Kannada News » Photo gallery » Different types of helmets used in working place here is types and reason for that
ಯಾವ ಕ್ಷೇತ್ರದವರು ಯಾವ ಬಣ್ಣದ ಹೆಲ್ಮೆಟ್ ಧರಿಸುತ್ತಾರೆ? ಭಾರತದಲ್ಲಿ ಇದು ಕಡ್ಡಾಯವೇ? ಇಲ್ಲಿದೆ ಕುತೂಹಲಕರ ಮಾಹಿತಿ
Different types of Helmets: ಕಟ್ಟಡ ಕಾರ್ಮಿಕರು ಅಥವಾ ವಿವಿಧ ಕ್ಷೇತ್ರಗಳ ಉದ್ಯೋಗಿಗಳು ಬೇರೆಬೇರೆ ಬಣ್ಣದ ಹೆಲ್ಮೆಟ್ ಮತ್ತು ಟೋಪಿಗಳನ್ನು ಧರಿಸುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅವರು ಅವುಗಳನ್ನು ಏಕೆ ಧರಿಸುತ್ತಾರೆ? ವಿದೇಶದಲ್ಲಿ ಕೆಲಸದ ಸ್ಥಳದಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ನಿಬಂಧನೆಗಳಿವೆ, ಆದರೆ ಭಾರತದಲ್ಲಿಲ್ಲ. ಅದಾಗ್ಯೂ ಎಚ್ಚರಿಕೆಯ ದೃಷ್ಟಿಯಿಂದ ಬಳಸಲಾಗುತ್ತದೆ. ಕಟ್ಟಡ ಕಾರ್ಮಿಕರು ಹಳದಿ, ಪರಿಸರ ಇಲಾಖೆಯವರು ಹಸಿರು, ಪ್ರಾಜೆಕ್ಟ್ ಇಂಜಿನಿಯರ್ಗಳು ಬಿಳಿ, ಎಲೆಕ್ಟ್ರಿಷಿಯನ್ಗಳು ಕೇಸರಿ, ಮೆಕ್ಯಾನಿಕ್ಗಳು ನೀಲಿ ಬಣ್ಣದ ಹೆಲ್ಮೆಟ್ ಧರಿಸುವುದು ವಾಡಿಕೆ.
ಕಟ್ಟಡ ನಿರ್ಮಾಣ ಕಾಮಗಾರಿ ಎಲ್ಲೇ ನಡೆಯುತ್ತಿದ್ದರೂ ಕಾರ್ಮಿಕರು ಹೆಲ್ಮೆಟ್ ಧರಿಸುವುದನ್ನು ಕಾಣುತ್ತೇವೆ. ಆದರೆ ನೀವು ಗಮನಿಸಿರಬಹುದು. ವಿವಿಧ ಸ್ಥಳಗಳಲ್ಲಿ ಕಾರ್ಮಿಕರು ವಿವಿಧ ಬಣ್ಣಗಳ ಹೆಲ್ಮೆಟ್ ಧರಿಸುತ್ತಾರೆ. ಈ ಹೆಲ್ಮೆಟ್‌ಗಳ ಬಣ್ಣಕ್ಕೆ ಯಾವುದೇ ಮಾನದಂಡವಿದೆಯೇ? ವಾಸ್ತವವಾಗಿ ಇಲ್ಲ. ಪರಿಸ್ಥಿತಿಯನ್ನು ಅವಲಂಬಿಸಿ ಸರಳವಾಗಿ ಈ ಹೆಲ್ಮೆಟ್‌ಗಳನ್ನು ಧರಿಸಲಾಗುತ್ತದೆ. ಈ ವರ್ಣರಂಜಿತ ಹೆಲ್ಮೆಟ್‌ಗಳ ಬಳಕೆಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಕಠಿಣ ನಿಯಮಗಳಿವೆ. ಆದರೆ, ನಮ್ಮ ದೇಶದಲ್ಲಿ ಯಾವುದೇ ನಿಯಮಗಳು ಮತ್ತು ನಿಬಂಧನೆಗಳಿಲ್ಲ.
1 / 7
ಅದಾಗ್ಯೂ ಕೆಲಸದ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಹೆಲ್ಮೆಟ್‌ಗಳನ್ನು ಬಳಸಬೇಕು ಎನ್ನುವ ಸೂಚನೆಗಳಿವೆ. ಯಾವ ಕ್ಷೇತ್ರದವರು ಯಾವ ಬಣ್ಣದ ಹೆಲ್ಮೆಟ್ ಧರಿಸುತ್ತಾರೆ? ಇಲ್ಲಿದೆ ನೋಡಿ.