ಬೆಂಗಳೂರಿನಲ್ಲಿ ಮನೆ ಮಾಡಿದ ಯುಗಾದಿ ಸಂಭ್ರಮ; ಹಣ್ಣು, ಹೂವುಗಳ ಬೆಲೆಗೆ ಗ್ರಾಹಕರು ಶಾಕ್!

ಬೆಂಗಳೂರಿನಲ್ಲಿ ಮನೆ ಮಾಡಿದ ಯುಗಾದಿ ಸಂಭ್ರಮ; ಹಣ್ಣು, ಹೂವುಗಳ ಬೆಲೆಗೆ ಗ್ರಾಹಕರು ಶಾಕ್!
ಕೆಆರ್ ಮಾರ್ಕೆಟ್​ನಲ್ಲಿ ಜನ ಸಾಗರ

ಹಣ್ಣುಗಳಿಗೆ 20 ರಿಂದ 30 ರೂಪಾಯಿ, ಹೂವುಗಳಿಗೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಇಂದು ಒಂದು ಕಟ್ಟು ಮಾವಿನ ಎಲೆಗೆ 10 ರೂ. ಇದೆ.

TV9kannada Web Team

| Edited By: sandhya thejappa

Apr 02, 2022 | 9:51 AM


ಬೆಂಗಳೂರು: ನಾಡಿನೆಲ್ಲೆಡೆ ಇಂದು (ಏಪ್ರಿಲ್ 2) ಚಾಂದ್ರಮಾನ ಯುಗಾದಿ (Ugadi) ಹಬ್ಬ. ಬೆಳಿಗ್ಗೆ ಬೇಗನೇ ಎದ್ದು ಮನೆ ಮಂದಿ ಎಲ್ಲಾ ದೇವರ ಪೂಜೆಗೆ ಸಿದ್ಧಪಡಿಸುವುದು, ಸಂಜೆ ಊಟಕ್ಕೆ ತಯಾರಿ ಮಾಡುವುದೇ ಒಂಥರಾ ಸಂಭ್ರಮ ಸಡಗರ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ (Bengaluru) ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಕಳೆದ 2 ವರ್ಷದಿಂದ ಕೊರೊನಾ (Coronvirus) ಕಾರಣದಿಂದ ಯುಗಾದಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಎಲ್ಲೆಲ್ಲೂ ಯುಗಾದಿ ಹಬ್ಬ ಸಂಭ್ರಮ ಜೋರಾಗಿದೆ.

ಇನ್ನು ಹಬ್ಬದ ಹಿನ್ನೆಲೆ ನಗರದ ಜನರಿಗೆ ಶಾಕ್ ಎದುರಾಗಿದ್ದು, ಹಣ್ಣು , ಹೂ ಬೆಲೆ ಹೆಚ್ಚಳವಾಗಿದೆ. ಹಣ್ಣುಗಳಿಗೆ 20 ರಿಂದ 30 ರೂಪಾಯಿ, ಹೂವುಗಳಿಗೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಇಂದು ಒಂದು ಕಟ್ಟು ಮಾವಿನ ಎಲೆಗೆ 10 ರೂ. ಇದೆ. ಬೇವಿನ ಸೊಪ್ಪಿಗೆ 20 ರೂ. ನಿಗದಿಯಾಗಿದೆ. ಒಂದು ಮಾರು ತುಳಸಿಗೆ 50 ರೂ. ಇದ್ದರೆ. ಒಂದು ಕೆಜಿ ಬೆಲ್ಲಕ್ಕೆ (ಅಚ್ಚು/ಉಂಡೆ) 50- 60 ರೂಪಾಯಿ ಇದೆ.

ಇಂದಿನ ಹೂವುಗಳ ಬೆಲೆ ಹೀಗಿದೆ:
* ಒಂದು ಕೆಜಿ ಮಲ್ಲಿಗೆ ಮೊಗ್ಗು – 600 ರೂ.
* ಒಂದು ಸೇವಂತಿಗೆ – 200 ರೂ.
* ಕನಕಾಂಬರ 400 – ರೂ.
* ಸುಗಂಧರಾಜ 80 – ರೂ.
* ಗುಲಾಬಿ 150 – ರೂ.
* ಚೆಂಡು ಹೂವು- 60 ರೂಪಾಯಿ ಇದೆ.

ಇಂದಿನ ಹಣ್ಣುಗಳ ಬೆಲೆ ಹೀಗಿದೆ:
* ಒಂದು ಕೆಜಿ ಸೇಬು – 160 ರೂ.
* ದಾಳಿಂಬೆ 250 – ರೂ
* ಮೂಸಂಬಿ 100 – ರೂ.
* ಆರೆಂಜ್ 120 – ರೂ.
* ಸಪೋಟ 100 – ರೂ.
* ಸೀಬೆಹಣ್ಣು 120 – ರೂ.
* ಏಲಕ್ಕಿ ಬಾಳೆಹಣ್ಣು – 70 ರೂ.
* ದ್ರಾಕ್ಷಿ 100-120 ರೂ. ಇದೆ.

ಇದನ್ನೂ ಓದಿ

Andre Russell: ಸಿಕ್ಸರ್ ಮ್ಯಾನ್ ರಸೆಲ್ ಅವರ ಒಂದೊಂದು ಸಿಕ್ಸ್​​ ಹೇಗಿತ್ತು ಗೊತ್ತೇ?: ಇಲ್ಲಿದೆ ನೋಡಿ

ಸಚಿವ ಎಮ್ ಟಿ ಬಿ ನಾಗರಾಜ ಕ್ಷೇತ್ರದ ಜನರಿಗೆ ಯುಗಾದಿ ಹಬ್ಬಕ್ಕೆ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣೆ ಹಂಚಿದರು!

Follow us on

Related Stories

Most Read Stories

Click on your DTH Provider to Add TV9 Kannada