ಕೊರೊನಾ ನಡುವೆ ಚುನಾವಣಾ ಮೋಡ್‌ಗೆ ಜಾರಿದ ಬಿಜೆಪಿ, ಱಲಿ ನಡೆಸಲು ಶಾ ಹೈಟೆಕ್ ಪ್ಲಾನ್
ಬಿಹಾರದಲ್ಲಿ ಒಂದ್ಕಡೆ ಡೆಡ್ಲಿ ಕೊರೊನಾ ವೇಗವಾಗಿ ಹಬ್ಬುತ್ತಿದ್ದರೆ, ಮತ್ತೊಂದ್ಕಡೆ ಎಲೆಕ್ಷನ್ ಡೇಟ್ ಕೂಡ ಅಷ್ಟೇ ಸ್ಪೀಡ್ನಲ್ಲಿ ಬರ್ತಿದೆ. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಬಿಹಾರ ವಿಧಾನಸಭೆಯ ಅವಧಿ ಮುಗಿಯಲಿದ್ದು, ಚುನಾವಣೆ ನಡೆಯುವ ನಿರೀಕ್ಷೆ ಇದೆ. ಇದನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಬಿಜೆಪಿ, ಆಧುನಿಕ ತಂತ್ರಜ್ಞಾನ ಬಳಸಿ ಱಲಿಗಳನ್ನ ನಡೆಸಲು ಮುಂದಾಗಿದೆ. ಹಾಗಾದ್ರೆ ಬಿಜೆಪಿ ಚಾಣಕ್ಯ ಅಮಿತ್ ಶಾ ಹೆಣೆದಿರುವ ತಂತ್ರವಾದ್ರೂ ಏನು? ಕೊರೊನಾ ನಿರೀಕ್ಷೆಗೂ ಮೀರಿದ ವೇಗವನ್ನು ಪಡೆದಿದೆ. ದೇಶದ ಉದ್ದಗಲಕ್ಕೂ ಕೊರೊನಾ ಸೋಂಕು ಬಲೆ ಹಾಕಿ ಕಾಯ್ತಿದೆ. ಈ ಬಲೆಯಲ್ಲಿ […]
ಬಿಹಾರದಲ್ಲಿ ಒಂದ್ಕಡೆ ಡೆಡ್ಲಿ ಕೊರೊನಾ ವೇಗವಾಗಿ ಹಬ್ಬುತ್ತಿದ್ದರೆ, ಮತ್ತೊಂದ್ಕಡೆ ಎಲೆಕ್ಷನ್ ಡೇಟ್ ಕೂಡ ಅಷ್ಟೇ ಸ್ಪೀಡ್ನಲ್ಲಿ ಬರ್ತಿದೆ. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಬಿಹಾರ ವಿಧಾನಸಭೆಯ ಅವಧಿ ಮುಗಿಯಲಿದ್ದು, ಚುನಾವಣೆ ನಡೆಯುವ ನಿರೀಕ್ಷೆ ಇದೆ. ಇದನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಬಿಜೆಪಿ, ಆಧುನಿಕ ತಂತ್ರಜ್ಞಾನ ಬಳಸಿ ಱಲಿಗಳನ್ನ ನಡೆಸಲು ಮುಂದಾಗಿದೆ. ಹಾಗಾದ್ರೆ ಬಿಜೆಪಿ ಚಾಣಕ್ಯ ಅಮಿತ್ ಶಾ ಹೆಣೆದಿರುವ ತಂತ್ರವಾದ್ರೂ ಏನು?
ಕೊರೊನಾ ನಿರೀಕ್ಷೆಗೂ ಮೀರಿದ ವೇಗವನ್ನು ಪಡೆದಿದೆ. ದೇಶದ ಉದ್ದಗಲಕ್ಕೂ ಕೊರೊನಾ ಸೋಂಕು ಬಲೆ ಹಾಕಿ ಕಾಯ್ತಿದೆ. ಈ ಬಲೆಯಲ್ಲಿ ಬೀಳೋರು ಯಾರು? ಮಿಸ್ ಆಗಿ ಬದುಕಿ ಉಳಿಯೋರು ಯಾರು ಅನ್ನೋ ಆತಂಕದ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಅಷ್ಟಕ್ಕೂ ಇಷ್ಟೆಲ್ಲಾ ಗೊಂದಲಗಳ ಮಧ್ಯೆ, ಬಿಹಾರ ರಾಜ್ಯದ ಪಾಡು ತೀರಾ ಹೀನಾಯವಾಗಿದೆ. ದೇಶದ ಮೂಲೆ ಮೂಲೆಯಲ್ಲಿ ನೆಲೆಸಿದ್ದ ಬಿಹಾರ ಮೂಲದ ಕಾರ್ಮಿಕರು, ಊರು ಸೇರಿದ್ದಾರೆ. ಹೀಗೆ ಊರು ಸೇರಿರುವ ಇವರಿಗೆ ಸೋಂಕಿನ ಭಯ ಕಾಡುತ್ತಿದೆ. ಆದ್ರೆ ಬಿಹಾರದಲ್ಲಿ ಬೇರೆಯದ್ದೇ ವಿಚಾರ ರಾಜಕೀಯ ನಾಯಕರ ನಿದ್ದೆಗೆಡಿಸಿದೆ.
