AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಟ್ಕಾ Vs ಹಲಾಲ್ : ಇವುಗಳ ನಡುವೆ ಏನಿದೆ ವ್ಯತ್ಯಾಸ? ಯಾವ ಮಾಂಸ ಉತ್ತಮ?

ಹಲಾಲ್ ಪ್ರಕ್ರಿಯೆಯಲ್ಲಿ ಪ್ರಾಣಿಗಳ ಅಪಧಮನಿಗಳಿಂದ ರಕ್ತವು ಬರಿದಾಗುವುದರಿಂದ, ವಧೆಯ ನಂತರ ಹೃದಯವು ಪಂಪ್ ಮಾಡುವುದನ್ನು ಮುಂದುವರೆಸಿದಾಗ ಹೆಚ್ಚಿನ ವಿಷವನ್ನು ಹೊರಹಾಕುತ್ತದೆ. ಹಾಗಾಗಿ ಹಲಾಲ್, ರಕ್ತವು ಸರಿಯಾಗಿ ಬರಿದಾಗದ ಜಟ್ಕಾಕ್ಕಿಂತ....

ಜಟ್ಕಾ Vs ಹಲಾಲ್ : ಇವುಗಳ ನಡುವೆ ಏನಿದೆ ವ್ಯತ್ಯಾಸ? ಯಾವ ಮಾಂಸ ಉತ್ತಮ?
ಮಾಂಸ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Apr 01, 2022 | 8:24 PM

Share

ಹಲಾಲ್ ಪ್ರಮಾಣೀಕರಣದ ಹಣವನ್ನು ದೇಶವಿರೋಧಿ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಆರೋಪಿಸಿರುವ ಕರ್ನಾಟಕದ ಹಿಂದುತ್ವ ಗುಂಪುಗಳು ಏಪ್ರಿಲ್ 2 ರಂದು ಯುಗಾದಿ ಹಬ್ಬಕ್ಕೆ (Ugadi festival) ಮೊದಲು ಹಲಾಲ್ (Halal) ಮಾಂಸವನ್ನು ನಿಷೇಧಿಸಬೇಕೆಂದು ಒತ್ತಾಯಿಸಿವೆ. ಹಲಾಲ್ ಮಾಂಸವು ಮುಸ್ಲಿಂ ಸಮುದಾಯದ ‘ಆರ್ಥಿಕ ಜಿಹಾದ್‌’ನ ಭಾಗವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi)  ಹೇಳಿದ್ದಾರೆ. ಮುಸ್ಲಿಮರು ಹಿಂದೂಗಳಿಂದ ಹಲಾಲ್ ಅಲ್ಲದ ಮಾಂಸವನ್ನು ಖರೀದಿಸಲು ನಿರಾಕರಿಸಿದಾಗ, ನೀವು ಹಿಂದೂಗಳನ್ನು ಅವರಿಂದ ಖರೀದಿಸಲು ಏಕೆ ಒತ್ತಾಯಿಸಬೇಕು? ಎಂಬುದು ಸಿಟಿ ರವಿಯವರ ಪ್ರಶ್ನೆ. ಹಲಾಲ್ ಮಾಂಸ ಮತ್ತು ಜಟ್ಕಾ (Jhatka) ಮಾಂಸ ವಿವಾದಗಳ ನಡುವೆ  ಆರೋಗ್ಯ ದೃಷ್ಟಿಯಲ್ಲಿ ಯಾವ ಮಾಂಸ  ಒಳ್ಳೆಯದು ? ಯಾಕೆ? ಎಂಬೀ ಪ್ರಶ್ನೆಗಳಿಗೆ ಆರೋಗ್ಯ ತಜ್ಞರ ಅಭಿಪ್ರಾಯಗಳು ಇಲ್ಲಿದೆ.

ಹಲಾಲ್ ಮತ್ತು ಜಟ್ಕಾ ಮಾಂಸಗಳ ನಡುವಿನ ವ್ಯತ್ಯಾಸವೇನು? ಮುಸ್ಲಿಮರು ಹಲಾಲ್ ಮಾಂಸದ ಅಭ್ಯಾಸವನ್ನು ಅನುಸರಿಸುತ್ತಾರೆ. ಆದರೆ ಸಿಖ್ ಸಮುದಾಯವು ‘ಜಟ್ಕಾ’ಕ್ಕೆ ಆದ್ಯತೆ ನೀಡುತ್ತದೆ. ಅರೇಬಿಕ್ ಭಾಷೆಯಲ್ಲಿ ಹಲಾಲ್ ಎಂಬ ಪದದ ಅರ್ಥ ‘ಬಳಕೆಗೆ ಯೋಗ್ಯ’. ಈ ಪ್ರಕ್ರಿಯೆಯು ಕುರಾನ್‌ನ ಸಾಲುಗಳೊಂದಿಗೆ ಪ್ರಾಣಿಯನ್ನು ನಿಧಾನವಾಗಿ ವಧೆ ಮಾಡುವುದಾಗಿದೆ. ಆದಾಗ್ಯೂ, ಜಟ್ಕಾ ಎಂದರೆ ವೇಗವಾಗಿ,ಒಂದೇ ಹೊಡೆತದಲ್ಲಿ ಪ್ರಾಣಿಗಳ ತಲೆಯನ್ನು ಕತ್ತರಿಸುವುದು, ಇದರಿಂದಾಗಿ ಪ್ರಾಣಿ “ಹೆಚ್ಚು ನೋವು” ಇಲ್ಲದೆ ತಕ್ಷಣವೇ ಸಾಯುತ್ತದೆ.

