Amarnath Yatra: ಅಮರನಾಥ ಯಾತ್ರೆಗೆ ಹೈ ಅಲರ್ಟ್; ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯಿತು ಉನ್ನತ ಮಟ್ಟದ ಸಭೆ

|

Updated on: Jun 09, 2023 | 8:08 PM

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಂಚು ಹೂಡುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಮಧ್ಯೆ ಯಾತ್ರೆಯ ವ್ಯವಸ್ಥೆಗಳ ಮೇಲೆಯೂ ಸರ್ಕಾರ ಗಮನಹರಿಸಿದೆ.

Amarnath Yatra: ಅಮರನಾಥ ಯಾತ್ರೆಗೆ ಹೈ ಅಲರ್ಟ್; ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯಿತು ಉನ್ನತ ಮಟ್ಟದ ಸಭೆ
ಅಮಿತ್ ಶಾ
Follow us on

ನವದೆಹಲಿ: ಜುಲೈ 1 ರಂದು ಆರಂಭಗೊಂಡು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿರುವ 62 ದಿನಗಳ ಅಮರನಾಥ ಯಾತ್ರೆಯ (Amarnath Yatra) ಸಿದ್ಧತೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ , ಗುಪ್ತಚರ ದಳದ ಮುಖ್ಯಸ್ಥ ತಪನ್ ದೇಕಾ, ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಉಪೇಂದ್ರ ದ್ವಿವೇದಿ ಮತ್ತು ಸಿಆರ್‌ಪಿಎಫ್‌ನ ಡೈರೆಕ್ಟರ್ ಜನರಲ್ ಎಸ್‌ಎಲ್ ಥಾಸೆನ್ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಇತ್ತೀಚೆಗೆ ಜಿ20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆಯು ಯಶಸ್ವಿಯಾಗಿ ನೆರವೇರಿತ್ತು. ಶೃಂಗಸಭೆ ವೇಳೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂಬ ವದಂತಿಗಳೂ ಇದ್ದವು. ಇವೆಲ್ಲದರ ನಡುವೆ ಸುಸೂತ್ರವಾಗಿ ಸಭೆ ಆಯೋಜಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿತ್ತು. ಇದೀಗ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರು ಹೊಂಚುಹಾಕುತ್ತಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಂಚು ಹೂಡುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಮಧ್ಯೆ ಯಾತ್ರೆಯ ವ್ಯವಸ್ಥೆಗಳ ಮೇಲೆಯೂ ಸರ್ಕಾರ ಗಮನಹರಿಸಿದೆ.

ಇದನ್ನೂ ಓದಿ: Amarnath Yatra 2023: ಜುಲೈ 1 ರಿಂದ ಅಮರನಾಥ ಯಾತ್ರೆ ಪ್ರಾರಂಭ

ದಕ್ಷಿಣ ಕಾಶ್ಮೀರದಲ್ಲಿ, ಸುಮಾರು 3,880 ಮೀಟರ್ ಎತ್ತರದಲ್ಲಿರುವ ಅಮರನಾಥನ ಪವಿತ್ರ ಗುಹಾ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಜುಲೈ 1 ರಂದು ಪ್ರಾರಂಭವಾಗಲಿದೆ ಮತ್ತು ಆಗಸ್ಟ್ 31 ರವರೆಗೆ ನಡೆಯಲಿದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಅಮರನಾಥನ ದರ್ಶನ ಪಡೆಯುತ್ತಾರೆ.

ಕಳೆದ ವರ್ಷ ಅಮರನಾಥ ಗುಹೆಯ ಬಳಿ ಮೇಘ ಸ್ಫೋಟದಿಂದಾಗಿ ಪ್ರವಾಹ ಉಂಟಾಗಿ, ಹತ್ತಾರು ಮಂದಿ ಮೃತಪಟ್ಟಿದ್ದರು. ಅನೇಕ ಯಾತ್ರಾರ್ಥಿಗಳು ತೊಂದರೆ ಅನುಭವಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Fri, 9 June 23