ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಬೆಂಗಾವಲು ಪೊಲೀಸ್ ಜೀಪಿಗೆ ಆಂಬ್ಯುಲೆನ್ಸ್ ಡಿಕ್ಕಿ, 6 ಮಂದಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Oct 14, 2022 | 3:55 PM

ಬೆಂಗಾವಲು ಪಡೆಯಲ್ಲಿದ್ದ ಎಲ್ಲಾ ಕಾರುಗಳು ಇದ್ದಕ್ಕಿದ್ದಂತೆ ತಮ್ಮ ವೇಗವನ್ನು ಕಡಿಮೆಗೊಳಿಸಿದವು. ಆದರೆ ಆಂಬ್ಯುಲೆನ್ಸ್ ಚಾಲಕನಿಗೆ  ನಿಯಂತ್ರಣ ಸಾಧ್ಯವಾಗಲಿಲ್ಲ.ಅದು ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದಿದೆ

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಬೆಂಗಾವಲು ಪೊಲೀಸ್ ಜೀಪಿಗೆ ಆಂಬ್ಯುಲೆನ್ಸ್ ಡಿಕ್ಕಿ, 6 ಮಂದಿಗೆ ಗಾಯ
ಪೊಲೀಸ್ ಜೀಪ್
Follow us on

ಲಖನೌ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ (Brajesh Pathak) ಅವರ ಬೆಂಗಾವಲು ಪಡೆಯಲ್ಲಿದ್ದ ಪೊಲೀಸ್ ಜೀಪಿಗೆ ಜತೆಯಲ್ಲಿ ಸಾಗುತ್ತಿದ್ದ ಆಂಬ್ಯುಲೆನ್ಸ್  (ambulance)ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪೊಲೀಸರು ಹಾಗೂ ಇಬ್ಬರು ಆಂಬ್ಯುಲೆನ್ಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ಸೀತಾಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ  ಪೊಲೀಸ್ ಜೀಪ್ ರಸ್ತೆಯ ಇನ್ನೊಂದು ಬದಿಗೆ ಎಸೆಯಲ್ಪಟ್ಟಿತು. ಸೀತಾಪುರ-ಖೇರಿ ರಸ್ತೆಯ ಕೊತ್ವಾಲಿ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದಾಗ ಬ್ರಜೇಶ್ ಪಾಠಕ್ ಅವರ ತಂಡ ಲಖೀಂಪುರದ ಗೋಲಾ ಗೋಕರ್ಣನಾಥ ಖೇರಿಗೆ ಪ್ರವಾಹ ತಪಾಸಣೆಗೆ ಹೋಗುತ್ತಿತ್ತು ಎಂದು ಪೊಲೀಸ್ ಸರ್ಕಲ್ ಅಧಿಕಾರಿ ಸದರ್, ಪ್ರವೀಣ್ ಕುಮಾರ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರಿದಿ ಮಾಡಿದೆ. ಪೊಲೀಸರು ಮತ್ತು ವೈದ್ಯಾಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಬೆಂಗಾವಲು ಪಡೆಯಲ್ಲಿದ್ದ ಎಲ್ಲಾ ಕಾರುಗಳು ಇದ್ದಕ್ಕಿದ್ದಂತೆ ತಮ್ಮ ವೇಗವನ್ನು ಕಡಿಮೆಗೊಳಿಸಿದವು. ಆದರೆ ಆಂಬ್ಯುಲೆನ್ಸ್ ಚಾಲಕನಿಗೆ  ನಿಯಂತ್ರಣ ಸಾಧ್ಯವಾಗಲಿಲ್ಲ.ಅದು ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದಿದೆ” ಎಂದು ಕುಮಾರ್ ಹೇಳಿದ್ದಾರೆ.

Published On - 2:30 pm, Fri, 14 October 22