ಎರಡೂ ಪ್ರಕ್ರಿಯೆಗಳಲ್ಲಿ ಮಾಂಸದಲ್ಲಿ ಪೌಷ್ಟಿಕಾಂಶದ ಮೌಲ್ಯ ಹೇಗಿರುತ್ತದೆ? ಹಲಾಲ್ ಪ್ರಕ್ರಿಯೆಯಲ್ಲಿ ಪ್ರಾಣಿಗಳ ಅಪಧಮನಿಗಳಿಂದ ರಕ್ತವು ಬರಿದಾಗುವುದರಿಂದ, ವಧೆಯ ನಂತರ ಹೃದಯವು ಪಂಪ್ ಮಾಡುವುದನ್ನು ಮುಂದುವರೆಸಿದಾಗ ಹೆಚ್ಚಿನ ವಿಷವನ್ನು ಹೊರಹಾಕುತ್ತದೆ. ಹಾಗಾಗಿ ಹಲಾಲ್, ರಕ್ತವು ಸರಿಯಾಗಿ ಬರಿದಾಗದ ಜಟ್ಕಾಕ್ಕಿಂತ ಹೆಚ್ಚಿನ ಪೋಷಣೆಯನ್ನು ಹೊಂದಿದೆ ಎಂದು ಕೆಲವು ತಜ್ಞರು ಹೇಳುತ್ತಾರೆ. ಜಟ್ಕಾ ಮಾಂಸವು ಗಟ್ಟಿ ಮತ್ತು ಶುಷ್ಕವಾಗಿರುತ್ತದೆ. ಪೌಷ್ಟಿಕಾಂಶ ಕಾರ್ಯಕರ್ತೆಯೂ ಆಗಿರುವ ಬೆಂಗಳೂರಿನ ವಕೀಲ ಕ್ಲಿಫ್ಟನ್ ರೋಸಾ ಕ್ಲಿಫ್ಟನ್ ರೊಜಾರಿಯೊ ಪ್ರಕಾರ“ನಾವು ಇಲ್ಲಿ ಸಮಸ್ಯೆಯನ್ನು ಯಾಕೆ  ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ? ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ, ನಾವು ಅದು ಹೇಗಿದೆಯೋ ಅದನ್ನು ಹಾಗೆಯೇ ಹೇಳಿ. ಮಾಂಸಕ್ಕಾಗಿರುವ ವಧೆ ಯಾವುದೇ ಪೌಷ್ಟಿಕಾಂಶದ ಮೌಲ್ಯಕ್ಕೆ ಸಂಬಂಧಿಸಿದ್ದಾಗಿಲ್ಲ. ಇದು ಸಂಪೂರ್ಣವಾಗಿ ಧಾರ್ಮಿಕವಾಗಿದೆ ಎಂದು  ಹೇಳಿರುವುದಾಗಿ  ನ್ಯೂಸ್ 18 ವರದಿ ಮಾಡಿದೆ.

