು ಎಂದು ಅಂಜಲಿ ನಿಂಬಾಳ್ಕರ್ ಆಗ್ರಹಿಸಿದ್ದಾರೆ. ಇದರಿಂದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗಲಿದೆ. ನಮ್ಮ ಮರಾಠ ಸಮುದಾಯದಲ್ಲಿ ರೈತರು, ಬಡವರು ಇದ್ದಾರೆ. ಮಹಾರಾಷ್ಟ್ರ, ಗೋವಾಗೆ ಗುಳೆ ಹೋಗುವ ಕಾರ್ಮಿಕರಿದ್ದಾರೆ. ಪ್ರತಿ ಅಧಿವೇಶನದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದೇನೆ. ಈ ಅಧಿವೇಶನದಲ್ಲಿಯೂ ಮೀಸಲಾತಿಗಾಗಿ ಆಗ್ರಹಿಸುತ್ತೇನೆ ಎಂದು ಅಂಜಲಿ ನಿಂಬಾಳ್ಕರ್ ಹೇಳಿಕೆ ನೀಡಿದ್ದಾರೆ.

2ಎ ಮೀಸಲಾತಿಗೆ ಆಗ್ರಹಿಸಿ ಮರಾಠಾ ಸಮುದಾಯದ ಸಭೆ ನಡೆಸಲಾಗಿದೆ. ಅಂಬಡಗಟ್ಟಿ ಗ್ರಾಮದಲ್ಲಿ ರಾಜ್ಯಮಟ್ಟದ ಚಿಂತನಾ ಸಭೆ ನಡೆಸಲಾಗಿದೆ. 2ಎ ಮೀಸಲಾತಿ ಹೋರಾಟದ ರೂಪರೇಷೆ ಕುರಿತು ಚರ್ಚೆ ಮಾಡಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಡಿಸಿ ಕಚೇರಿ ಬಳಿ ಧರಣಿ ನಡೆಸಲಾಗುವುದು. ಪ್ರತಿ ಜಿಲ್ಲೆಯ ಡಿಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಕೂರಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.

ಇದನ್ನೂ ಓದಿ: ಬಿಜೆಪಿಗೆ ಬರಲು ಹಣದ ಆಫರ್ ಕೊಟ್ಟಿರಲಿಲ್ಲ: ಯುಟರ್ನ್ ಹೊಡೆದ ಶ್ರೀಮಂತ ಪಾಟೀಲ್

ಇದನ್ನೂ ಓದಿ: ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಪರಾಮರ್ಶನೆಗೆ ಉನ್ನತ ಮಟ್ಟದ ಸಮಿತಿ ರಚನೆ

Published On - 6:29 pm, Sun, 12 September 21