Crime News: ಪ್ರೇಯಸಿಯನ್ನು ರೈಲಿನೆದುರು ತಳ್ಳಿ ಕೊಂದ ಯುವಕ; ಮಗಳ ಸಾವಿನ ಸುದ್ದಿ ಕೇಳಿ ತಂದೆ ಆತ್ಮಹತ್ಯೆ!
ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ವಿದ್ಯಾರ್ಥಿನಿಯಾಗಿದ್ದ ಸತ್ಯ ಪ್ರಿಯಾ ಅವರನ್ನು ಅಕ್ಟೋಬರ್ 13ರಂದು ಚೆನ್ನೈನ ಸೇಂಟ್ ಥಾಮಸ್ ಮೌಂಟ್ ನಿಲ್ದಾಣದಲ್ಲಿ ಚಲಿಸುವ ರೈಲಿನ ಮುಂದೆ ತಳ್ಳಿ ಸತೀಶ್ ಎಂಬಾತ ಕೊಂದಿದ್ದ.
ಚೆನ್ನೈ: ಕೆಲವೇ ಗಂಟೆಗಳಲ್ಲಿ ಚೆನ್ನೈನ ಕುಟುಂಬವೊಂದಕ್ಕೆ ಎರಡು ದೊಡ್ಡ ಆಘಾತ ಎದುರಾಗಿದೆ. ಯುವತಿಯೊಬ್ಬಳನ್ನು ಚಲಿಸುತ್ತಿರುವ ರೈಲಿನ ಎದುರು ಕೊಲ್ಲಲಾಗಿತ್ತು. ತನ್ನ ಮಗಳು ಸತ್ಯ ಪ್ರಿಯಾ ಸಾವನ್ನಪ್ಪಿದ ಸುದ್ದಿ ತಿಳಿದ ಕೂಡಲೇ ಆಕೆಯ ತಂದೆ ಮಾಣಿಕಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಣಿಕಮ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಇಂದು ಮುಂಜಾನೆ ಅವರು ನಿಧನರಾಗಿದ್ದಾರೆ.
ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ವಿದ್ಯಾರ್ಥಿನಿಯಾಗಿದ್ದ ಸತ್ಯ ಪ್ರಿಯಾ ಅವರನ್ನು ಅಕ್ಟೋಬರ್ 13ರಂದು ಚೆನ್ನೈನ ಸೇಂಟ್ ಥಾಮಸ್ ಮೌಂಟ್ ನಿಲ್ದಾಣದಲ್ಲಿ ಚಲಿಸುವ ರೈಲಿನ ಮುಂದೆ ತಳ್ಳಿ ಸತೀಶ್ ಎಂಬಾತ ಕೊಂದಿದ್ದ. ಪೊಲೀಸ್ ಮೂಲಗಳ ಪ್ರಕಾರ, 23 ವರ್ಷದ ಸತೀಶ್ ಆಕೆಗೆ ಪರಿಚಿತನಾಗಿದ್ದು, ಇಡೀ ವರ್ಷ ಸತ್ಯಳನ್ನು ಹಿಂಬಾಲಿಸುತ್ತಿದ್ದ. ಸತೀಶ್ ಆಡಂಬಕ್ಕಂ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ ನಿವೃತ್ತ ವಿಶೇಷ ಸಬ್ ಇನ್ಸ್‌ಪೆಕ್ಟರ್ (ಎಸ್‌ಎಸ್‌ಐ) ಅವರ ಮಗ ಎಂಬುದು ಇನ್ನೂ ಆತಂಕಕಾರಿ ಸಂಗತಿ. ಸತ್ಯಾ ಅವರ ತಾಯಿ ಅದೇ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದರು. ಸತ್ಯ ಮತ್ತು ಸತೀಶ್ ಇಬ್ಬರೂ ಗಿಂಡಿಯ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಮೂಲಗಳ ಪ್ರಕಾರ, ಸತೀಶ್‌ನ ನಿರಂತರ ಕಿರುಕುಳದಿಂದ 2 ಬಾರಿ ಮಾಂಬಲಂ ಮತ್ತು ಸೇಂಟ್ ಥಾಮಸ್ ಮೌಂಟ್ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದ್ದರು. ಸತ್ಯ ಮತ್ತು ಸತೀಶ್ ಇಬ್ಬರ ಪೋಷಕರೂ ಪೊಲೀಸ್ ಪಡೆಯಲ್ಲಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಅವರಿಬ್ಬರೂ ರಾಜಿ ಮಾಡಿಕೊಂಡಿದ್ದರು. ಆದರೂ ಸತೀಶನ ಕಿರುಕುಳ ನಿಲ್ಲಲಿಲ್ಲ. ಸತೀಶ್ ಅವರು ಸತ್ಯಾ ಹೋದಲ್ಲೆಲ್ಲಾ ಆಕೆಯನ್ನು ಹಿಂಬಾಲಿಸುತ್ತಿದ್ದ. ಕೊನೆಗೆ ಅಕ್ಟೋಬರ್ 13ರಂದು ಸತೀಶ್ ಅವಳನ್ನು ಸೇಂಟ್ ಥಾಮಸ್ ಮೌಂಟ್ ಸ್ಟೇಷನ್‌ಗೆ ಕರೆಸಿಕೊಂಡು ಜಗಳವಾಡಿದ್ದ. ರೈಲು ಅವಳನ್ನು ರೈಲು ಹಳಿಗಳ ಮೇಲೆ ತಳ್ಳಿ ಕೊಂದಿದ್ದ.
ಇದನ್ನೂ ಓದಿ: ಮಂಡ್ಯ: ಬಾಲಕಿಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್; ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಸಾಬೀತು
ಸತ್ಯಾಳ ದೇಹವು ರೈಲಿನ ಚಕ್ರದ ಅಡಿಯಲ್ಲಿ ಸಿಲುಕಿ, ಅವಳು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ನಂತರ ಸತೀಶ್ ನಿಲ್ದಾಣದಿಂದ ಓಡಿಹೋಗಿದ್ದ. ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸತ್ಯಾಳ ಮೃತದೇಹವನ್ನು ಹಳಿಯಿಂದ ಹೊರತೆಗೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆರೋಪಿಯ ಗುರುತು ಪತ್ತೆ ಹಚ್ಚಲು ಪೊಲೀಸರು ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದುಕೊಂಡಿದ್ದಾರೆ. ಶುಕ್ರವಾರ ಮುಂಜಾನೆ ಸತೀಶ್ನನ್ನು ಬಂಧಿಸಲಾಗಿತ್ತು.
ಸತ್ಯಾ ನೀಡಿದ್ದ ದೂರುಗಳನ್ನು ನಿರ್ಲಕ್ಷಿಸದಿದ್ದರೆ ಇಂತಹ ದುರಂತವನ್ನು ತಪ್ಪಿಸಬಹುದಿತ್ತು ಎಂದು ಆಕೆಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ತನ್ನ ಮಗಳು ಕೊಲೆಯಾದ ಸುದ್ದಿ ಕೇಳಿ ಆಕೆಯ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Fri, 14 October 22