ಬಿಜೆಪಿಗೆ ಸೇರಲು ಹಣದ ಆಮಿಷ ಇದ್ದದ್ದು ನಿಜ; ನಾನು ಹಣ ಪಡೆಯದೆ ಸ್ಥಾನಮಾನ ಬೇಕು ಎಂದಿದ್ದೆ: ಶ್ರೀಮಂತ ಪಾಟೀಲ್
Karnataka Politics: ಸಚಿವ ಸ್ಥಾನ ಕಳೆದುಕೊಂಡ ನಂತರ ಪಾಟೀಲ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನನಗೆ ಹಣದ ಆಫರ್ ಕೊಟ್ರೂ ನಾನು ಬೇಡ ಎಂದಿದ್ದೆ. ಆದರೆ, ಸ್ಥಾನಮಾನ ಬೇಕು ಎಂದು ತಿಳಿಸಿದ್ದೆ ಎಂದು ಬೆಳಗಾವಿ ಜಿಲ್ಲೆ ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಬೆಳಗಾವಿ: ಆಪರೇಷನ್ ಕಮಲ ವೇಳೆ ಬಿಜೆಪಿ ನಾಯಕರಿಂದ ಹಣದ ಆಮಿಷ ಇದ್ದದ್ದು ನಿಜ. ಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ಕೊಟ್ಟಿದ್ರು ಎಂದು ಬಿಜೆಪಿಯ ಆಫರ್ ಬಗ್ಗೆ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ದಾರೆ. ಆಪರೇಷನ್ ಕಮಲ ವೇಳೆ ಬಿಜೆಪಿ ನಾಯಕರಿಂದ ಆಮಿಷ ಇತ್ತು. ನಿಮಗೆ ಎಷ್ಟು ಹಣ ಬೇಕು ಕೇಳಿ ಎಂದು ಆಫರ್ ಕೊಟ್ಟಿದ್ದರು. ಆದರೆ, ನಾನು ಹಣ ಪಡೆಯದೆ ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ. ಸರ್ಕಾರ ರಚನೆ ಬಳಿಕ ನನಗೆ ಸ್ಥಾನಮಾನ ಬೇಕು ಎಂದಿದ್ದೆ ಎಂದು ಶ್ರೀಮಂತ ಪಾಟೀಲ್ ಮಾಹಿತಿ ನೀಡಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ನಂತರ ಪಾಟೀಲ್ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನನಗೆ ಹಣದ ಆಫರ್ ಕೊಟ್ರೂ ನಾನು ಬೇಡ ಎಂದಿದ್ದೆ. ಆದರೆ, ಸ್ಥಾನಮಾನ ಬೇಕು ಎಂದು ತಿಳಿಸಿದ್ದೆ ಎಂದು ಬೆಳಗಾವಿ ಜಿಲ್ಲೆ ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಹೇಳಿದ್ದಾರೆ. ನಾನು ಬಿಜೆಪಿಗೆ ಬರುವ ಮುನ್ನ ನನಗೆ ದುಡ್ಡಿನ ಆಫರ್ ಕೊಟ್ಟಿದ್ದು ನಿಜ ಎಂದು ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ.
ದುಡ್ಡು ಇಲ್ಲದೆ ನಾನು ಬಿಜೆಪಿ ಪ್ರವೇಶ ಮಾಡಿದ್ದೇನೆ. ನನಗೆ ಹಣದ ಆಫರ ಕೊಟ್ರು ನಾನು ಬೇಡ ಎಂದಿದ್ದೆ. ನನಗೆ ಬೇಡ ಬಿಜೆಪಿ ಬರ್ತಿನಿ ಒಳ್ಳೆಯ ಸರ್ಕಾರ ರಚನೆಯಾದ ಬಳಿಕ ಸ್ಥಾನಮಾನ ನನಗೆ ಬೇಕು ಎಂದಿದ್ದೆ ಎಂದು ಹೇಳಿಕೊಂಡಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಶ್ರೀಮಂತ ಪಾಟೀಲ್ ಹೀಗೆ ಹೇಳಿಕೆ ನೀಡಿದ್ದಾರೆ. ಈಗ ಸಚಿವ ಸ್ಥಾನ ಸಿಕ್ಕಿಲ್ಲ. ಈ ವಿಚಾರದಲ್ಲಿ ಹಿರಿಯ ನಾಯಕರೊಟ್ಟಿಗೆ ಚರ್ಚೆ ಮಾಡಿದ್ದೇನೆ. ಬರುವ ಸಂಪುಟ ವಿಸ್ತರಣೆಯಲ್ಲಿ ಖಂಡಿತವಾಗಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡುತ್ತೇವೆ: ಬಾಲಚಂದ್ರ ಜಾರಕಿಹೊಳಿ
ಇದನ್ನೂ ಓದಿ: ಸಚಿವ ಸಂಪುಟ ಆಗುವುದಕ್ಕೆ ಕಾಂಗ್ರೆಸ್, ಜೆಡಿಎಸ್ನಿಂದ ಬಂದವರು ಕಾರಣ; ಅವರ ಋಣ ತೀರಿಸಬೇಕು: ಕೆಎಸ್ ಈಶ್ವರಪ್ಪ