ರಾಯಸೇನ್ ಅತ್ಯಾಚಾರ ಪ್ರಕರಣ, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು
ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿ ಸಲ್ಮಾನ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭೋಪಾಲ್‌ನ ಗೋಹರ್‌ಗಂಜ್‌ನಲ್ಲಿ 6 ವರ್ಷದ ಬಾಲಕಿಯ ಮೇಲೆ ಆತ ಅತ್ಯಾಚಾರವೆಸಗಿದ್ದ. ಬಳಿಕ ಆರೋಪಿ ಕೆಲ ಸಮಯದಿಂದ ಪರಾರಿಯಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ ಪೊಲೀಸರು 30 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಭೋಪಾಲ್, ನವೆಂಬರ್ 28: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿ ಸಲ್ಮಾನ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭೋಪಾಲ್‌ನ ಗೋಹರ್‌ಗಂಜ್‌ನಲ್ಲಿ 6 ವರ್ಷದ ಬಾಲಕಿಯ ಮೇಲೆ ಆತ ಅತ್ಯಾಚಾರವೆಸಗಿದ್ದ. ಬಳಿಕ ಆರೋಪಿ ಕೆಲ ಸಮಯದಿಂದ ಪರಾರಿಯಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ ಪೊಲೀಸರು 30 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಭೋಪಾಲ್‌ನ ವಾರ್ಡ್ 11 ರಿಂದ ಗಾಂಧಿನಗರ ಪೊಲೀಸರು ಸಲ್ಮಾನ್ನನ್ನು ಚಹಾ ಅಂಗಡಿಯೊಂದರಲ್ಲಿ ಬಂಧಿಸಿದ್ದರು. ಆತನನ್ನು ಕರೆದೊಯ್ಯುತ್ತಿದ್ದ ವಾಹನ ಕಿರಾತ್ ನಗರ ಗ್ರಾಮದ ಬಳಿ ಪಂಕ್ಚರ್ ಆಯಿತು. ಆ ಸಮಯದಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಹೀಗಾಗಿ ಸಣ್ಣ ಎನ್ಕೌಂಟರ್ ನಡೆಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸಿಸಿಟಿವಿ ಫೂಟೇಜ್ ಎಲ್ಲೆಡೆ ವೈರಲ್ ಆಗಿತ್ತು.
ಆತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಏನೂ ಮಾಡದವನಂತೆ ಅಂಗಡಿಗೆ ಹೋಗಿ ಸಿಗರೇಟ್ ಖರೀದಿಸಿ, ಅಲ್ಲಿಲ್ಲಿ ಸುತ್ತಾಡಿರುವುದು ಕಂಡುಬಂದಿತ್ತು. ನವೆಂಬರ್ 21ರಂದು ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಆಕೆಗೆ ಚಾಕೊಲೇಟ್ ಆಮಿಷವೊಡ್ಡಿ, ಹತ್ತಿರದ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಆಕೆ ಪೊದೆಗಳ ಮಧ್ಯೆ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

