KKR vs PBKS: ಇದು ಹೇಗೆ ಸಾಧ್ಯ?: ರೋಹಿತ್, ಕ್ರಿಸ್ ಗೇಲ್ ದಾಖಲೆ ಪುಡಿಗಟ್ಟಿದ ಬೌಲರ್ ಉಮೇಶ್ ಯಾದವ್

Umesh Yadav, IPL 2022: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಉಮೇಶ್ ಯಾದವ್ ಬೆಂಕಿಯ ಚೆಂಡು ಉಗುಳಿ 4 ವಿಕೆಟ್ ಪಡೆದರು. ಇದರ ಜೊತೆಗೆ ಉಮೇಶ್ ಅವರು ರೋಹಿತ್ ಶರ್ಮಾ ಮತ್ತು ಕ್ರಿಸ್ ಗೇಲ್ ಅವರಂತಹ ಐಪಿಎಲ್​ನ ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ.

Apr 02, 2022 | 12:57 PM
Vinay Bhat

|

Apr 02, 2022 | 12:57 PM

ಐಪಿಎಲ್ 2022 ಆರಂಭಕ್ಕೂ ಮುನ್ನ ಆರ್ ಸಿಬಿ ಕೈಬಿಟ್ಟ ಪರಿಣಾಮ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಉಮೇಶ್ ಯಾದವ್ ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ 8 ವಿಕೆಟ್ ಕಬಳಿಸಿ ಈ ಬಾರಿ ಅತಿ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಬೆಂಕಿಯ ಚೆಂಡು ಉಗುಳಿ 4 ವಿಕೆಟ್ ಪಡೆದರು. ಇದರ ಜೊತೆಗೆ ಉಮೇಶ್ ಅವರು ರೋಹಿತ್ ಶರ್ಮಾ ಮತ್ತು ಕ್ರಿಸ್ ಗೇಲ್ ಅವರಂತಹ ಐಪಿಎಲ್ ನ ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ.

1 / 5
ಉಮೇಶ್ ಯಾದವ್ ಬೌಲರ್. ಮತ್ತೊಂದೆಡೆ, ರೋಹಿತ್ ಮತ್ತು ಗೇಲ್ ಬ್ಯಾಟರ್ ಗಳು. ಹಾಗಾದರೆ ಒಬ್ಬ ಬೌಲರ್ ಇಬ್ಬರು ಬ್ಯಾಟರ್ ಗಳ ದಾಖಲೆಯನ್ನು ಹೇಗೆ ಮುರಿಯಬಹುದು? ಎಂದು ಯೋಚಿಸುತ್ತೀರಿ ಅಲ್ವ. ಈ ದಾಖಲೆಯನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಮೂಲಕ ಪುಡಿ ಮಾಡಬಹುದು. ಹೌದು, ಉಮೇಶ್ ಯಾದವ್ ಐಪಿಎಲ್ ನಲ್ಲಿ ಒಂದು ಎದುರಾಳಿ ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ, ಕ್ರಿಸ್ ಗೇಲ್ ಮತ್ತು ಯೂಸುಫ್ ಪಠಾಣ್ ದಾಖಲೆಯನ್ನು ಪುಡಿ ಮಾಡಿದ್ದಾರೆ.

2 / 5
ಉಮೇಶ್ ಯಾದವ್ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರನೇ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ರೋಹಿತ್, ಗೇಲ್ ಮತ್ತು ಯೂಸುಫ್ ಪಠಾಣ್ ಯಾವುದೇ ಎದುರಾಳಿಯ ಒಂದು ಐಪಿಎಲ್ ತಂಡದ ವಿರುದ್ಧ 5 ಬಾರಿ ಪಂದ್ಯ ಶ್ರೇಷ್ಠರಾಗಿದ್ದಾರಷ್ಟೆ.

3 / 5
ರೋಹಿತ್ ಶರ್ಮಾ ಕೆಕೆಆರ್ ವಿರುದ್ಧ 5 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಕ್ರಿಸ್ ಗೇಲ್ ಕೂಡ ಕೆಕೆಆರ್ ವಿರುದ್ಧ 5 ಬಾರಿ ಮತ್ತು ಯೂಸುಫ್ ಪಠಾಣ್ ಡೆಕ್ಕನ್ ಚಾರ್ಜರ್ಸ್ ವಿರುದ್ಧ 5 ಬಾರಿ ಪಂದ್ಯ ಶ್ರೇಷ್ಠ ತಮ್ಮದಾಗಿಸಿದ್ದರು. ಇದೀಗ ಉಮೇಶ್ ಪಂಜಾಬ್ ವಿರುದ್ಧ ಆರನೇ ಬಾರಿ ಪಂದ್ಯಶ್ರೇಷ್ಠ ಬಾಜಿಕೊಂಡು ಎಲ್ಲ ದಾಖಲೆ ಅಳಿಸಿ ಹಾಕಿದ್ದಾರೆ.

4 / 5
ಈ ಮೂವರು ಆಟಗಾರರ ದಾಖಲೆ ಮುರಿದಿದ್ದಲ್ಲದೆ ಉಮೇಶ್ ಯಾದವ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ವೇಗಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ 4 ಓವರ್ ಗಳಲ್ಲಿ 4 ವಿಕೆಟ್ ಗಳನ್ನು ಕಬಳಿಸಿ ಮಿಂಚಿದ್ದರು.

5 / 5

Follow us on

Most Read Stories

Click on your DTH Provider to Add TV9 Kannada