ಱಲಿ ನಡೆಸಲು ‘ಚಾಣಕ್ಯ’ನ ಹೈಟೆಕ್ ಐಡಿಯಾ! ಅಂದಹಾಗೆ ಕೊರೊನಾ ಕಟ್ಟಿಹಾಕುವ ಉದ್ದೇಶದಿಂದ ಮಾರ್ಚ್ 24ರಿಂದ ಮೇ 31ರವರೆಗೂ ದೇಶದಲ್ಲಿ ಲಾಕ್ಡೌನ್ ಘೋಷಿಸಲಾಗಿತ್ತು. ಹೀಗಾಗಿ ಯಾವುದೇ ರಾಜಕೀಯ ಸಭೆ-ಸಮಾರಂಭಗಳು ನಡೆದಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಅನುಮತಿ ಸಿಕ್ಕಿರಲಿಲ್ಲ. ಆದ್ರೆ ಈಗ ಬಿಹಾರ ವಿಧಾನಸಭೆ ಮೇಲೆ ರಾಜಕೀಯ ನಾಯಕರ ಕಣ್ಣು ಬಿದ್ದಿದೆ.
ನಿತೀಶ್ ಕೋಟೆಗೆ ನುಗ್ಗಿ ಗೆಲುವಿನ ಕೇಕೆ ಹಾಕಲು ವಿಪಕ್ಷಗಳು ಹವಣಿಸುತ್ತಿದ್ರೆ, ಮತ್ತೆ ಎನ್ಡಿಎ ಬಾವುಟ ಹಾರಿಸಲು ಬಿಜೆಪಿ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರದ ಬಿಜೆಪಿ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲು ಶಾ ಱಲಿ ಆಯೋಜಿಸಿದ್ದಾರೆ. ಆದರೆ ಈ ಱಲಿ ಮಾಮೂಲಿ ಱಲಿಗಳಂತೆ ಇರಲ್ಲ. ಇದು ಸಂಪೂರ್ಣ ಡಿಜಿಟಲ್ ಆಗಿರಲಿದ್ದು ಅಮಿತ್ ಶಾ ಕಾರ್ಯಕರ್ತರನ್ನ ಹುರಿದುಂಬಿಸಲಿದ್ದಾರೆ.
ಬಿಹಾರ ಗೆಲ್ಲಲು ‘ಚಾಣಕ್ಯ’ ತಂತ್ರ! ಈಗಾಗಲೇ ಬಿಹಾರದಲ್ಲಿರುವ 60 ಸಾವಿರ ಬೂತ್ಗಳಲ್ಲಿ ಅಮಿತ್ ಶಾ ವರ್ಚುವಲ್ ಱಲಿಯ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಈಗಾಗ್ಲೇ ಹಾಲಿ ಸಿಎಂ ನಿತೀಶ್ ಕುಮಾರ್ ಹೆಸರು ಬಿಹಾರ ಮುಖ್ಯಮಂತ್ರಿ ಪಟ್ಟಕ್ಕೆ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಎನ್ಡಿಎ ಬಾವುಟ ಹಾರಿಸೋಕೆ ಶಾ ಚಾಣಕ್ಯ ತಂತ್ರವನ್ನು ಹೂಡಿದ್ದಾರೆ.
ಮತ್ತೊಂದ್ಕಡೆ ವಿವಿಧ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ಬಿಹಾರಕ್ಕೆ ಮರಳಿದ್ದಾರೆ. ಹೀಗೆ ವಾಪಸ್ ಬಂದವರಿಗೆ ಉದ್ಯೋಗದ ಭರವಸೆ ನೀಡಿ, ಮನವೊಲಿಕೆ ಮಾಡಲು ಸರ್ಕಸ್ ಮಾಡಬೇಕಿದೆ. ಈ ನಡುವೆ ವಿಪಕ್ಷಗಳ ತಂತ್ರಕ್ಕೆ ಅಮಿತ್ ಶಾ ಪ್ರತಿತಂತ್ರವನ್ನು ಹೂಡುತ್ತಿದ್ದಾರೆ. ಇಷ್ಟೆಲ್ಲಾ ಸ್ಟ್ರಾಟಜಿ ಬಿಹಾರದಲ್ಲಿ ಮತ್ತೆ ವರ್ಕೌಟ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಒಂದ್ಕಡೆ ವರ್ಚುವಲ್ ಱಲಿಗೆ ಬಿಜೆಪಿ ಭರದ ಸಿದ್ಧತೆ ನಡೆಸ್ತಿದ್ರೆ ವಿಪಕ್ಷಗಳು ಕಮಲ ಪಾಳಯದ ವಿರುದ್ಧ ಪ್ರತ್ಯಸ್ತ್ರ ಪ್ರಯೋಗಿಸಿವೆ. ಬಿಹಾರದಲ್ಲಿ ಸೊಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಾ ಇದ್ದು, ಇಂಥ ಹೊತ್ತಲ್ಲಿ ಚುನಾವಣೆ ಗಿಮಿಕ್ಗಳನ್ನ ಮಾಡಬೇಡಿ ಅಂತಾ ವಿಪಕ್ಷ ನಾಯಕರು ಹರಿಹಾಯುತ್ತಿದ್ದಾರೆ. ಅದ್ರಲ್ಲೂ ಬಿಜೆಪಿ ರಾಜಕೀಯ ಶತ್ರು ಆರ್ಜೆಡಿ, ಱಲಿ ಆಯೋಜನೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಒಟ್ನಲ್ಲಿ ಎಲ್ಲಾ ಅಡೆತಡೆಗಳನ್ನು ಬೇಧಿಸಿ ಇಂದು ಅಮಿತ್ ಶಾ ಅವರ ವರ್ಚುವಲ್ ಱಲಿ ನಡೆಯಲಿದ್ದು, ಎಷ್ಟರಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದನ್ನ ಕಾದು ನೋಡ್ಬೇಕು.
Published On - 7:05 am, Sun, 7 June 20