AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB NTPC CBT 1 Result: ಎನ್​ಟಿಪಿಸಿ ಪರೀಕ್ಷೆ ಪರಿಷ್ಕೃತ ಫಲಿತಾಂಶ ಬಿಡುಗಡೆ ಮಾಡಿದ ರೈಲ್ವೆ ನೇಮಕಾತಿ ಮಂಡಳಿ; ರಿಸಲ್ಟ್​ ಹೀಗೆ ಚೆಕ್​ ಮಾಡಿಕೊಳ್ಳಿ

ರೈಲ್ವೆ ನೇಮಕಾತಿ ಮಂಡಳಿಯು 2019ರಲ್ಲಿ ನಡೆಸಿದ್ದ NTPC CBT-1 (ತಾಂತ್ರಿಕವಲ್ಲದ ಜನಪ್ರಿಯ ವರ್ಗಗಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ) ಪರೀಕ್ಷೆಯ ಪರಿಷ್ಕೃತ ಫಲಿತಾಂಶದ ಅಂಕಪಟ್ಟಿಯಲ್ಲಿ 2022ರ ಮಾರ್ಚ್​ 30ರಂದು rrcb.gov.in. ವೆಬ್​​ಸೈಟ್​​ನಲ್ಲಿ ಬಿಡುಗಡೆ ಮಾಡಿದೆ. ಈ ಸಿಬಿಟಿ 1ನೇ ಹಂತದಲ್ಲಿ ಉತ್ತೀರ್ಣರಾದವರು ಸಿಬಿಟಿ 2 ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಹಾಗೇ 2020ರ ಡಿಸೆಂಬರ್​ 28ರಿಂದ 2021ರ ಜುಲೈ 31ರವರೆಗೆ ನಡೆದಿದ್ದ ಎನ್​ಟಿಪಿಸಿ 2, 3, 5 ಮತ್ತು 6ನೇ ಹಂತಗಳ ಪರಿಷ್ಕೃತ ಫಲಿತಾಂಶವನ್ನೂ ನೋಡಬಹುದಾಗಿದೆ. ಅಂದಹಾಗೇ ಸದ್ಯ ರೈಲ್ವೆ […]

RRB NTPC CBT 1 Result: ಎನ್​ಟಿಪಿಸಿ ಪರೀಕ್ಷೆ ಪರಿಷ್ಕೃತ ಫಲಿತಾಂಶ ಬಿಡುಗಡೆ ಮಾಡಿದ ರೈಲ್ವೆ ನೇಮಕಾತಿ ಮಂಡಳಿ; ರಿಸಲ್ಟ್​ ಹೀಗೆ ಚೆಕ್​ ಮಾಡಿಕೊಳ್ಳಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Mar 31, 2022 | 11:35 AM

Share

ರೈಲ್ವೆ ನೇಮಕಾತಿ ಮಂಡಳಿಯು 2019ರಲ್ಲಿ ನಡೆಸಿದ್ದ NTPC CBT-1 (ತಾಂತ್ರಿಕವಲ್ಲದ ಜನಪ್ರಿಯ ವರ್ಗಗಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ) ಪರೀಕ್ಷೆಯ ಪರಿಷ್ಕೃತ ಫಲಿತಾಂಶದ ಅಂಕಪಟ್ಟಿಯಲ್ಲಿ 2022ರ ಮಾರ್ಚ್​ 30ರಂದು rrcb.gov.in. ವೆಬ್​​ಸೈಟ್​​ನಲ್ಲಿ ಬಿಡುಗಡೆ ಮಾಡಿದೆ. ಈ ಸಿಬಿಟಿ 1ನೇ ಹಂತದಲ್ಲಿ ಉತ್ತೀರ್ಣರಾದವರು ಸಿಬಿಟಿ 2 ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಹಾಗೇ 2020ರ ಡಿಸೆಂಬರ್​ 28ರಿಂದ 2021ರ ಜುಲೈ 31ರವರೆಗೆ ನಡೆದಿದ್ದ ಎನ್​ಟಿಪಿಸಿ 2, 3, 5 ಮತ್ತು 6ನೇ ಹಂತಗಳ ಪರಿಷ್ಕೃತ ಫಲಿತಾಂಶವನ್ನೂ ನೋಡಬಹುದಾಗಿದೆ.

