ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​ ಯಾರು?-ರೇಸ್​​ನಲ್ಲಿ ಇಲ್ಲದಿದ್ದರೂ ಹುದ್ದೆಗೇರಿದ ನಾಯಕ

Bhupendra Patel: ಭೂಪೇಂದ್ರ ಪಟೇಲ್​ ಅವರ ಹೆಸರನ್ನು ವಿಜಯ್​ ರೂಪಾನಿಯವರೇ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಅದರಾಚೆಗೂ ಕೂಡ ಇವರು ಗುಜರಾತ್​ನ ಪ್ರಭಾವಿ ಸಮುದಾಯಕ್ಕೆ ಸೇರಿರುವುದೂ ಕೂಡ ಆಯ್ಕೆಗೆ ಇನ್ನೊಂದು ಕಾರಣ ಇರಬಹುದು.

ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​ ಯಾರು?-ರೇಸ್​​ನಲ್ಲಿ ಇಲ್ಲದಿದ್ದರೂ ಹುದ್ದೆಗೇರಿದ ನಾಯಕ
ಭೂಪೇಂದ್ರ ಪಟೇಲ್​
Follow us
TV9 Web
| Updated By: Lakshmi Hegde

Updated on:Sep 12, 2021 | 7:27 PM

ಗುಜರಾತ್​: ವಿಜಯ್​ ರೂಪಾನಿ (Vijay Rupani) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಕುತೂಹಲಕ್ಕೆ ಕಾರಣವಾದ ಪ್ರಶ್ನೆಯಾಗಿತ್ತು. ಇದೀಗ 59 ವರ್ಷದ ಭೂಪೇಂದ್ರ ಪಟೇಲ್ (Bhupendra Patel)​ ಆ ಹುದ್ದೆಗೆ ಏರಿದ್ದಾರೆ. ನಾಳೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೂಡ ನಡೆಯಲಿದೆ ಎನ್ನಲಾಗಿದೆ. ಭೂಪೇಂದ್ರ ಪಟೇಲ್​ ಘಟ್​​ಲೋಡಿಯಾ ಕ್ಷೇತ್ರದ ಶಾಸಕರಾಗಿದ್ದಾರೆ.

ನಿನ್ನೆ ರೂಪಾಣಿ ರಾಜೀನಾಮೆ ಬೆನ್ನಲ್ಲೇ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಗಾಂಧಿನಗರದಲ್ಲಿ ನಡೆದಿತ್ತು. ಈ ಸಭೆಯಲ್ಲಿ ಭೂಪೇಂದ್ರ ಪಟೇಲ್​ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಇವರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ 1,17,000 ಮತಗಳ ಅಂತರದಿಂದ ಗೆದ್ದಿದ್ದಾರೆ.

ಗುಜರಾತ್​ನ ಪ್ರಭಾವಿ ಸಮುದಾಯಕ್ಕೆ ಸೇರಿದವರು ಭೂಪೇಂದ್ರ ಪಟೇಲ್​ ಅವರ ಹೆಸರನ್ನು ವಿಜಯ್​ ರೂಪಾನಿಯವರೇ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಅದರಾಚೆಗೂ ಕೂಡ ಇವರು ಗುಜರಾತ್​ನ ಪ್ರಭಾವಿ ಸಮುದಾಯಕ್ಕೆ ಸೇರಿರುವುದೂ ಕೂಡ ಆಯ್ಕೆಗೆ ಇನ್ನೊಂದು ಕಾರಣ ಇರಬಹುದು. ಗುಜರಾತ್​ ವಿಧಾನಸಭೆ ಚುನಾವಣೆ ಇನ್ನೊಂದೇ ವರ್ಷ ಬಾಕಿ ಇರುವಾಗ ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​​ ಪಾಟಿದಾರ್ ಸಮುದಾಯದ ಉಪ-ಜಾತಿ ಕಡವಾಕ್ಕೆ ಸೇರಿದವರು. ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಹಾಗೇ, ಪಾಟಿದಾರ್​ ಸಂಸ್ಥೆಗಳಾದ ಸರ್ದಾರ್​ ಧಾಮ್​ ಮತ್ತು ವಿಶ್ವ ಉಮಿಯಾ ಫೌಂಡೇಶನ್​​ನ ಟ್ರಸ್ಟೀಗಳಲ್ಲೊಬ್ಬರು.

ಭೂಪೇಂದ್ರ ಪಟೇಲ್​ ಅವರು 1999ರಿಂದ 2000ರವರೆಗೆ ಮೇಮ್ನಾಗಗರ್​ ನಗರಪಾಲಿಕೆ ಅಧ್ಯಕ್ಷರಾಗಿದ್ದರು. ಹಾಗೇ, 2008ರಿಂದ 2010ರವರೆಗೆ ಅಹ್ಮದಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​​ನ ಶಾಲಾ ಮಂಡಳಿ ಉಪಾಧ್ಯಕ್ಷರಾಗಿದ್ದರು. ಬಳಿಕ 2010ರಿಂದ 2015ರವರೆಗೆ ತಥ್ಲೇಜ್​ ವಾರ್ಡ್​ನ ಕೌನ್ಸಿಲರ್​ ಆಗಿದ್ದರು.

ಇದನ್ನೂ ಓದಿ: Bhupendra Patel: ಗುಜರಾತ್​ ಮುಂದಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​

ಎಸ್​ಸಿ ಎಸ್​ಟಿಯ 52 ಶಾಸಕರಿದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ

IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?

Published On - 7:26 pm, Sun, 12 September 21

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