Manipur violence: ಶಂಕಿತ ಬಂಡುಕೋರರಿಂದ ಗುಂಡಿನ ದಾಳಿ, ಮಣಿಪುರದಲ್ಲಿ ಮೂರು ಸಾವು
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ವರದಿ ಆಗಿದೆ. ಶುಕ್ರವಾರ ಶಂಕಿತ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 3 ಮಂದಿ ಸಾವಿಗೀಡಾಗಿದ್ದು ಇಬ್ಬರಿಗೆ ಗಾಯಗಳಾಗಿವೆ.
ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ (Manipur violence) ಮಹಿಳೆ ಸೇರಿದಂತೆ ಕನಿಷ್ಠ ಮೂರು ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ಖೋಕೆನ್ ಗ್ರಾಮದಲ್ಲಿ ಶಂಕಿತ ಬಂಡುಕೋರರು ನಡೆಸಿದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಖೋಕೆನ್ ಗ್ರಾಮವು (Khoken village )ಕಾಂಪೋಕ್ಪಿ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ನಡುವಿನ ಗಡಿಯಲ್ಲಿದೆ. ಶಂಕಿತ ಉಗ್ರರು ಮತ್ತು ಸಂತ್ರಸ್ತರು ವಿವಿಧ ಸಮುದಾಯಗಳಿಗೆ ಸೇರಿದವರು ಎಂದು ಹೇಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ದಾಳಿಕೋರರು ಯೋಧರ ಸೋಗಿನಲ್ಲಿ ಬಂದಿದ್ದು, ಮಿಲಿಟರಿ ಬಳಸುವ ವಾಹನಗಳನ್ನು ಹೋಲುವ ವಾಹನಗಳನ್ನು ಚಲಾಯಿಸಿದ್ದರು. ಶುಕ್ರವಾರ ಮುಂಜಾನೆ ಖೋಕನ್ ಗ್ರಾಮಕ್ಕೆ ತೆರಳಿದ ಅವರು ತಮ್ಮ ಸ್ವಯಂಚಾಲಿತ ರೈಫಲ್‌ಗಳಿಂದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದಾರೆ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ದುಷ್ಕರ್ಮಿಗಳ ವಿರುದ್ಧ ತ್ವರಿತ ಕ್ರಮಕ್ಕೆ ಒತ್ತಾಯಿಸಿದೆ.
ಈ ಘಟನೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ ಶಾಂತಿ ಪ್ರಕ್ರಿಯೆಯನ್ನು ಉಲ್ಲಂಘಿಸಿದೆ. ದಂಗೆಕೋರರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದು ITLF ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಯ ಸಮಯದಲ್ಲಿ ಗ್ರಾಮದ ನಿವಾಸಿಗಳ ಸಮಯೋಚಿತ ಉಪಸ್ಥಿತಿಯು ಸಂಭವನೀಯ ರಕ್ತಪಾತವನ್ನು ತಪ್ಪಿಸಿತು ಎಂದು ಹೇಳಿಕೊಳಿದ್ದಾರೆ. ಈ, ಏಕೆಂದರೆ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಇದ್ದರು.
ಇದನ್ನೂ ಓದಿ:Manipur Violence: ಮಣಿಪುರ ಹಿಂಸಾಚಾರ ತನಿಖೆಗೆ ಸಿಬಿಐ ವಿಶೇಷ ತಂಡ ರಚನೆ
ಡೊಮ್ಖೋಹೋಯ್ ಎಂಬ ವ್ಯಕ್ತಿ ಮುಂಜಾನೆ ಪ್ರಾರ್ಥನೆಯಲ್ಲಿದ್ದಾಗ ಚರ್ಚ್‌ನೊಳಗೆ ಗುಂಡಿಗೆ ಬಲಿಯಾಗಿದ್ದಾರೆ ಎಂದು ITLF ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳ ಹೆಚ್ಚುವರಿ ನಿಯೋಜನೆ ಮಾಡಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Fri, 9 June 23