ಅಮಿತ್ ಶಾ ಭಾಷಣ ತಿರುಚಿದ ಪ್ರಕರಣ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್

|

Updated on: Apr 29, 2024 | 4:02 PM

ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಭಾಷಣವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಸಮನ್ಸ್ ನೀಡಿಲಾಗಿದೆ. ದೆಹಲಿ ಪೊಲೀಸರು ಈ ಸಮನ್ಸ್​​ ನೀಡಿದ್ದಾರೆ. ಮೀಸಲಾತಿ ತೆಗೆದು ಹಾಕಲಾಗುವುದು ಎಂದು ವಿಡಿಯೋವನ್ನು ತಿರುಚಲಾಗಿದೆ, ಗೃಹ ಸಚಿವ ಅಮಿತ್​​​​ ಶಾ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಅಮಿತ್ ಶಾ ಭಾಷಣ ತಿರುಚಿದ ಪ್ರಕರಣ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್
ರೇವಂತ್ ರೆಡ್ಡಿ
Follow us on

ದೆಹಲಿ, ಏ.29: ಅಮಿತ್​​ ಶಾ (AMit Shah) ಅವರು ಎಸಿ,ಎಸ್​​ಟಿ, ಒಬಿಸಿ ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಭಾಷಣವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ (Revanth Reddy) ಸಮನ್ಸ್ ನೀಡಿಲಾಗಿದೆ. ದೆಹಲಿ ಪೊಲೀಸರು ಈ ಸಮನ್ಸ್​​ ನೀಡಿದ್ದಾರೆ. ಮೀಸಲಾತಿ ತೆಗೆದು ಹಾಕಲಾಗುವುದು ಎಂದು ವಿಡಿಯೋವನ್ನು ತಿರುಚಲಾಗಿದೆ, ಗೃಹ ಸಚಿವ ಅಮಿತ್​​​​ ಶಾ ಅವರ ಹೇಳಿಕೆಯನ್ನು ತಿರುಚಿ ವಿಡಿಯೋ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ತನಿಖೆ ವಹಿಸಿಕೊಂಡ ದೆಹಲಿ ಪೊಲೀಸರು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್​​​ ನೀಡಲಾಗಿದೆ. ಮೇ 1ಕ್ಕೆ ವಿಚಾರಣೆಗೆ ಬರುವಂತೆ ದೆಹಲಿ ಪೊಲೀಸರು ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಹೇಳಿದ್ದಾರೆ. ಜೊತೆಗೆ ಅವರು ಬಳಸಿದ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ತರುವಂತೆ ತಿಳಿಸಿದ್ದಾರೆ. ಅಮಿತ್​​ ಶಾ ಅವರ ಭಾಷಣವನ್ನು ಎಡಿಟ್​​​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಕಾಂಗ್ರೆಸ್ ನಾಯಕರು ಸೇರಿದಂತೆ ಇನ್ನೂ ಐದು ಜನರಿಗೆ ದೆಹಲಿ ಪೊಲೀಸರು ಸಮನ್ಸ್ ನೀಡಲಿದ್ದಾರೆ.

ಗೃಹ ಸಚಿವಾಲಯ ಮತ್ತು ಬಿಜೆಪಿಯ ದೂರಿನ ಮೇರೆಗೆ ದೆಹಲಿ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದರು. ವಿಶೇಷ ಕೋಶವು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳು ಮತ್ತು ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಸಾರ್ವಜನಿಕ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಉದ್ದೇಶದಿಂದ ಕೆಲವೊಂದು ವಿಡಿಯೋಗಳನ್ನು ಎಡಿಟ್​​​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್​​ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತೆಲಂಗಾಣದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ‘ಅಸಂವಿಧಾನಿಕ’ ಮೀಸಲಾತಿಯನ್ನು ತೆಗೆದುಹಾಕುವ ಕುರಿತು ಅಮಿತ್​​​ ಶಾ ಅವರು ಮಾತನಾಡಿರುವ ಹಳೆಯ ಭಾಷಣವನ್ನು ತಿರುಚಿ, ಲೋಕಸಭೆ ಚುನಾವಣೆ ರ್ಯಾಲಿ ಅಮಿತ್​​ ಶಾ ಅವರು ಎಸಿ ಎಸ್​ಟಿ, ಒಬಿಸಿ ಮೀಸಲಾತಿಗಳನ್ನು ತೆಗೆದು ಹಾಕುತ್ತೇವೆ ಎಂದು ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಮಾಡಲಾಗಿದೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.

ಇದನ್ನೂ ಓದಿ: ಎಸ್​ಸಿ, ಎಸ್​ಟಿ, ಒಬಿಸಿ ಹಕ್ಕುಗಳನ್ನು ಕಾಂಗ್ರೆಸ್​ ಕಿತ್ತುಕೊಂಡಿದೆ: ಮೋದಿ

ಈ ವಿಡಿಯೋವನ್ನು ತೆಲಂಗಾಣ ಕಾಂಗ್ರೆಸ್​​ ಎಕ್ಸ್​​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಕಾಂಗ್ರೆಸ್​​​ನ ಅನೇಕ ನಾಯಕರು ಮರು ಹಂಚಿಕೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಹಲವು ಕಾಂಗ್ರೆಸ್ ನಾಯಕರು ಅದನ್ನು ಹಂಚಿಕೊಂಡಿದ್ದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದವರಿಗೆ ಮೀಸಲಾತಿ ಕೋಟಾಗಳನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ಸೇರಿದಂತೆ ಅನೇಕ ಕಾಂಗ್ರೆಸ್​​​ ನಾಯಕರಿಗೆ ದೆಹಲಿ ಪೊಲೀಸರು ಸಮನ್ಸ್​​ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:43 pm, Mon, 29 April 24