ಕರ್ನಾಟಕದ ಸಾರ್ವಜನಿಕ ಆರೋಗ್ಯ ವೈದ್ಯೆ ಸಿಲ್ವಿಯಾ ಕರ್ಪಗಮ್ ಪ್ರಕಾರ “ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕರೆಗಳು ಬಂದರೆ, ಅವರು (ಸರ್ಕಾರ) ಯಾವ ಪರ್ಯಾಯಗಳನ್ನು ತರುತ್ತಿದ್ದಾರೆಯೇ? ಉತ್ತಮ ಗುಣಮಟ್ಟದ ಪ್ರೋಟೀನ್ , ವಿಟಮಿನ್​​ಗಳು ಮತ್ತು ಖನಿಜಗಳು ಪ್ರಾಣಿ ಮೂಲದ ಆಹಾರದಿಂದ ಬರುತ್ತವೆ ಮತ್ತು ಇದು ಮಾಂಸದಲ್ಲಿರುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಪಡಿತರ ಅಂಗಡಿಗಳು ಮತ್ತು ಮಧ್ಯಾಹ್ನದ ಊಟದ ಯೋಜನೆ ಸ್ಥಗಿತಗೊಂಡಿರುವುದರಿಂದ ರಾಜ್ಯದಲ್ಲಿ ಉಲ್ಬಣಗೊಂಡಿರುವ ಗಂಭೀರ ಅಪೌಷ್ಟಿಕತೆಯ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಏನಾದರೂ ಮಾಡುತ್ತಿದೆಯೇ? ಇದೊಂದು ರಾಜಕೀಯ ಅಜೆಂಡಾ. ಅಸ್ತಿತ್ವದಲ್ಲಿರುವ ಮೂಲಗಳನ್ನು ಸಹ ಮುಚ್ಚುವ ಬದಲು ಸರ್ಕಾರವು ಮಾಂಸಾಹಾರ ಜನರಿಗೆ ಹೆಚ್ಚು ಲಭಿಸುವಂತೆ ಮಾಡಬೇಕಾಗಿದೆ. ಇದು ಜೀವನೋಪಾಯ ಮತ್ತು ಪೋಷಣೆ ಎರಡರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಫ್ರೀ ಪ್ರೆಸ್ ಜರ್ನಲ್‌ನಲ್ಲಿನ ಲೇಖನವೊಂದರಲ್ಲಿ, ಇಸ್ಲಾಮಿಕ್ ಥಿಯಾಲಜಿ ಪ್ರಾಧ್ಯಾಪಕ ಡಾ ಇಮಾಮ್-ಉಲ್-ಉನ್ಸಿಫ್ ಅವರು ಕೇವಲ ಧಾರ್ಮಿಕ ಆಚರಣೆಯನ್ನು ಹೊರತುಪಡಿಸಿ, “ಹಲಾಲ್‌ಗೆ ಬೇರೆ ಯಾವುದೇ ಮಹತ್ವವಿಲ್ಲ”. “ಜಟ್ಕಾ ಹೆಚ್ಚು ಮಾನವೀಯವಾಗಿದೆ, ಅದು ಪ್ರಾಣಿಗಳಿಗೆ ಅಸಹನೀಯ ನೋವನ್ನು ಉಂಟುಮಾಡುವುದಿಲ್ಲ ಎಂದಿದ್ದಾರೆ.

ಎರಡು ಪ್ರಕ್ರಿಯೆಯಲ್ಲಿಯೂ ಪ್ರಾಣಿ ಹತ್ಯೆಯಾಗುತ್ತಿದೆ ಎಂಬ ತರ್ಕವಿದೆಯೇ? ವರದಿಗಳ ಪ್ರಕಾರ  ವೈಜ್ಞಾನಿಕ ದೃಷ್ಟಿಕೋನದಿಂದ ಮಾಂಸವನ್ನು ಮೃದುವಾಗಿ ಮತ್ತು ರಸಭರಿತವಾಗಿಡಲು, ಹತ್ಯೆಯ ನಂತರ PH ಮಟ್ಟವು ಸುಮಾರು 5.5 ಆಗಿರಬೇಕು. ಜಟ್ಕಾ ಮಾಂಸದಲ್ಲಿ  PH ಮೌಲ್ಯವು 7 ರಷ್ಟಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಏಪ್ರಿಲ್ 2 ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಯುಗಾದಿ ಹಬ್ಬದ ಮಾರನೇ ದಿನ ಹಿಂದೂ ಕುಟುಂಬಗಳು ಮಾಂಸವನ್ನು ಸೇವಿಸುವ ಹಬ್ಬವನ್ನು ಆಯೋಜಿಸುತ್ತವೆ. ಇಸ್ಲಾಮಿಕ್ ಆಚರಣೆಗಳ ಪ್ರಕಾರ ಮುಸ್ಲಿಮರು ಹಲಾಲ್ ಮಾಂಸವನ್ನು ಮಾತ್ರ ಸೇವಿಸಬಹುದು. ಮುಸ್ಲಿಂ ವ್ಯಾಪಾರಿಗಳು ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಕರ್ನಾಟಕದ ದೇವಸ್ಥಾನಗಳ ಜಾತ್ರೆಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ನಿಷೇಧವನ್ನು ಎದುರಿಸುತ್ತಿದ್ದಾರೆ.

ಧಾರ್ಮಿಕ ಸಂದರ್ಭಗಳಲ್ಲಿ ದೇವಸ್ಥಾನದ ಆವರಣದ ಬಳಿ ಹಿಂದೂಯೇತರರನ್ನು ನಿಷೇಧಿಸುವ ಕ್ರಮವನ್ನು ಬಸವರಾಜ ಬೊಮ್ಮಾಯಿ ಸರ್ಕಾರವು ಸಮರ್ಥಿಸಿಕೊಂಡಿದೆ. ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ವಿವಾದವನ್ನು ಹುಟ್ಟುಹಾಕಲು ಆರ್‌ಎಸ್‌ಎಸ್ ಮತ್ತು ಸಂಘಪರಿವಾರ ಶ್ರಮಿಸುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ದೂಷಿಸಿದೆ.

ಇದನ್ನೂ ಓದಿ: ಹಲಾಲ್ VS ಜಟ್ಕಾ ಕಟ್: ಕರ್ನಾಟಕದಲ್ಲಿ ಮುಂದುವರಿದ ವಿವಾದ, ಹಲವೆಡೆ ಕರಪಪತ್ರ ಹಂಚಿಕೆ ಫಲಕ ತೆರವು

ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್