ಅಂದಹಾಗೇ ಸದ್ಯ ರೈಲ್ವೆ ನೇಮಕಾತಿ ಮಂಡಳಿಯು ಸದ್ಯ ಆರ್​ಆರ್​ಬಿ ಮುಜಾಫರ್​ಪುರ, ಚೆನ್ನೈ, ಬೆಂಗಳೂರು, ಅಹ್ಮದಾಬಾದ್​, ಸಿಕಂದರಾಬಾದ್​, ಅಜ್ಮೇರ್​, ಅಲಹಾಬಾದ್​, ಸಿಲಿಗುರಿ, ಗುವಾಹಟಿ, ಜಮ್ಮು-ಶ್ರೀನಗರ್​, ಕೋಲ್ಕತ್ತ, ಮಾಲ್ಡಾ, ಮುಂಬೈ, ಪಾಟ್ನಾ, ರಾಂಚಿ, ತಿರುವನಂತಪುರಂ ಪ್ರದೇಶಗಳಿಂದ ಪರೀಕ್ಷೆ ಬರೆದ ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು, ಸದ್ಯದಲ್ಲೇ ಉಳಿದ ಸ್ಥಳಗಳ ಅಭ್ಯರ್ಥಿಗಳ ರಿಸಲ್ಟ್​ ಕೂಡ  rrcb.gov.in. ವೆಬ್​ಸೈಟ್​​ನಲ್ಲಿ ಘೋಷಣೆಯಾಗಲಿದೆ.

ಆರ್​ಆರ್​ಬಿ ಎನ್​​ಟಿಪಿಸಿ ಸಿಬಿಟಿ 1ರ ಪರೀಕ್ಷೆ ಬರೆದವರು ತಮ್ಮ ಫಲಿತಾಂಶವನ್ನು ನೋಡುವ ವಿಧಾನ ಇಲ್ಲಿದೆ:

1. ಮೊದಲು RRB website rrcb.gov.inಅಥವಾ ಪ್ರಾದೇಶಿಕ ವೆಬ್​ಸೈಟ್​ಗೆ ಭೇಟಿ ಕೊಡಿ. ಅಂದರೆ ನೀವು ಬೆಂಗಳೂರಿನಿಂದ ಪರೀಕ್ಷೆ ಬರೆದಿದ್ದರೆ ಆರ್​ಆರ್​ಬಿಯ ಬೆಂಗಳೂರು ವೆಬ್​ಸೈಟ್​ಗೆ ಭೇಟಿ ಕೊಡಿ 2. ಅಲ್ಲಿ ಕಾಣಿಸುತ್ತಿರುವ CEN-01/2019 (NTPC): Link for viewing score card & check level wise eligibility for CBT-2 ಎಂಬಲ್ಲಿ ಕ್ಲಿಕ್ ಮಾಡಿ. ಆಗ ಹೊಸದೊಂದು ಪೇಜ್​ ತೆರೆದುಕೊಳ್ಳುತ್ತದೆ. 3. ಹೀಗೆ ಕಾಣಿಸಿಕೊಂಡ ಪೇಜ್​​ನಲ್ಲಿ ನಿಮ್ಮ ರೋಲ್​ ನಂಬರ್​, ಹುಟ್ಟಿದ ದಿನಾಂಕ, ಲಾಗಿನ್​ ಸೆಕ್ಯೂರಿಟಿಗಾಗಿ ನೀಡುವ ಕ್ಯಾಪ್ಚಾ ಕೋಡ್​ಗಳನ್ನು ದಾಖಲಿಸಿ ಲಾಗಿನ್ ಆಗಿ. ಆಗ ನಿಮ್ಮ ಅಂಕದಪಟ್ಟಿ ಕಾಣಿಸಿಕೊಳ್ಳುತ್ತದೆ. 4. ಆ ಅಂಕದ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿಕೊಂಡು ಡೌನ್​ಲೋಡ್ ಮಾಡಿಕೊಳ್ಳಿ. ಹಾಗೇ ಪ್ರಿಂಟ್ ಕೂಡ ತೆಗೆದು ಇಟ್ಟುಕೊಳ್ಳಿ. 5. ಇದೇ ವೆಬ್​ಸೈಟ್​ನಲ್ಲಿ CEN-01/2019 (NTPC) CBT-1 ಪರೀಕ್ಷೆಯ 2, 3, 5 ಮತ್ತು 6ನೇ ಹಂತದ ಪರಿಷ್ಕೃತ ಫಲಿತಾಂಶ ಕೂಡ ಬಿಡುಗಡೆಯಾಗಿದೆ.

ಇದೀಗ ಸಿಬಿಟಿ -1ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಬಿಟಿ 2ನೇ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ 2022ರ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಲಿದೆ ಎನ್ನಲಾಗಿದೆ. ಎನ್​​ಟಿಪಿಸಿಯ ಒಟ್ಟು 35,281 ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆ ನಡೆದಿದೆ. ಆದರೆ ಒಟ್ಟಾರೆ ಸುಮಾರು  1.25 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಎಂಬುದು ವಿಶೇಷ.

ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ; ಸಿಲಿಂಡರ್, ಬೈಕ್​ಗಳಿಗೆ ಹೂವಿನ ಹಾರ ಹಾಕಿ ಧರಣಿ

Published On - 11:26 am, Thu, 31 March 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್