ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯಲ್ಲಿ ಕುತೂಹಲಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಉದ್ಯೋಗ ಖಾತ್ರಿ ಕಾಮಗಾರಿ (Mahatma Gandhi National Rural Employment Guarantee Act 2005 -MGNREGA) ಮಾಡುವಾಗ ಹನುಮ ಜಯಂತಿ (Hanuman Jayanthi) ಸಂದರ್ಭದಲ್ಲಿ ರಾಮ ಲಕ್ಷ್ಮಣರ ಪುರಾತನ ವಿಗ್ರಹಗಳು ಪತ್ತೆಯಾಗಿವೆ. ಜಿಲ್ಲೆಯ ಜನ್ನಾರಾಂ ಮಂಡಲದ ತಪಾಲಪುರ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಉದ್ಯೋಗ ಖಾತ್ರಿ ಕಾಮಗಾರಿ ನಡೆಸುವಾಗ ತಪಾಲ್ಪುರ ಚೆಕ್ ಪೋಸ್ಟ್ ಬಳಿ ಸ್ಥಳೀಯ ಜನರಿಗೆ ಇದು ವಿಸ್ಮಯಕಾರಿಯಾಗಿದೆ.
ಮಂಚಿರ್ಯಾಲ ಜಿಲ್ಲೆಯಲ್ಲಿ ಕುತೂಹಲಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಉದ್ಯೋಗ ಖಾತ್ರಿ ಕಾಮಗಾರಿ ಮಾಡುವಾಗ ರಾಮ ಲಕ್ಷ್ಮಣರ ಪುರಾತನ ಮೂರ್ತಿಗಳು ಪತ್ತೆಯಾಗಿವೆ. ಜಿಲ್ಲೆಯ ಜನ್ನಾರಾಂ ಮಂಡಲದ ತಪಾಲಪುರ ಚೆಕ್ ಪೋಸ್ಟ್ ಬಳಿ ಘಟನೆ ಬೆಳಕಿಗೆ ಬಂದಿದೆ. ವಿವರಗಳು ಈ ಕೆಳಗಿನಂತಿವೆ. ಉದ್ಯೋಗ ಖಾತ್ರಿ ಕಾಮಗಾರಿಯ ಭಾಗವಾಗಿ ಸ್ಥಳೀಯ ಜನರು ತಪಾಲಪುರ ಚೆಕ್ ಪೋಸ್ಟ್ ಬಳಿ ಕೆಲಸ ನಡೆಯುತ್ತಿದೆ. ಕೆಲ ಕಾರ್ಮಿಕರು ಸಲಿಕೆ ಹಿಡಿದು ಭೂಮಿಯನ್ನು ಅಗೆಯುತ್ತಿದ್ದಾಗ ವಿಶೇಷ ಆಕಾರವೊಂದು ಕಾಣಿಸಿದೆ.
ಮಣ್ಣು ಅಗೆದಾಗ ರಾಮ ಲಕ್ಷ್ಮಣರ ಪುರಾತನ ವಿಗ್ರಹಗಳು ಸಿಕ್ಕಿವೆ. ತಕ್ಷಣ ಊರಿನ ಮಂದಿಗೆ ಸುದ್ದಿ ರವಾನಿಸಿದ್ದಾರೆ. ಎಲ್ಲರೂ ಬಂದಾಗ ಆ ರಾಮಲಕ್ಷ್ಮಣ ಮೂರ್ತಿಗಳನ್ನು ಹೊರತೆಗೆಯಲಾಗಿದೆ. ಸ್ಥಳದಲ್ಲಿಯೇ ಜಲಾಭಿಷೇಕ ಮಾಡಿ, ಪುಣ್ಯಕಾರ್ಯ ಮಾಡಲಾಗಿದೆ. ಅರಿಶಿನ, ಕುಂಕುಮ, ಹೂವು, ತೆಂಗಿನಕಾಯಿ ಹೊಡೆದು ಪೂಜೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಅವರೂ ಸಹ ಸ್ಥಳಕ್ಕೆ ಬಂದು ಪರಿಶೀಲಿಸಿದರು.
ಏತನ್ಮಧ್ಯೆ, ಈ ರಾಮ ಲಕ್ಷ್ಮಣ ವಿಗ್ರಹಗಳನ್ನು 1999 ರಲ್ಲಿ ತಿಮ್ಮಾಪುರ ರಾಮ ಮಂದಿರದಿಂದ ಕಳವು ಮಾಡಲಾಗಿದೆ ಎಂದು ಊರಿನ ಹಿರಿಯರು ತಿಳಿಸಿದ್ದಾರೆ. ವಿಗ್ರಹಗಳು ಇರುವ ಕಡೆ ರಾಮಮಂದಿರ ನಿರ್ಮಾಣವಾಗಬೇಕು ಎಂದೂ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಆದರೆ, ಉತ್ಖನನದಲ್ಲಿ ಪತ್ತೆಯಾದ ಈ ವಿಗ್ರಹಗಳ ಕಾಲಘಟ್ಟ ದೃಢೀಕರಿಸಲು ಪರಿಶೀಲನೆ ನಡೆಸಬೇಕು ಎನ್ನುತ್ತಾರೆ ಕಂದಾಯ ಅಧಿಕಾರಿಗಳು. ಅಧಿಕಾರಿಗಳು ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 7 April 23