ಕಾಂಗ್ರೆಸ್ ದೇಶದ ಸಂಪನ್ಮೂಲಗಳನ್ನು ಮಾರಿ ಕಿಕ್ ಬ್ಯಾಕ್ ಪಡೆದಿತ್ತು: ನಿರ್ಮಲಾ ಸೀತಾರಾಮನ್

Nirmala Sitharaman: ಅವರಿಗೆ (ರಾಹುಲ್ ಗಾಂಧಿ) ಹಣ ಗಳಿಕೆ ಎಂದರೆ ಏನು ಎಂದು ಅರ್ಥವಾಗಿದೆಯೇ? ದೇಶದ ಸಂಪನ್ಮೂಲಗಳನ್ನು ಮಾರಿದ್ದು ಅದರಲ್ಲಿ ಕಿಕ್ ಬ್ಯಾಕ್ ಪಡೆದದ್ದು ಕಾಂಗ್ರೆಸ್ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಾಂಗ್ರೆಸ್ ದೇಶದ ಸಂಪನ್ಮೂಲಗಳನ್ನು ಮಾರಿ ಕಿಕ್ ಬ್ಯಾಕ್ ಪಡೆದಿತ್ತು: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 25, 2021 | 5:20 PM

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸೋಮವಾರ ರಾಷ್ಟ್ರೀಯ ನಗದೀಕರಣ ಯೋಜನೆಯನ್ನು(National Monetisation Pipeline)  ಘೋಷಿಸಿದ್ದು ಕಾಂಗ್ರೆಸ್‌ ನೇತಾರ ರಾಹುಲ್ ಮಂಗಳವಾರ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ (ರಾಹುಲ್ ಗಾಂಧಿ) ಹಣ ಗಳಿಕೆ ಎಂದರೆ ಏನು ಎಂದು ಅರ್ಥವಾಗಿದೆಯೇ? ದೇಶದ ಸಂಪನ್ಮೂಲಗಳನ್ನು ಮಾರಿದ್ದು ಅದರಲ್ಲಿ ಕಿಕ್ ಬ್ಯಾಕ್ ಪಡೆದದ್ದು ಕಾಂಗ್ರೆಸ್ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ರಾಷ್ಟ್ರೀಯ ನಗದೀಕರಣ ಯೋಜನೆಯಡಿಯಲ್ಲಿ 25 ವಿಮಾನ ನಿಲ್ದಾಣಗಳು, 40 ರೈಲ್ವೆ ನಿಲ್ದಾಣಗಳು ಮತ್ತು 15 ರೈಲ್ವೇ ಕ್ರೀಡಾಂಗಣಗಳು, ಇತರ ಸಂಸ್ಥೆಗಳಳ ನಡುವೆ, ಖಾಸಗಿ ಹೂಡಿಕೆಗೆ ಗುರುತಿಸಲಾಗಿದೆ.

ರಾಷ್ಟ್ರೀಯ ನಗದೀಕರಣ ಯೋಜನೆ ಬಗ್ಗೆ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ ರಾಹುಲ್ ಗಾಂಧಿ ಇದು ಪ್ರಧಾನಿ ನರೇಂದ್ರ ಮೋದಿಯವರಿಗೆ 70 ವರ್ಷಗಳ ಸಾರ್ವಜನಿಕ ಹಣದಿಂದ ನಿರ್ಮಿಸಿದ ದೇಶದ ಕಿರೀಟ ಆಭರಣಗಳನ್ನು ತಮ್ಮ ಕೈಗಾರಿಕೋದ್ಯಮಿ ಮಿತ್ರರಿಗೆ ಮಾರಾಟ ಮಾಡಲು ಸಹಾಯ ಮಾಡಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಯಾವುದೇ ಅಭಿವೃದ್ಧಿಯನ್ನು ತಂದಿಲ್ಲ ಎಂಬ ಬಿಜೆಪಿ ಆರೋಪವನ್ನು ಕಾಂಗ್ರೆಸ್ ಸೂಚಿಸಿದೆ. ಖಾಸಗೀಕರಣದ ಪಟ್ಟಿಯು ಸತತ ಕಾಂಗ್ರೆಸ್ ಸರ್ಕಾರಗಳು ನಿರ್ಮಿಸಿದ ಸ್ವತ್ತುಗಳಾಗಿದ್ದು, ಬಿಜೆಪಿ ಈಗ ಅದನ್ನು ಆರ್ಥಿಕತೆಯ ತಮ್ಮ ದುರಾಡಳಿತವನ್ನು ಮುಚ್ಚಿಡಲು ಮಾರಾಟ ಮಾಡುತ್ತಿದೆ ಎಂದು ಪಕ್ಷ ಹೇಳಿದೆ.

