- Kannada News Photo gallery Cricket photos IPL 2022: RCB ಪರ ಗ್ಲೆನ್ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳುವುದು ಅನುಮಾನ
IPL 2022: RCB ತಂಡದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳುವುದು ಅನುಮಾನ
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್.
Updated on: Apr 02, 2022 | 4:10 PM

ಐಪಿಎಲ್ನ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ದ ಆಡಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಆರ್ಸಿಬಿ ಅಭ್ಯಾಸವನ್ನೂ ಕೂಡ ಆರಂಭಿಸಿದೆ. ಆದರೆ ಕ್ವಾರಂಟೈನ್ನಲ್ಲಿರುವ ಕಾರಣ ಅಭ್ಯಾಸದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕಾಣಿಸಿಕೊಂಡಿಲ್ಲ. ಇನ್ನೆರಡು ದಿನಗಳಲ್ಲಿ ಮ್ಯಾಕ್ಸ್‌ವೆಲ್ ಅವರ ಕ್ವಾರಂಟೈನ್ ಮುಗಿಯಲಿದೆ.

ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ವಿರುದ್ದ ಮ್ಯಾಕ್ಸ್‌ವೆಲ್ ಆಡುವುದು ಕೂಡ ಅನುಮಾನ. ಏಕೆಂದರೆ ಆಸ್ಟ್ರೇಲಿಯಾ ಆಟಗಾರರು ಏಪ್ರಿಲ್ 5 ರ ಬಳಿಕವಷ್ಟೇ ಐಪಿಎಲ್ನಲ್ಲಿ ಭಾಗವಹಿಸಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಈ ಹಿಂದೆ ತಿಳಿಸಿತ್ತು. ಇದಕ್ಕೆ ಮುಖ್ಯ ಕಾರಣ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ್ ವಿರುದ್ದ ಸರಣಿ ಆಡುತ್ತಿರುವುದು.

ಪಾಕ್ ವಿರುದ್ದದ ಸರಣಿಯ ವೇಳೆ ಅನೇಕ ಆಸ್ಟ್ರೇಲಿಯಾ ಆಟಗಾರರು ತಂಡದಿಂದ ಹೊರಗುಳಿದಿದ್ದರು. ಐಪಿಎಲ್ನಲ್ಲಿ ಭಾಗವಹಿಸಲು ಈ ಆಟಗಾರರು ರಾಷ್ಟ್ರೀಯ ತಂಡದಿಂದ ಹಿಂದೆ ಸರಿದಿದ್ದಾರೆ ಎಂದು ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಪಾಕ್ ವಿರುದ್ದದ ಸರಣಿ ಮುಗಿಯೋವರೆಗೆ ಐಪಿಎಲ್ ಆಡಲು ಎನ್ಒಸಿ ನೀಡಲ್ಲ ಎಂದು ತಿಳಿಸಿತ್ತು.

ಅತ್ತ ಪಾಕಿಸ್ತಾನ್-ಆಸ್ಟ್ರೇಲಿಯಾ ನಡುವಣ ಸರಣಿ ಮುಗಿಯೋದು ಏಪ್ರಿಲ್ 5 ಕ್ಕೆ. ಹಾಗೆಯೇ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯವು ಏಪ್ರಿಲ್ 5 ರಂದು ನಡೆಯಲಿದೆ. ಅಂದರೆ ಏಪ್ರಿಲ್ 6 ರಿಂದ ಆಸ್ಟ್ರೇಲಿಯಾ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ ಐಪಿಎಲ್ಗಾಗಿ ಆಗಮಿಸಿದರೂ ಮ್ಯಾಕ್ಸ್‌ವೆಲ್ ರಾಜಸ್ಥಾನ್ ರಾಯಲ್ಸ್ ವಿರುದ್ದ ಆಡೋದು ಅನುಮಾನ ಎನ್ನಲಾಗಿದೆ. ಇನ್ನು ಮದುವೆಯ ಕಾರಣ ತಂಡದಿಂದ ಹೊರಗುಳಿದಿರುವ ಮ್ಯಾಕ್ಸ್ವೆಲ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಏಪ್ರಿಲ್ 5 ರಂದೇ ಆಡಲು ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ.

ಇದಾಗ್ಯೂ ಶನಿವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.




