ಪೊಲೀಸ್ ಸಿಬ್ಬಂದಿ ನೇಮಕಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು; ಪೊಲೀಸ್ ಧ್ವಜ ದಿನ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತು

ಪೊಲೀಸ್ ಸಿಬ್ಬಂದಿ ನೇಮಕಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು; ಪೊಲೀಸ್ ಧ್ವಜ ದಿನ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತು
ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಸಿಎಂ ಬೊಮ್ಮಾಯಿ, ಆರಗ ಜ್ಞಾನೇಂದ್ರ

ತಮ್ಮ ಕರ್ತವ್ಯ ಮಾಡುವಾಗ ನಿಷ್ಪಕ್ಷಪಾತ ಹಾಗೂ ಮಾತವೀಯತೆಯಿಂದ ಕೆಲಸ ಮಾಡುವುದು ಅಗತ್ಯ ಇದೆ. ನ್ಯಾಯ ನಿಷ್ಟೂರವಾಗಿ ಕೆಲಸ ಮಾಡಬೇಕು. ಪೊಲೀಸ್ ಇಂಟಲಿಜೆನ್ಸ್​ನ ಹೊಸ ತಂತ್ರಜ್ಞಾನ ಹಾಗೂ ಸಿಬ್ಬಂದಿಗಳು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುಗುತ್ತದೆ.

TV9kannada Web Team

| Edited By: sandhya thejappa

Apr 02, 2022 | 10:01 AM

ಬೆಂಗಳೂರು: ಕೋರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಇಂದು (ಏಪ್ರಿಲ್ 2) ಪೊಲೀಸ್ ಧ್ವಜ ದಿನಾಚರಣೆ (Police Dhwaja Dinacharane) ಹಿನ್ನೆಲೆ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಚಾಲನೆ ನೀಡಿದರು. ನಂತರ ಮಾತನಾಡಿದ ಸಿಎಂ, ಬೇರೆ ಇಲಾಖೆ ಸಿಬ್ಬಂದಿಗಳಿಗೂ ಪೊಲೀಸ್ ಇಲಾಖೆಗೂ ಬಹಳಷ್ಟು ವ್ಯತ್ಯಾಸವಿದೆ. ನಾಡಿನ ಜನರ ಮತ್ತು ಸಮಾಜದಲ್ಲಿ ಕಾನೂನು, ಶಾಂತಿ ಕಾಪಾಡುವುದು ಪೊಲೀಸರ ಕರ್ತವ್ಯ. ಇಲಾಖೆಯಲ್ಲಿ ದಕ್ಷತೆ ಹಾಗೂ ನಿಷ್ಠೆ ಬಹಳ ಮುಖ್ಯ. ದೇಶದಲ್ಲೇ ಉನ್ನತ ಸ್ಥಾನದಲ್ಲಿ ಕರ್ನಾಟಕ ಪೊಲೀಸ್ ಇದ್ದಾರೆ ಎಂದು ನುಡಿದರು.

ತಮ್ಮ ಕರ್ತವ್ಯ ಮಾಡುವಾಗ ನಿಷ್ಪಕ್ಷಪಾತ ಹಾಗೂ ಮಾತವೀಯತೆಯಿಂದ ಕೆಲಸ ಮಾಡುವುದು ಅಗತ್ಯ ಇದೆ. ನ್ಯಾಯ ನಿಷ್ಟೂರವಾಗಿ ಕೆಲಸ ಮಾಡಬೇಕು. ಪೊಲೀಸ್ ಇಂಟಲಿಜೆನ್ಸ್​ನ ಹೊಸ ತಂತ್ರಜ್ಞಾನ ಹಾಗೂ ಸಿಬ್ಬಂದಿಗಳು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುಗುತ್ತದೆ. ಬಂದೋಬಸ್ತ್​ನಿಂದ ಬತ್ಯೆ, ಬಹಳಷ್ಟು ಪೆಂಡಿಂಗ್ ಪ್ರಪೊಷನ್ ಕ್ಲಿಯರ್ ಮಾಡಿದ್ದೇವೆ. ಪೊಲೀಸರ ಗೃಹಕ್ಕೆ 10 ಸಾವಿರಕ್ಕೂ ಹೆಚು ಮನೆಗಳ ಕಟ್ಟಲು ಅನುಮತಿ ಕೊಟ್ಟಿದ್ದೇವೆ ಎಂದು ಕಾರ್ಯಕ್ರಮದಲ್ಲಿ ಬೊಮ್ಮಾಯಿ ತಿಳಿಸಿದರು.

