ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ; ಮುಗಿಲು ಮುಟ್ಟಿದ ಮಾದಪ್ಪನ ಜಯಘೋಷ

ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ; ಮುಗಿಲು ಮುಟ್ಟಿದ ಮಾದಪ್ಪನ ಜಯಘೋಷ

ಕಿರಣ್ ಹನುಮಂತ್​ ಮಾದಾರ್
|

Updated on:Apr 09, 2024 | 3:41 PM

ಮಲೆ ಮಹದೇಶ್ವರ ಬೆಟ್ಟದಲ್ಲಿಯೂ(Male Mahadeshwara Hills) ಯುಗಾದಿ ಜಾತ್ರೆಯ ಸಂಭ್ರಮ ಸಡಗರ ಮೂಡಿದ್ದು, ವಿಜೃಂಭಣೆಯಿಂದ ಮಹದೇಶ್ವರನ ಯುಗಾದಿ ರಥೋತ್ಸವ ನೆರವೇರಿದೆ. 101 ಬೇಡಗಂಪಣ ಬಾಲಕಿಯರಿಂದ ಬೆಲ್ಲದಾರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಹಸ್ರಾರು ಭಕ್ತರು ರಥೋತ್ಸವ ಭಾಗಿಯಾಗಿ ಮಹದೇಶ್ವರನ ಕೃಫೆಗೆ ಪಾತ್ರರಾದರು.

ಚಾಮರಾಜನಗರ, ಏ.04: ಇಂದು ನಾಡಿನೆಲ್ಲೆಡೆ ಯುಗಾದಿ ಸಂಭ್ರಮ ಮನೆಮಾಡಿದೆ. ಅದರಂತೆ ಮಲೆ ಮಹದೇಶ್ವರ ಬೆಟ್ಟದಲ್ಲಿಯೂ(Male Mahadeshwara Hills) ಯುಗಾದಿ ಜಾತ್ರೆಯ ಸಂಭ್ರಮ ಸಡಗರ ಮೂಡಿದ್ದು, ವಿಜೃಂಭಣೆಯಿಂದ ಮಹದೇಶ್ವರನ ಯುಗಾದಿ ರಥೋತ್ಸವ ನೆರವೇರಿದೆ. 101 ಬೇಡಗಂಪಣ ಬಾಲಕಿಯರಿಂದ ಬೆಲ್ಲದಾರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಹಸ್ರಾರು ಭಕ್ತರು ರಥೋತ್ಸವ ಭಾಗಿಯಾಗಿ ಮಹದೇಶ್ವರನ ಕೃಫೆಗೆ ಪಾತ್ರರಾದರು. ಇನ್ನು ಎಲ್ಲೆಲ್ಲೂ ಉಘೇಉಘೇ ಮಾದಪ್ಪ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ಈ ವೇಳೆ ರಥಕ್ಕೆ ಹೂ ಹಣ್ಣು, ದವಸ ಧಾನ್ಯ ಎಸೆದು ಭಕ್ತಿ ಸಮರ್ಪಣೆ ಮಾಡಿದರು. ಮಾದಪ್ಪನ ರಥದೊಂದಿಗೆ ರುದ್ರಾಕ್ಷಿ ಮಂಟಪ ಹುಲಿವಾಹನ ಮತ್ತು ಬಸವ ವಾಹನ ಸಾಗಿ ಬಂತು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

Published on: Apr 09, 2024 03:40 PM