Ugadi 2022: ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ಯುಗಾದಿ ಸಂಭ್ರಮ; ಮುಂಜಾನೆಯಿಂದಲೇ ಭಕ್ತರ ದಂಡು

Ugadi 2022: ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ಯುಗಾದಿ ಸಂಭ್ರಮ; ಮುಂಜಾನೆಯಿಂದಲೇ ಭಕ್ತರ ದಂಡು
ಐತಿಹಾಸಿಕ ಉಣಕಲ್​ನ ಚಂದ್ರಮೌಳೇಶ್ವರ ದೇವಸ್ಥಾನ

ಗೋ ಪೂಜೆ, ಭೂಮಿ ಪೂಜೆ ಮೂಲಕ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಸ್ವಾಮೀಜಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

TV9kannada Web Team

| Edited By: ganapathi bhat

Apr 02, 2022 | 10:05 AM


ಚಿಕ್ಕೋಡಿ: ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಸರಕಾರ ಘೋಷಣೆ ಹಿನ್ನಲೆ ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ರಾಜ್ಯ ಧಾರ್ಮಿಕ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆ‌ ನಿಪ್ಪಾಣಿ ಪಟ್ಟಣದ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿಯೂ ಕಾರ್ಯಕ್ರಮ ನಡೆಸಲಾಗಿದೆ. ಗೋ ಪೂಜೆ, ಭೂಮಿ ಪೂಜೆ ಮೂಲಕ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಸ್ವಾಮೀಜಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ರಾತ್ರಿ 9.30ರವರೆಗೆ ದೇವರ ದರ್ಶನ ಪಡೆಯುವುದಕ್ಕೆ ಅವಕಾಶ ಇರಲಿದೆ. ದೇವಾಲಯಗಳಲ್ಲಿ ಭಕ್ತರಿಗೆ ಬೇವು-ಬೆಲ್ಲ, ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆ ಸೂಚನೆಯಂತೆ ದೇಗುಲಗಳಲ್ಲಿ ಪೂಜೆ ನಡೆಸಲಾಗಿದ್ದು ದೇಗುಲಗಳಲ್ಲಿ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ದೇವಾಲಯಗಳ ಆವರಣದಲ್ಲಿ ನಾಟಕ, ಭರತನಾಟ್ಯ ಆಯೋಜನೆ ಮಾಡಲಾಗಿದೆ.

ಇತ್ತ ಮೈಸೂರು ದೇಗುಲಗಳಲ್ಲಿ ಧಾರ್ಮಿಕ ದಿನ ಆಚರಣೆ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಧಾರ್ಮಿಕ‌ ದಿನ ಆಚರಣೆಗೆ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ಬೆಟ್ಟ, ಅರಮನೆ ಆಂಜನೇಯಸ್ವಾಮಿ ದೇಗುಲ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ತಲಕಾಡಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸಮೂಹ ದೇವಾಲಯ ಮುಂತಾದೆಡೆ ಹಬ್ಬ ಆಚರಿಸಲಾಗುತ್ತಿದೆ. ಬೆಳಿಗ್ಗೆ 5.30 ರಿಂದ ವಿಶೇಷ ಅಭಿಷೇಕ, ಪೂಜೆ, ಬೇವು ಬೆಲ್ಲ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಜೆ 5 ಗಂಟೆಗೆ ಉತ್ಸವ ಮತ್ತು ಪಂಚಾಂಗ ಶ್ರವಣ ಇರಲಿದೆ. ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಯುಗಾದಿ ಹಿನ್ನೆಲೆ ಮೈಸೂರಿನ ತ್ರಿವೇಣಿ ಸಂಗಮದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ವಿವಿಧ ಗ್ರಾಮಗಳಿಂದ ದೇವರ ವಿಗ್ರಹಗಳನ್ನ ತಂದು ಪೂಜೆ ಸಲ್ಲಿಕೆ ಮಾಡಲಾಗಿದೆ.

ಭೈರಪ್ಪ ಬಂಡಿ ಜಾತ್ರೆಯಲ್ಲಿ ರಾರಾಜಿಸಿದ ಪವರ್ ಸ್ಟಾರ್!

ಯುಗಾದಿ ಹಿನ್ನೆಲೆ ಮೈಸೂರಿನಲ್ಲಿ ಜಾತ್ರೆ ಸಂಭ್ರಮ ಮನೆಮಾಡಿದೆ. ಜಾತ್ರೆಯಲ್ಲಿ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ರಾರಾಜಿಸಿದ್ದಾರೆ. ಮೈಸೂರು ತಾಲ್ಲೂಕಿನ ಹಿಮ್ಮಾವು ಗ್ರಾಮದ ಭೈರಪ್ಪ ಬಂಡಿ ಜಾತ್ರೆಯಲ್ಲಿ ಎತ್ತಿನ ಕೊಂಬುಗಳಲ್ಲಿ ಅಪ್ಪು ಮಿಂಚಿದ್ದಾರೆ! ಅಪ್ಪು ಭಾವಚಿತ್ರದ ಜೊತೆ ಜೋಡಿ ಎತ್ತುಗಳು ಸಾಗಿವೆ. ಬಲೂನ್ ಜೊತೆ ಅಪ್ಪು ಭಾವ ಚಿತ್ರ ಕಂಡುಬಂದಿದೆ. ಜಾತ್ರೆ ನೋಡಲು ಸಾವಿರಾರು ಭಕ್ತರ ದಂಡು ಬಂದಿದ್ದು ಹಬ್ಬದಲ್ಲಿ ಸಂಭ್ರಮಿಸಿದ್ದಾರೆ. ಕೊರೊನಾ ಹಿನ್ನೆಲೆ ಈ ಮೊದಲು ಸ್ಥಗಿತವಾಗಿದ್ದ ಐತಿಹಾಸಿಕ ಜಾತ್ರೆ ಈ ಬಾರಿ ಮತ್ತೆ ಅದ್ಧೂರಿಯಾಗಿ ನೆರವೇರಿದೆ. ಸೇಬಿನ ಹಾರ ಹಾಕಿಕೊಂಡು ಸಾಗಿದ ಎತ್ತುಗಳು ಜನರ ಗಮನ ಸೆಳೆದಿದೆ.

