ಅಮೃತಾ ಫಡ್ನವಿಸ್​ಗೆ ಲಂಚ, ಬೆದರಿಕೆ ಪ್ರಕರಣ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್​ಗೆ ಲಂಚ ನೀಡಲು ಬಂದ ಆರೋಪದ ಮೇರೆಗೆ ಡಿಸೈನರ್ ಅನಿಕ್ಷಾ ಸಿಂಘಾನಿ ತಂದೆ ಅನಿಲ್ ಜೈಸಿಂಘಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಮೃತಾ ಫಡ್ನವಿಸ್​ಗೆ ಲಂಚ, ಬೆದರಿಕೆ ಪ್ರಕರಣ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ
ಅನಿಲ್ ಜೈಸಿಂಘಾನಿ
Image Credit source: Lokmat

Updated on: Mar 20, 2023 | 2:15 PM

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್​ಗೆ ಲಂಚ ನೀಡಲು ಬಂದ ಆರೋಪದ ಮೇರೆಗೆ ಡಿಸೈನರ್ ಅನಿಕ್ಷಾ ಸಿಂಘಾನಿ ತಂದೆ ಅನಿಲ್ ಜೈಸಿಂಘಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತಾ ಫಡ್ನವಿಸ್​ಗೆ ಡಿಸೈನ್ ಅನಿಕ್ಷಾ ಹಾಗೂ ಅವರ ತಂದೆ ಅನಿಲ್ ಜೈಸಿಂಘಾನಿ ಬೆದರಿಕೆ ಹಾಗೂ ಬ್ಲ್ಯಾಕ್​ಮೇಲ್ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಡಿಸೈನರ್ ಅನಿಕ್ಷಾ ಜೈಸಿಂಘಾನಿ ಮತ್ತು ಆಕೆಯ ತಂದೆ ಅನಿಲ್ ವಿರುದ್ಧ ಅಮೃತಾ ಫಡ್ನವಿಸ್ ಅವರು ಕಳೆದ ತಿಂಗಳು ಮಲಬಾರ್ ಹಿಲ್​ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಿಸಿದ್ದರು. ತನ್ನ ತಂದೆಯೊಂದಿಗೆ ಸೇರಿಕೊಂಡು ತನಗೆ ಬೆದರಿಕೆ ಹಾಕಿದ್ದಾರೆ, ಹಾಗೂ ನನ್ನ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಅಮೃತಾ ಆರೋಪಿಸಿದ್ದರು.ದೇವೇಂದ್ರ ಫಡ್ನವಿಸ್ ಕೂಡ ಈ ಕುರಿತು ಮಾಹಿತಿ ನೀಡಿದ್ದಾರೆ.

ಅನಿಕ್ಷಾ ಅವರು ತನ್ನ ತಂದೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಹಾಯ ಮಾಡುವಂತೆ 1 ಕೋಟಿ ರೂ ಆಮಿಷ ಒಡ್ಡಿದ್ದರು. ಬಳಿಕ ಒಂದೊಮ್ಮೆ ಸಹಾಯ ಮಾಡದಿದ್ದರೆ ದೇವೇಂದ್ರ ಫಡ್ನವಿಸ್​ ಅವರನ್ನು ಈ ವಿಚಾರದಲ್ಲಿ ಸಿಲುಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹಲವು ನಕಲಿ ಆಡಿಯೋ ಹಾಗೂ ವಿಡಿಯೋ ರೆಕಾರ್ಡಿಂಗ್​ ಕಳುಹಿಸಿ ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದ್ದರು ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: Amruta Fadnavis: ಡಿಸೈನರ್ ವಿರುದ್ಧ ಲಂಚ, ಬೆದರಿಕೆ ಪ್ರಕರಣ ದಾಖಲಿಸಿದ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ

ಅನಿಲ್ ಜೈಸಿಂಘಾನಿ ಉಲ್ಲಾಸನಗರ ನಿವಾಸಿ, ಇವರ ವಿರುದ್ಧ 5 ರಾಜ್ಯಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ, ಅನಿಲ್ ಬೆಟ್ಟಿಂಗ್ ಪ್ರಕರಣದಲ್ಲಿ ಮೂರು ಬಾರಿ ಬಂಧನಕ್ಕೊಳಗಾಗಿದ್ದರು. ಮೇ 11 ರಂದು 2019ರಲ್ಲಿ ಗೋವಾ ಪೊಲೀಸರು ಅನಿಲ್ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮಾಡಿದ್ದರು.

2015ರಲ್ಲಿ ಗುಜರಾತ್​ ಇಡಿ ಜೈಸಿಂಘಾನಿ ಮನೆ ಮೇಲೆ ಎರಡು ಭಾರಿ ದಾಳಿ ನಡೆಸಿತ್ತು. ಮುಂಬೈ ಪೊಲೀಸರು ಎರಡು ಬಾರಿ ಫೋರ್ಜರಿ ಪ್ರಕರಣ ದಾಖಲಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us