ಆಂಧ್ರದಲ್ಲಿ ತಾಯಿ, ಮಗು ನಿಗೂಢ ಸಾವು, ಕತ್ತು ಸೀಳಿದ ಸ್ಥಿತಿಯಲ್ಲಿ 3 ವರ್ಷದ ಬಾಲಕನ ಶವ ಪತ್ತೆ

ತಾಯಿ ಹಾಗೂ ಮಗು ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗು ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗುವಿನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು, ತಾಯಿ ಅಮೂಲ್ಯ ಕೂಡ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅಮೂಲ್ಯ ಅವರ ಪತಿ ರವಿ ರಾಮಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಆಂಧ್ರದಲ್ಲಿ ತಾಯಿ, ಮಗು ನಿಗೂಢ ಸಾವು, ಕತ್ತು ಸೀಳಿದ ಸ್ಥಿತಿಯಲ್ಲಿ  3 ವರ್ಷದ ಬಾಲಕನ ಶವ ಪತ್ತೆ
ಸಾವು
Image Credit source: Hindustan Times

Updated on: Nov 28, 2025 | 11:42 AM

ಅನಂತಪುರ, ನವೆಂಬರ್ 28: ಆಂಧ್ರಪ್ರದೇಶದ ಅನಂತಪುರದ ಮನೆಯೊಂದರಲ್ಲಿ ತಾಯಿ ಹಾಗೂ ಮೂರು ವರ್ಷದ ಮಗುವಿನ ಶವ(Deadbody) ಪತ್ತೆಯಾಗಿದೆ. ಮಗುವಿನ ಕತ್ತು ಸೀಳಿ ಕೊಲೆ ಮಾಡಲಾಗಿತ್ತು, ತಾಯಿ ಅಮೂಲ್ಯ ಕೂಡ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅಮೂಲ್ಯ ಅವರ ಪತಿ ರವಿ ರಾಮಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅನಂತಪುರ ಪಟ್ಟಣದ ಡಿಎಸ್ಪಿ ಶ್ರೀನಿವಾಸ್ ರಾವ್ ಮಾತನಾಡಿ, ಗುರುವಾರ ಸಂಜೆ ರವಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಅವರ ನಿವಾಸಕ್ಕೆ ಹೋದರು. ಅಮೂಲ್ಯ ಬಾಗಿಲು ತೆರೆಯದ ಕಾರಣ, ಪೊಲೀಸರು ನೆರೆಹೊರೆಯವರೊಂದಿಗೆ ಸೇರಿ ಬಾಗಿಲು ಒಡೆಯಲಾಗಿತ್ತು.

ಪೊಲೀಸರು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದು, ಇದು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒನ್ ಟೌನ್ ಪೊಲೀಸರು ರವಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮನೆಯೊಳಗೆ ಅಮೂಲ್ಯ (30) ಮತ್ತು ಆಕೆಯ ಚಿಕ್ಕ ಮಗ ಮೃತಪಟ್ಟಿರುವುದು ಕಂಡುಬಂದಿದ್ದು, ಇದು ಶಂಕಿತ ಆತ್ಮಹತ್ಯೆ ಎಂದು ವರದಿಯಾಗಿದೆ. ಸಾವಿನ ಹಿಂದಿನ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಅಂತ್ಯಸಂಸ್ಕಾರದ ವೇಳೆ ಶವ ಪೆಟ್ಟಿಗೆಯಿಂದ ಕೇಳಿ ಬಂತು ವಿಚಿತ್ರ ಶಬ್ಧ: ಮುಂದೇನಾಯ್ತು?

ಮನೆಯಲ್ಲಿ ದಂಪತಿ ಆತ್ಮಹತ್ಯೆ, ಗೋಡೆಯ ಮೇಲೆ ಲಿಪ್​ಸ್ಟಿಕ್​ನಲ್ಲಿ ಬರೆದಿತ್ತು ಡೆತ್ ನೋಟ್
ಮನೆಯೊಳಗೆ ದಂಪತಿ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಛತ್ತೀಸ್​ಗಢದ ಬಿಲಾಸ್​ಪುರದಲ್ಲಿ ನಡೆದಿದೆ. ಪತಿ ಮತ್ತು ಪತ್ನಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಕೌಟುಂಬಿಕ ಕಲಹದಂತೆ ಕಂಡರೂ ಬಳಿಕ ಗೋಡೆಯ ಮೇಲೆ ಲಿಪ್​ಸ್ಟಿಕ್​ನಲ್ಲಿ ಬರೆದ ಡೆತ್​ ನೋಟ್ ತನಿಖೆಯ ದಿಕ್ಕನ್ನೇ ಬದಲಿಸಿದೆ. ಮೂವತ್ತು ವರ್ಷದ ಶಿವಾನಿ ತಾಂಬೆ ಅಲಿಯಾಸ್ ನೇಹಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರೆ, ಆಕೆಯ ಪತಿ ರಾಜ್ ತಾಂಬೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆದರೆ ಪೊಲೀಸರನ್ನು ಇನ್ನಷ್ಟು ಆಘಾತಗೊಳಿಸಿದ್ದು ಗೋಡೆಗಳ ಮೇಲೆ ಲಿಪ್‌ಸ್ಟಿಕ್‌ನಿಂದ ಬರೆಯಲಾದ ಸಂದೇಶಗಳು ಅವರ ಹತಾಶೆಯನ್ನು ಸೂಚಿಸುತ್ತದೆ. ಆ ಬರಹಗಳಲ್ಲಿ ರಾಜೇಶ್ ವಿಶ್ವಾಸ್ ಎಂಬ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯೂ ಇತ್ತು. ದಂಪತಿ ದಾಂಪತ್ಯದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾನೆ ಎಂದು ಅದು ಆರೋಪಿಸಲಾಗಿದೆ. ಒಂದು ಸಾಲಿನಲ್ಲಿ ರಾಜೇಶ್ ವಿಶ್ವಾಸ್‌ನಿಂದಾಗಿ ನಾವು ಸಾಯುತ್ತಿದ್ದೇವೆ ಎಂದು ಬರೆದಿದ್ದರೆ, ಇನ್ನೊಂದು ಮತ್ತೊಂದು ಸಾಲಿನಲ್ಲಿ ಮಕ್ಕಳೇ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಬರೆಯಲಾಗಿತ್ತು. ಹೆಂಡತಿಯ ಫೋನ್ ಕರೆಗಳ ಕುರಿತು ಆಗಾಗ ಜಗಳಗಳು ನಡೆಯುತ್ತಿದ್ದವು ಎಂಬುದು ಸಂದೇಶದಿಂದ ಬಹಿರಂಗಗೊಂಡಿದೆ.

ಅವರದ್ದು ಪ್ರೇಮವಿವಾಹ ದಂಪತಿಗೆ ಮೂವರು ಮಕ್ಕಳು, ಹತ್ತು ವರ್ಷಗಳಿಂದ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಬಿರುಕು ಮೂಡಿತ್ತು. ಈ ದಂಪತಿ ಖಾಸಗಿ ಕಂಪನಿಯಲ್ಲಿ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತಿದ್ದರು ಮತ್ತು ಮೂವರು ಚಿಕ್ಕ ಮಕ್ಕಳನ್ನು ಬೆಳೆಸುತ್ತಿದ್ದರು. ಅನುಮಾನದ ವಿಚಾರವಾಗಿ ಪ್ರತಿನಿತ್ಯ ಅವರ ಮಧ್ಯೆ ಜಗಳಗಳಾಗುತ್ತಿದ್ದವು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