Earthquake: ಹೊಸ ವರ್ಷದ ಮೊದಲ ದಿನವೇ ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ ಸುತ್ತಮುತ್ತ ಭೂಕಂಪ

| Updated By: ಆಯೇಷಾ ಬಾನು

Updated on: Jan 01, 2023 | 8:31 AM

ರಿಕ್ಟರ್ ಮಾಪಕದಲ್ಲಿ 3.8ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಹರಿಯಾಣದ ಝಜ್ಜರ್​ನಲ್ಲಿ ಭೂಪಂಕದ ಕೇಂದ್ರ ಬಿಂದು, ಭೂಮಿಯಿಂದ 5 ಕಿಲೋ ಮೀಟರ್​ ಆಳದಲ್ಲಿ ಭೂಕಂಪದ ಅನುಭವ ಆಗಿದೆ.

Earthquake: ಹೊಸ ವರ್ಷದ ಮೊದಲ ದಿನವೇ ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ ಸುತ್ತಮುತ್ತ ಭೂಕಂಪ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ(New Year Celebration) ರಾಷ್ಟ್ರ ರಾಜಧಾನಿ ದೆಹಲಿ(Delhi) ಹಾಗೂ ಹರಿಯಾಣ(Haryana) ಸುತ್ತಮುತ್ತ ರಾತ್ರಿ 1.19ರ ಸುಮಾರಿಗೆ ಭೂಕಂಪ(Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.8ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಹರಿಯಾಣದ ಝಜ್ಜರ್​ನಲ್ಲಿ ಭೂಪಂಕದ ಕೇಂದ್ರ ಬಿಂದು, ಭೂಮಿಯಿಂದ 5 ಕಿಲೋ ಮೀಟರ್​ ಆಳದಲ್ಲಿ ಭೂಕಂಪದ ಅನುಭವ ಆಗಿದೆ.

ಭೂಕಂಪನದ ತೀವ್ರತೆಯಿಂದ ಯಾವುದೇ ಪ್ರಾಣಾಪಾಯ ಅಥವಾ ಗಾಯಗೊಂಡ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿದು ಬಂದಿದೆ. ಕಳೆದ ಒಂದು ತಿಂಗಳಲ್ಲಿ ಇದು ಮೂರನೇ ಬಾರಿ ಭೂಕಂಪನದ ಅನುಭವವಾಗಿದೆ.

ನವೆಂಬರ್‌ನಲ್ಲಿ, ನೇಪಾಳ ಗಡಿಯ ಉತ್ತರಾಖಂಡದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಲವಾದ ಭೂ ಕಂಪನಗಳು ಸಂಭವಿಸಿದ್ದವು.

ಇನ್ನು ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತಿದ್ದಂತೆಯೇ ವರ್ಷದ ಮೊದಲ ದಿನವೇ ಜನರಿಗೆ ಭೂ ಕಂಪನದ ಅನುಭವವಾಗಿದ್ದು ಜನರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಭೂ ಕಂಪದ ಅನುಭವದ ಬಗ್ಗೆ ಟ್ವಿಟರ್​ನಲ್ಲಿ ಭಾರೀ ಚರ್ಚೆಗಳು, ಟ್ವೀಟ್​ಗಳು ಓಡಾಡುತ್ತಿದ್ದು ಇದರ ಜೊತೆಗೆ ಭೂಕಂಪನಕ್ಕೆ ಸಂಬಂಧಿಸಿದ ಮೀಮ್ಸ್​ಗಳು ಕೂಡ ವೈರಲ್ ಆಗಿವೆ.

Published On - 8:25 am, Sun, 1 January 23