ಆಂಧ್ರಪ್ರದೇಶದಲ್ಲಿ ರಥೋತ್ಸವದ ವೇಳೆ ದುರಂತ, 13 ಮಕ್ಕಳಿಗೆ ವಿದ್ಯುತ್​ ಸ್ಪರ್ಶ

ಆಂಧ್ರಪ್ರದೇಶದಲ್ಲಿ ಯುಗಾದಿ ರಥೋತ್ಸವದ ವೇಳೆ 13 ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರವಣಿಗೆ ಭಾಗವಾದ ರಥವು ಓವರ್ಹೆಡ್ ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ ಕನಿಷ್ಠ 13 ಮಕ್ಕಳು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತೇಕೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆಂಧ್ರಪ್ರದೇಶದಲ್ಲಿ ರಥೋತ್ಸವದ ವೇಳೆ ದುರಂತ, 13 ಮಕ್ಕಳಿಗೆ ವಿದ್ಯುತ್​ ಸ್ಪರ್ಶ
ಮಕ್ಕಳಿಗೆ ವಿದ್ಯುತ್ ಆಘಾತ
Image Credit source: India Today

Updated on: Apr 11, 2024 | 3:09 PM

ಆಂಧ್ರಪ್ರದೇಶದಲ್ಲಿ ಯುಗಾದಿ ರಥೋತ್ಸವದ ವೇಳೆ 13 ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರವಣಿಗೆ ಭಾಗವಾದ ರಥವು ಓವರ್ಹೆಡ್ ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ ಕನಿಷ್ಠ 13 ಮಕ್ಕಳು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತೇಕೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ವಿದ್ಯುದಾಘಾತಕ್ಕೊಳಗಾದ ಮಕ್ಕಳನ್ನು ಚಿಕಿತ್ಸೆಗಾಗಿ ಕರ್ನೂಲ್‌ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಕ್ಕಳ ಜೀವಕ್ಕೆ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಯುಗಾದಿಯು ತೆಲುಗು ಕ್ಯಾಲೆಂಡರ್ನಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದನ್ನು ಚೈತ್ರ ನವರಾತ್ರಿಯ ಮೊದಲ ದಿನದಂದು ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಜನರು ಆಚರಿಸುತ್ತಾರೆ.

ಮತ್ತಷ್ಟು ಓದಿ: ಗೌರಿಬಿದನೂರು ಶಾಲಾ ಕ್ರೀಡಾಕೂಟದಲ್ಲಿ ವಿದ್ಯುತ್ ಅವಘಡ: ಓರ್ವ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಯುಗಾದಿ ಉತ್ಸವದ ಆಚರಣೆಯ ಮುಕ್ತಾಯದ ನಂತರ 13 ಮಕ್ಕಳು ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದಾರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಗಾಯಗೊಂಡ ಮಕ್ಕಳನ್ನು ಭೇಟಿ ಮಾಡಲು ವೈಎಸ್‌ಆರ್‌ಸಿಪಿ ಮುಖಂಡ ಮತ್ತು ಪಾಣ್ಯಂ ಶಾಸಕ ಕಾಟಸಾನಿ ರಾಮಭೂಪಾಲ್ ರೆಡ್ಡಿ ಮತ್ತು ನಂದ್ಯಾಳ ಟಿಡಿಪಿ ಅಭ್ಯರ್ಥಿ ಬೈರೆಡ್ಡಿ ಶಬರಿ ಆಸ್ಪತ್ರೆಗೆ ಭೇಟಿ ನೀಡಿದರು.

ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಟಿಡಿಪಿಯ ಬೈರೆಡ್ಡಿ ಶಬರಿ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