ಪೊಲೀಸರ ವೆಲ್ ಫೇರ್ ಕಾರ್ಯಕ್ರಮಕ್ಕೆ ಸುಮಾರು ನೂರು ಕೋಟಿ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದ ಸಿಎಂ, ಫೈನಾನ್ಶಿಯಲ್ ಫ್ರಾಡ್​ಗಳ ಪತ್ತೆ ಹೆಚ್ಚುವ ಮೂಲಕ ಅದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಸಾಧ್ಯವಾಗಿದೆ. ಡ್ರಗ್ ಕೇಸ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪತ್ತೆ ಮಾಡಿದ್ದೇವೆ. ಹಲವಾರು ಜನರಿಗೆ ಶಿಕ್ಷೆ ಮಾಡುವಂತೆ ಮಾಡಿದ್ದಾರೆ. ವಾರ್ ಆನ್ ಡ್ರಗ್ ನಿರಂತರವಾಗಿ ನಡೆಯಬೇಕು. ಶಾಲಾ ಹಾಗೂ ಯುವಕರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಸೈಬರ್ ಕ್ರೈಂ ಸಿಬ್ಬಂದಿಗಳಿಗೆ ವಿಶೇಷವಾದ ತರಬೇತಿ ಕೊಡಬೇಕು ಎಂದರು.

ಕರ್ನಾಟಕ ಪೊಲೀಸ್ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳನ್ನ ನಿರ್ಮಾಣ ಮಾಡಿದೆ. ಅತಿ ಹೆಚ್ಚು ಪೊಲೀಸ್ ಗೃಹ ಇರುವ ರಾಜ್ಯ ಅದು ಕರ್ನಾಟಕ. ನಿಗದಿತ ಸಮಯದಲ್ಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ನೂರು ಪೊಲೀಸ್ ಠಾಣೆ ನೀಡಲಾಗಿದೆ. ಉತ್ತಮ ವಾಹನ, ಮೊಬೈಲಿಟಿಗೆ  50 ಕೋಟಿ ನೀಡಲಾಗಿದೆ. ನೇಮಕಾತಿಗಳು ಸಹ ಜೋರಾಗಿ ನಡೆಯುತ್ತಿದೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ರಾಜ್ಯದ 135 ಪೊಲೀಸರಿಗೆ ಸಿಎಂ ಪದಕ ಪ್ರದಾನ ಮಾಡಿದರು. ಈ ವೇಳೆ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭಾಗಿಯಾಗಿದ್ದರು.

ಇದನ್ನೂ ಓದಿ

ಯಾವ ಕ್ಷೇತ್ರದವರು ಯಾವ ಬಣ್ಣದ ಹೆಲ್ಮೆಟ್ ಧರಿಸುತ್ತಾರೆ? ಭಾರತದಲ್ಲಿ ಇದು ಕಡ್ಡಾಯವೇ? ಇಲ್ಲಿದೆ ಕುತೂಹಲಕರ ಮಾಹಿತಿ

Ugadi Special 2022 : ಯುಗಾದಿಗೆ ಹಲವು ನಾಮ, ಪ್ರಕೃತಿ ಸಂಭ್ರಮಿಸುವ ಪರ್ವ ಕಾಲ ಈ ಯುಗಾದಿ!

Follow us on

Related Stories

Most Read Stories

Click on your DTH Provider to Add TV9 Kannada