ಕಾಂಗ್ರೆಸ್  ಜತೆಗೆ  ಹಲವಾರು ವಿರೋಧ ಪಕ್ಷಗಳು ಕೂಡ ಸೋಮವಾರದಿಂದ ಕೇಂದ್ರ ವಿರುದ್ಧ ಟೀಕಾಪ್ರಹಾರ ಮಾಡಿದೆ.

ತೃಣಮೂಲ ಕಾಂಗ್ರೆಸ್ ಇದನ್ನು ಅಪಾಯಕಾರಿ ಬಿಡ್ ಎಂದು ಕರೆದಿದೆ. ಎನ್‌ಎಂಪಿ ಅಭೂತಪೂರ್ವ ಜನವಿರೋಧಿ ಕ್ರಮವಾಗಿದ್ದು, ಇದು 2019 ರ ಲೋಕಸಭಾ ಚುನಾವಣೆಯ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಪಕ್ಷದ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಸರ್ಕಾರಿ ಉದ್ಯೋಗಗಳನ್ನು ಮೊಟಕುಗೊಳಿಸುವುದು “ಕೆಟ್ಟ ಯೋಜನೆ”. ಇದು ಜನರು ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

“70 ವರ್ಷಗಳ ಸ್ವಾತಂತ್ರ್ಯದಲ್ಲಿ, ಸಂಸದರ ನೇತೃತ್ವದ (ಅಮೇಠಿ) ಜಿಲ್ಲೆಗೆ ಒಂದು ಜಿಲ್ಲಾ ಆಸ್ಪತ್ರೆಯೂ ಸಿಗಲಿಲ್ಲ” ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.  2019 ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿಯನ್ನು ಕುಟುಂಬದ ಚುನಾವಣಾ ಕ್ಷೇತ್ರ ಅಮೇಠಿಯಿಂದ ಹೊರಹಾಕಿದರು. “ಅವರ ಸಮಸ್ಯೆ ಎಂದರೆ ಈ ಬಂಡವಾಳ ಹೂಡಿಕೆಯಿಂದ 6 ಲಕ್ಷ ಕೋಟಿ ರೂಪಾಯಿಗಳು ಬರುತ್ತವೆ. ಅದಕ್ಕಾಗಿಯೇ ಅವರು ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಕಾಂಗ್ರೆಸ್ ಅನ್ನು “ನಿಷ್ಕ್ರಿಯ ಆಸ್ತಿ” ಎಂದು ಹೇಳಿದ್ದಾರೆ. ಅದು ಯಾವುದೇ ಮೌಲ್ಯವನ್ನು ಹೊಂದಿಲ್ಲ. ಕಾಂಗ್ರೆಸ್‌ಗೆ ಗುಡ್ ಲಕ್ ಮತ್ತು ಬೇಗ ಗುಣಮುಖರಾಗಿ ಎಂದಷ್ಟೇ ಹೇಳಬಲ್ಲೆ ಎಂದಿದ್ದಾರೆ.

ಇದನ್ನೂ ಓದಿ: ದೇಶದ ಬೆಲೆಬಾಳುವ ವಸ್ತುಗಳನ್ನು ಪ್ರಧಾನಿ ಮೋದಿ ಮಾರುತ್ತಿದ್ದಾರೆ: ರಾಹುಲ್ ಗಾಂಧಿ

ಇದನ್ನೂ ಓದಿ: ಮೃತದೇಹದೊಂದಿಗೂ ಸೆಕ್ಸ್ ಮಾಡಿದ ತಾಲಿಬಾನಿಗಳು; ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಬಂದ ಮಹಿಳೆ ಹೇಳಿದ ಆಘಾತಕಾರಿ ಸಂಗತಿ

(Congress that sold the country’s resources and made kickbacks in it Nirmala Sitharaman Hits Back Rahul Gandhi)

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್