Ram Dhun: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಗುಜರಾತ್​ನಲ್ಲಿ ವಿಶೇಷ ಕಾರ್ಯಕ್ರಮ; 7100 ಹಳ್ಳಿಗಳಲ್ಲಿ ನಡೆಯಲಿದೆ ರಾಮ್​ ಧುನ್​

ಸೆಪ್ಟೆಂಬರ್​ 17ರಂದು ಸಂಜೆ 7ಗಂಟೆಗೆ ಗುಜರಾತ್​ನ ಸುಮಾರು 7100 ಹಳ್ಳಿಗಳಲ್ಲಿ ರಾಮ್​ ಧುನ್​ ಕಾರ್ಯಕ್ರಮ ನಡೆಯಿಲಿದೆ ಎಂದು ಬಿಜೆಪಿ ಗುಜರಾತ್​ ರಾಜ್ಯಾಧ್ಯಕ್ಷ ಸಿ.ಆರ್​.ಪಾಟೀಲ್​ ಹೇಳಿದ್ದಾರೆ.

Ram Dhun: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಗುಜರಾತ್​ನಲ್ಲಿ ವಿಶೇಷ ಕಾರ್ಯಕ್ರಮ; 7100 ಹಳ್ಳಿಗಳಲ್ಲಿ ನಡೆಯಲಿದೆ ರಾಮ್​ ಧುನ್​
ಪ್ರಧಾನಿ ನರೇಂದ್ರ ಮೋದಿ
TV9kannada Web Team

| Edited By: Lakshmi Hegde

Aug 25, 2021 | 6:09 PM

ಈ ಬಾರಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಜನ್ಮದಿನದ ಹಿನ್ನೆಲೆಯಲ್ಲಿ ಗುಜರಾತ್​ ಬಿಜೆಪಿ ಒಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಸೆಪ್ಟೆಂಬರ್​ 17ರಂದು ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ಆ ದಿನ ಗುಜರಾತ್ (Gujarat)​ನ ಸುಮಾರು 7100 ಹಳ್ಳಿಗಳಲ್ಲಿ ರಾಮ್​ ಧುನ್​ ಕಾರ್ಯಕ್ರಮ (Ram Dhun Programmes) ನಡೆಯಲಿದೆ ಎಂದು ಬಿಜೆಪಿ ಗುಜರಾತ್​ ರಾಜ್ಯಾಧ್ಯಕ್ಷ ಸಿ.ಆರ್​.ಪಾಟೀಲ್​ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ಸಿ.ಆರ್​.ಪಾಟೀಲ್​, ಈ ರಾಮ್​ ಧುನ್​ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್​ 17ರಂದು ಸಂಜೆ 7ಗಂಟೆಗೆ ಗುಜರಾತ್​ನ ಸುಮಾರು 7100 ಹಳ್ಳಿಗಳಲ್ಲಿ ರಾಮ್​ ಧುನ್​ ಕಾರ್ಯಕ್ರಮ ನಡೆಯಿಲಿದೆ. ಪ್ರತಿ ಬೂತ್​​ನಲ್ಲಿ ಜನರು ಹೆಚ್ಚೆಚ್ಚು ನಮೋ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು ಮತ್ತು ಪ್ರಧಾನಮಂತ್ರಿ ವಿಮಾ ಸುರಕ್ಷಾ ಯೋಜನೆಗೆ ಸೇರ್ಪಡೆಯಾಗುವಂತೆ ಮಾಡುವ ಉದ್ದೇಶ ಈ ರಾಮ್​ ಧುನ್​ ಕಾರ್ಯಕ್ರಮದ್ದು. ಅದರಂತೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಕನಿಷ್ಠ 50 ಮಂದಿ ಫೋನ್​​ನಲ್ಲಿ ನಮೋ ಆ್ಯಪ್​ ಡೌನ್​ಲೋಡ್ ಮಾಡಿಕೊಳ್ಳುವಂತೆ ಮಾಡಬೇಕು ಮತ್ತು ಕನಿಷ್ಠ 10 ಮಂದಿಯನ್ನಾದರೂ ವಿಮಾ ಸುರಕ್ಷಾ ಯೋಜನೆಗೆ ಸೇರ್ಪಡೆಗೊಳಿಸಬೇಕು ಎಂದು ಹೇಳಲಾಗಿದೆ. ಇದು ಪ್ರತಿ ಬೂತ್​​ನಲ್ಲಿಯೂ ನಡೆಯಬೇಕು ಎಂದು ಸಿ.ಆರ್.ಪಾಟೀಲ್​ ಹೇಳಿದ್ದಾರೆ.

ಈ ಬಾರಿ 71ರ ಸಂಭ್ರಮ ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟಿದ್ದು ಸೆಪ್ಟೆಂಬರ್​ 17, 1950ರಂದು ವಡೋದರಾದಲ್ಲಿ. 1972ರಲ್ಲಿ ಆರ್​ಎಸ್​ಎಸ್​ ಸೇರುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ನಂತರ 1987ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದರು ಮತ್ತು 1998ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರು. 2001ರಲ್ಲಿ ಮೊದಲ ಬಾರಿಗೆ ಗುಜರಾತ್​ ಮುಖ್ಯಮಂತ್ರಿಯಾದ ಅವರು, ನಂತರ ಮೂರು ಅವಧಿಗೆ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೋದಿಯವರೇ ಪ್ರಧಾನಿ ಅಭ್ಯರ್ಥಿ ಎಂದು 2013ರಲ್ಲಿ ಬಿಜೆಪಿ ಘೋಷಿಸಿತ್ತು. ಅದರಂತೆ 2014ರಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ರಧಾನಿ ಹುದ್ದೆಗೆ ಏರಿದ ನರೇಂದ್ರ ಮೋದಿಯವರು ಇದೀಗ 2019ರಲ್ಲೂ ಮತ್ತೆ ಪ್ರಧಾನಿ ಗದ್ದುಗೆಗೆ ಏರಿದ್ದಾರೆ. ಈ ಬಾರಿ 71ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನಮ್ಮ ಕನ್ನಡದ ಹುಡುಗ ಯಶ್ ಅಫಘಾನಿಸ್ತಾನದ ಪಂಜಶೀರ್ ಯೋಧರಿಗೂ ಪ್ರೇರಣೆಯಾಗಿದ್ದಾರೆಯೇ?

ಕಾಂಗ್ರೆಸ್ ದೇಶದ ಸಂಪನ್ಮೂಲಗಳನ್ನು ಮಾರಿ ಕಿಕ್ ಬ್ಯಾಕ್ ಪಡೆದಿತ್ತು: ನಿರ್ಮಲಾ ಸೀತಾರಾಮನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada