ಸ್ತ್ರೀರೋಗ ತಜ್ಞೆ ಆತ್ಮಹತ್ಯೆ ಪ್ರಕರಣ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೆಲಸದಿಂದ ತೆಗೆದು ಹಾಕಲು ಆದೇಶಿಸಿದ ಮುಖ್ಯಮಂತ್ರಿ

ಗರ್ಭಿಣಿಯೊಬ್ಬರನ್ನು ಕೊಂದ ಆರೋಪ ಬಂದು, ಅದು ಪೊಲೀಸ್ ಕೇಸ್​ ಕೂಡ ಆಗಿದ್ದರಿಂದ ತೀವ್ರ ಮನನೊಂದು ಸ್ತ್ರೀರೋಗತಜ್ಞರಾದ ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿತ್ತು. ಈ ಘಟನೆಯನ್ನು  ಸೂಕ್ತವಾಗಿ ತನಿಖೆ ಮಾಡುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ (Ashok Gehlot )ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ದೌಸಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅನಿಲ್​ ಕುಮಾರ್​ ಅವರನ್ನು ತೆಗೆದುಹಾಕಲು ಹಾಗೂ ಲಾಲ್ಸೋಟ್​ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಅಂಕೇಶ್​ ಕುಮಾರ್ ಅವರನ್ನು ಅಮಾನತು […]

ಸ್ತ್ರೀರೋಗ ತಜ್ಞೆ ಆತ್ಮಹತ್ಯೆ ಪ್ರಕರಣ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೆಲಸದಿಂದ ತೆಗೆದು ಹಾಕಲು ಆದೇಶಿಸಿದ ಮುಖ್ಯಮಂತ್ರಿ
ಆತ್ಮಹತ್ಯೆ ಮಾಡಿಕೊಂಡ ವೈದ್ಯೆ ಅರ್ಚನಾ ಶರ್ಮಾ ಮತ್ತು ಕುಟುಂಬ
Follow us
TV9 Web
| Updated By: Lakshmi Hegde

Updated on:Mar 31, 2022 | 9:22 AM

ಗರ್ಭಿಣಿಯೊಬ್ಬರನ್ನು ಕೊಂದ ಆರೋಪ ಬಂದು, ಅದು ಪೊಲೀಸ್ ಕೇಸ್​ ಕೂಡ ಆಗಿದ್ದರಿಂದ ತೀವ್ರ ಮನನೊಂದು ಸ್ತ್ರೀರೋಗತಜ್ಞರಾದ ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿತ್ತು. ಈ ಘಟನೆಯನ್ನು  ಸೂಕ್ತವಾಗಿ ತನಿಖೆ ಮಾಡುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ (Ashok Gehlot )ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ದೌಸಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅನಿಲ್​ ಕುಮಾರ್​ ಅವರನ್ನು ತೆಗೆದುಹಾಕಲು ಹಾಗೂ ಲಾಲ್ಸೋಟ್​ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ಅಂಕೇಶ್​ ಕುಮಾರ್ ಅವರನ್ನು ಅಮಾನತು ಮಾಡಲು ಮಾಡಲು ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಡೆಪ್ಯೂಟಿ ಎಸ್​ಪಿಯನ್ನು ಇಲ್ಲಿಂಗ ವರ್ಗಾವಣೆ ಮಾಡಲಾಗಿದ್ದು, ಅವರಿಗಿನ್ನೂ ಪೋಸ್ಟಿಂಗ್​ ಕೊಟ್ಟಿಲ್ಲ. ಅಂದರೆ ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ಇನ್ನೂ ಹೇಳಿಲ್ಲ.

