Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚರಿಸುವ ಮಾರ್ಗದಲ್ಲಿ ವಿದ್ಯುತ್ ಅವಘಡ
Amit Shah in Karnataka: ಕೇಂದ್ರ ಸಚಿವ ಅಮಿತ್ ಶಾ ಅರಮನೆ ಮೈದಾನಕ್ಕೆ ತೆರಳಬೇಕಿದ್ದ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಅಂಡರ್ ಗ್ರೌಂಡ್ ಎಲೆಕ್ಟ್ರಿಕ್ ಕೇಬಲ್ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಿಂದ ವಿಶೇಷ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ವಾಪಸಾದವರೇ, ಎಚ್ ಎ ಎಲ್ ವಿಮಾನನಿಲ್ದಾಣದಿಂದ ಮೌಂಟ್ ಕಾರ್ಮೆಲ್ ಕಾಲೇಜು ಮಾರ್ಗವಾಗಿ ಅರಮನೆ ಮೈದಾನಕ್ಕೆ ರಸ್ತೆ ಮಾರ್ಗವಾಗಿ ತೆರಳಬೇಕಿತ್ತು. ಆದರೆ ಇದೀಗ ಅವರ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅಮಿತ್ ಶಾ (Union minister Amit Shah) ತೆರಳಬೇಕಿದ್ದ ಮಾರ್ಗದಲ್ಲಿ ಅಗ್ನಿಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮಾರ್ಗ ಬದಲಿಸಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಮಿತ್ ಶಾ ಒಂದೇ ಕಾರಿನಲ್ಲಿ ಪ್ರಯಾಣಿಸಲು ಸಿದ್ಧವಾಗುತ್ತಿದ್ದಾಗ ಈ ಅವಘಡದ ಬಗ್ಗೆ ಮಾಹಿತಿ ಸಿಕ್ಕಿದೆ. ಕೇಂದ್ರ ಸಚಿವ ಅಮಿತ್ ಶಾ ಅರಮನೆ ಮೈದಾನಕ್ಕೆ ತೆರಳಬೇಕಿದ್ದ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಅಂಡರ್ ಗ್ರೌಂಡ್ ಎಲೆಕ್ಟ್ರಿಕ್ ಕೇಬಲ್ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಡ್ರೈನೇಜ್ ಮೇಲೆ ಕಾರು ಹೋದಾಗ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ (Electrical Mishap).
ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಭೇಟಿ ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಭೇಟಿ ನೀಡಿದ್ದಾರೆ. ಘಟನಾ ಸ್ಥಳ ವೀಕ್ಷಿಸಿದ ಕಮಲ್ ಪಂತ್ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿದರು. ಶಾಂಗ್ರಿಲಾ ಹೋಟೆಲ್ ಮುಂಭಾಗದಲ್ಲೇ ಇದ್ದಕ್ಕಿದ್ದಂತೆ ಬ್ಲಾಸ್ಟ್ ರೀತಿ ಅವಘಡ ಸಂಭವಿಸಿದೆ. ಸ್ಫೋಟದಿಂದ ಫುಟ್ ಪಾತ್ ಗೆ ಅಳವಡಿಸಿದ್ದ ಪವರ್ ಚೇಂಬರ್ ಕಿತ್ತು ಬಂದಿದೆ. ಬದಲಾದ ಮಾರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿನ ವಸಂತನಗರದಲ್ಲಿರುವ ಶಾಂಗ್ರಿಲಾ ಹೋಟೆಲ್ ತಲುಪಿದ್ದಾರೆ.
ಯುಗಾದಿ ಮುನ್ನಾ ದಿನ ಬೆಂಗಳೂರಿಗೆ ಮಳೆ ಸಿಂಚನ ಬೆಂಗಳೂರು: ಬಿಸಿಲ ಬೇಗೆಗೆ ಬೆಂದಿದ್ದ ಬೆಂಗಳೂರಿಗೆ ಇಂದು ಸಂಜೆಯ ವೇಳೆ ವರುಣ ತಂಪೆರೆದಿದ್ದಾನೆ. ಯುಗಾದಿ ಮುನ್ನಾ ಸಂದರ್ಭದಲ್ಲಿ ರಾಜಧಾನಿಯ ಬಹುತೇಕ ಭಾಗಗಳಲ್ಲಿ ಜೋರಾಗಿಯೇ ಮಳೆಯಾಗಿದೆ. ಇದರಿಂದ ಬಿಸಿಲ ಬೇಗೆಗೆ ಬಸವಳಿದಿದ್ದ ರಾಜಧಾನಿ ಮಂದಿ ಮಳೆಗೆ ಮೈಯೊಡ್ಡಿದ್ದಾರೆ. ಆದರೆ ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಗಾಗಿ ಹೋದವರಿಗೆ ನಿರಾಸೆಯಾಗಿದೆ. ಬೆಂಗಳೂರಿನ ಹಲವೆಡೆ ಜಿಟಿಜಿಟಿ ಮಳೆಯೂ ಬೀಳುತ್ತಿದೆ. ಉತ್ತರ ಭಾಗದಲ್ಲಿ ವಸಂತನಗರ, ಕಬ್ಬನ್ ಪಾರ್ಕ್, ಮೆಜೆಸ್ಟಿಕ್, ರೇಸ್ ಕೋರ್ಸ್ ಸುತ್ತಮುತ್ತ ಮಳೆಯಾಗಿದ್ದರೆ ದಕ್ಷಣ ಭಾಗದಲ್ಲಿ ಜಯನಗರ, ಬಸವನಗುಡಿ, ಜೆಪಿ ನಗರಗಳಲ್ಲಿಯೂ ಮಳೆಯಾಗಿದೆ.
ಈ ಮಧ್ಯೆ, ಅರಮನೆ ಮೈದಾನದಲ್ಲಿ ಸಹಕಾರ ಕಾರ್ತ್ರಮ ಮುಗಿಸಿಕೊಂಡು ತಮ್ಮ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿಯ ಜಗನ್ನಾಥ ಭನವದತ್ತ ಮುಖ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಳೆ ಎದುರುಗೊಂಡಿದೆ. ಮಲ್ಲೇಶ್ವರಂನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸ್ ಸಿಬ್ಬಂದಿ ಮಳೆಯಲ್ಲೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇದನ್ನೂ ಓದಿ: ಮುದ್ದೇನಹಳ್ಳಿ ಶ್ರೀ ಸತ್ಯ ಸಾಯಿ ಮೆಡಿಕಲ್ ಕಾಲೇಜನ್ನು ಉಚಿತವಾಗಿ ನಡೆಸಲಾಗುವುದು: ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ
ಇದನ್ನೂ ಓದಿ:
ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ: ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಹೇಳಿಕೆ
Published On - 5:13 pm, Fri, 1 April 22