ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್(Amitabh Bachchan) ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈ ಬಗ್ಗೆ ಅಮಿತಾಭ್ ಅವರೇ ತಮ್ಮ ಅಧಿಕೃತ ಬ್ಲಾಗ್ನಲ್ಲಿ ದೃಢಪಡಿಸಿದ್ದಾರೆ. ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ..ಸರ್ಜರಿ..ಈಗೇನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಒಂದು ಲೈನ್ನಲ್ಲಿ, ಚಿಕ್ಕದಾಗಿ ಬರೆದುಕೊಂಡಿದ್ದಾರೆ. ಆದರೆ ಅವರಿಗೆ ಈಗಾಗಲೇ ಸರ್ಜರಿ ಆಗಿದೆಯಾ? ಮುಂದೆ ಆಗಲಿದೆಯಾ ಎಂಬ ಬಗ್ಗೆ ಖಚಿತಪಡಿಸಿಲ್ಲ. ಅಂದರೆ ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಬ್ಲಾಗ್ನಲ್ಲಿ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ತಮ್ಮ ಆರೋಗ್ಯದ ಬಗ್ಗೆ ಬ್ಲಾಗ್ನಲ್ಲಿಯೇ ವಿಸ್ತಾರ ಮಾಹಿತಿ ನೀಡುವ ಅಮಿತಾಭ್ ಬಚ್ಚನ್ ಕಳೆದ ವರ್ಷ ಕೊವಿಡ್-19 ಸೋಂಕಿಗೆ ಒಳಗಾಗಿ, ಅದರಿಂದ ಗುಣಮುಖರಾದ ಬಳಿಕ ತಮ್ಮ ಕೊರೊನಾ ಜರ್ನಿ ಹೇಗಿತ್ತು ಎಂಬ ಬಗ್ಗೆ ಬರೆದುಕೊಂಡಿದ್ದರು. ಇನ್ನು 2019ರಲ್ಲಿ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಮಿತಾಭ್ ಬಚ್ಚನ್ಗೆ 1982ರಿಂದಲೂ ಲಿವರ್ ಸಮಸ್ಯೆಯಿದ್ದು, ಶೇ.75ರಷ್ಟು ಕಾರ್ಯಕ್ಷಮತೆಯನ್ನು ಕಳೆದುಕೊಂಡುಬಿಟ್ಟಿದೆ. ಇದಾಗಿದ್ದು ಕೂಲಿ ಸಿನಿಮಾ ಶೂಟಿಂಗ್ ವೇಳೆ. ಆಗ ಒಂದು ಮಾರಣಾಂತಿಕ ಅಪಘಾತಕ್ಕೀಡಾಗಿದ್ದ ಬಿಗ್ ಬಿಗೆ ರಕ್ತ ಬೇಕಿತ್ತು. ಅಂದು ಅಮಿತಾಭ್ ಬಚ್ಚನ್ಗೆ ಯಾರ ರಕ್ತ ಸೇರಿಸಿದ್ದರೋ, ಆತನಿಗೆ ಹೆಪಟೈಟಿಸ್ ಬಿ ಇದ್ದ ಕಾರಣ, ಸೋಂಕು ಅಮಿತಾಭ್ಗೂ ತಗುಲಿತ್ತು. ಇದರಿಂದಾಗಿ ಅವರ ಲಿವರ್ಗೆ ತುಂಬ ಹಾನಿಯಾಗಿತ್ತು.
ಅಮಿತಾಭ್ ಬಚ್ಚನ್ ಅವರು ಮೇ ಡೇ (May Day) ಎಂಬ ಆ್ಯಕ್ಷನ್ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ನಟಿಸುತ್ತಿದ್ದು, ಅದರ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಸಿನಿಮಾ ಶೂಟಿಂಗ್ ಸೆಟ್ನಿಂದ ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದರು. ಆ ಫೋಟೋಗಳಲ್ಲಿ ಬಿಗ್ ಬಿ ತುಂಬ ಫಿಟ್ ಆಗಿ, ಆರೋಗ್ಯವಾಗಿಯೇ ಕಾಣಿಸುತ್ತಿದ್ದರು. ಹಾಗೇ ತಮ್ಮ ಮುಂದಿನ ಸಿನಿಮಾಗಳಾದ ಚೆಹ್ರೆ ಮತ್ತು ಝಂಡ್ ಚಿತ್ರಗಳ ಬಿಡುಗಡೆಯ ದಿನಾಂಕಗಳನ್ನೂ ತಿಳಿಸಿದ್ದರು. ಇದೀಗ ಮತ್ತೆ ಸರ್ಜರಿ, ಅನಾರೋಗ್ಯ ಎಂದು ಬ್ಲಾಗ್ನಲ್ಲಿ ಬರೆದುಕೊಂಡಿದ್ದನ್ನು ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಜರಿ ಆಗಿದೆಯೋ ಇಲ್ಲವೋ ಎಂಬುದು ದೃಢಪಡದಿದ್ದರೂ, ಅಭಿಮಾನಿಗಳು ಬಿಗ್ ಬಿ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಬೇಗನೇ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ನಾವೆಲ್ಲ ನಿಮ್ಮನ್ನು ಪ್ರೀತಿಸುತ್ತೇವೆ..ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದೂ ಅಭಿಮಾನಿಗಳು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಗೆದ್ದ ಅಮಿತಾಭ್ ಬಚ್ಚನ್, ಆಸ್ಪತ್ರೆಯಿಂದ ಡಿಸ್‌ಚಾರ್ಜ್
ಬಚ್ಚನ್ ಜತೆ ತೆರೆಹಂಚಿಕೊಳ್ಳಲಿದ್ದಾರೆ ರಶ್ಮಿಕಾ!
Published On - 11:39 am, Sun, 28 February 21