ಅರ್ಚನಾ ಶರ್ಮಾ ಮತ್ತು ಅವರ ಪತಿ ಇಬ್ಬರೂ ಆಸ್ಪತ್ರೆ ನಡೆಸುತ್ತಿದ್ದಾರೆ. ಮಂಗಳವಾರ 22 ವರ್ಷದ ಗರ್ಭಿಣಿಯೊಬ್ಬರನ್ನು ಇವರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಕೆಗೆ ಕೂಡಲೇ ಚಿಕಿತ್ಸೆ ಶುರು ಮಾಡಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಅದಾಗಲೇ ಪರಿಸ್ಥಿತಿ ಹದಗೆಟ್ಟಿದ್ದರಿಂದ ಚಿಕಿತ್ಸೆ ವೇಳೆಯೇ ಗರ್ಭಿಣಿ ಮೃತಪಟ್ಟಿದ್ದರು. ಗರ್ಭಿಣಿ ಮೃತಪಟ್ಟ ಬಳಿಕ ಆಕೆಯ ಕುಟುಂಬದವರು ಅರ್ಚನಾ ಶರ್ಮಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಆಸ್ಪತ್ರೆ ಹೊರಗೆ ಪ್ರತಿಭಟನೆಯನ್ನೂ ಮಾಡಿದರು. ನಂತರ ಪೊಲೀಸರು ಐಪಿಸಿ ಸೆಕ್ಷನ್​ 302 (ಕೊಲೆ)ನಡಿಯಲ್ಲಿ ಅರ್ಚನಾ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದರು. ಇದರಿಂದ ತೀವ್ರ ಮನನೊಂದ ಅರ್ಚನಾ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಡೆತ್ ನೋಟ್​ ಬರೆದಿಟ್ಟು, ವೈದ್ಯರಿಗೆ ಕಿರುಕುಳ ನೀಡುವುದನ್ನು ತಪ್ಪಿಸಿ. ನಾವ್ಯಾರನ್ನೂ ಕೊಲೆ ಮಾಡುವುದಿಲ್ಲ. ಗರ್ಭಿಣಿಗೆ ಪ್ರಸವದ ನಂತರ ವಿಪರೀತ ಎನ್ನುವಷ್ಟು ರಕ್ತಸ್ರಾವ ಆಗಿತ್ತು. ಹೀಗಾಗಿ ಸತ್ತಿದ್ದಾಳೆ ಎಂದು ಬರೆದಿಟ್ಟಿದ್ದರು.

ದೇಶಾದ್ಯಂತ ಸುದ್ದಿಯಾದ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ಸಂಜೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಅದಾದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೆಲಸದಿಂದಲೇ ತೆಗೆದುಹಾಕಲಾಗಿದೆ. ಹಾಗೇ, ಎಫ್​ಐಆರ್ ದಾಖಲು ಮಾಡಿದ ಲಾಲ್ಸೋಟ್​ ಠಾಣಾಧಿಕಾರಿಯನ್ನು ಅಮಾನತು ಮಾಡಿದ್ದಾರೆ. ಅಷ್ಟೇ ಅಲ್ಲ, ಇಂಥ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಗೃಹಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅರ್ಚನಾ ಶರ್ಮಾ ಸಾವಿಗೆ ಕಾರಣವಾಗಲು ಯಾರೆಲ್ಲ ಕಾರಣವೋ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅದಕ್ಕೂ ಮೊದಲು ಟ್ವೀಟ್ ಮಾಡಿದ್ದ ಗೆಹ್ಲೋಟ್​, ದೌಸಾದಲ್ಲಿ ಡಾ. ಅರ್ಚನಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ವಿಷಾದನೀಯ. ವೈದ್ಯರಿಗೆ ದೇವರ ಸ್ಥಾನ ನೀಡುವ ಸಂಸ್ಕೃತಿ ನಮ್ಮದು. ರೋಗಿಯ ಪ್ರಾಣ ಉಳಿಸಲು ಪ್ರತಿ ವೈದ್ಯನೂ ತನ್ನ ಕೈಯ್ಯಲಾದ ಪ್ರಯತ್ನವನ್ನು, ಕೊನೇ ಕ್ಷಣದವರೆಗೂ ಮಾಡುತ್ತಾರೆ. ಆದರೆ ಹೀಗೆ ಒಬ್ಬ ರೋಗಿ ಮೃತಪಟ್ಟಾಕ್ಷಣ ಅದಕ್ಕೆ ವೈದ್ಯರನ್ನೇ ಹೊಣೆ ಮಾಡುವುದು ಸರಿಯಲ್ಲ, ನ್ಯಾಯವೂ ಅಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಗರ್ಭಿಣಿಗೆ ಸರಿಯಾದ ಚಿಕಿತ್ಸೆ ನೀಡದೆ ಕೊಂದ ಆರೋಪ; ಅವಮಾನದಿಂದ ಸ್ತ್ರೀರೋಗ ತಜ್ಞೆ ಆತ್ಮಹತ್ಯೆ

Published On - 9:01 am, Thu, 31 March 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್