ಹುಬ್ಬಳ್ಳಿ: ಐತಿಹಾಸಿಕ ಉಣಕಲ್​ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ‌ ಹಬ್ಬದ ಸಂಭ್ರಮ

ಹುಬ್ಬಳ್ಳಿಯ ಜನತೆ ಯುಗಾದಿಯನ್ನು ಸಡಗರದಿಂದ ಬೇವು- ಬೆಲ್ಲ ಸವಿದು ಬರಮಾಡಿಕೊಳ್ಳುತ್ತಿದೆ. ಹಬ್ಬಕ್ಕೆ ವಾಣಿಜ್ಯ ನಗರಿ‌ ಹುಬ್ಬಳ್ಳಿಯಲ್ಲಿ ಸಂಭ್ರಮ ಮನೆಮಾಡಿದೆ. ಭಕ್ತರು ಪ್ರಮುಖ ದೇವಾಲಯಗಳಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಐತಿಹಾಸಿಕ ಉಣಕಲ್​ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ‌ ಮುಂಜಾನೆಯ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಗಳಿಗೆಯನ್ನು ಭಕ್ತರು ಕಣ್ಣು ತುಂಬಿಕೊಂಡಿದ್ದಾರೆ. ಶತಮಾನಗಳಷ್ಟು ಹಳೇಯಾದಾದ ಚಂದ್ರಮೌಳೇಶ್ವರ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಯುಗಾದಿ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೂರ್ಯರಶ್ಮಿ ಶಿವಲಿಂಗ ಸ್ಪರ್ಶಿಸುವುದರ ದರ್ಶನ ಮಾಡುತ್ತಾರೆ. 12 ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಕಟ್ಟಲಾದ ದೇವಸ್ಥಾನ ಇದಾಗಿದೆ. ಈ ದೇವಸ್ಥಾನದಲ್ಲಿರುವ ಚತುರ್ಮುಖ ಶಿವಲಿಂಗ ವಿಶೇಷ ಪೂಜೆ ನಡೆಸಲಾಗುತ್ತದೆ. ದೇವಸ್ಥಾನ ದ್ವಾರ ಬಾಗಿಲಿನ ಮೇಲಿರುವ ಕಿಂಡಿಗಳ ಮುಖಾಂತರ ಪ್ರತಿ ವರ್ಷ ಸೂರ್ಯ ರಶ್ಮಿ ಸ್ಪರ್ಶವಾಗುತ್ತದೆ.

ಯುಗಾದಿ ಪಾಡ್ಯ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ‌ ರನ್ನ ಬೆಳಗಲಿಯ ಅಮೃತೇಶ್ವರ ದೇಗುಲದ ಲಿಂಗದ ಮೇಲೆ ಸೂರ್ಯೋದಯದ ಕಿರಣ ಸೋಕಿದೆ. ಕೆಲ ನಿಮಿಷಗಳವರೆಗೂ ಲಿಂಗದ ಮೇಲೆ ಸೂರ್ಯರಶ್ಮಿ ಕಾಣಿಸಿಕೊಂಡಿದೆ. ಕಲ್ಯಾಣ ಚಾಲುಕ್ಯ‌ ಶಿಲ್ಪಕೆತ್ತನೆಯ ಅಮೃತೇಶ್ವರ ದೇಗುಲದಲ್ಲಿ ಈ ವಿಶೇಷ ನಡೆಯುತ್ತದೆ. ಪ್ರತಿ ವರ್ಷ ಯುಗಾದಿಯ ಮೊದಲ ದಿನ ಸೂರ್ಯನ ಕಿರಣ ಲಿಂಗದ ಮೇಲೆ ಕಾಣಿಸಿಕೊಳ್ಳುತ್ತದೆ. ಸೂರ್ಯದೇವನಿಂದ ಲಿಂಗದ ಪೂಜೆ ನೆರವೇರುತ್ತೆ ಎನ್ನುವ ನಂಬಿಕೆ ಇದೆ. ಲಿಂಗದ ಮೇಲೆ ಕಾಣಿಸುವ ಸೂರ್ಯಕಿರಣ ವೀಕ್ಷಿಸಲು ಭಕ್ತರು ಆಗಮಿಸಿದ್ದಾರೆ. ಹತ್ತು ನಿಮಿಷಗಳಷ್ಟು ಕಾಲ ಲಿಂಗದ ಮೇಲೆ ಸೂರ್ಯನ ಕಿರಣ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಯುಗಾದಿ ಅಭ್ಯಂಜನ: ಮನುಷ್ಯನ ದೇಹದಲ್ಲಿ ಈ ತ್ರಿದೋಷಗಳನ್ನು ನಿಯಂತ್ರಣದಲ್ಲಿಡಬೇಕು, ಅದಕ್ಕಾಗಿ ಏನು ಮಾಡಬೇಕು?

ಇದನ್ನೂ ಓದಿ: Ugadi 2022: ಬೆಂಗಳೂರಿನಲ್ಲಿ ಯುಗಾದಿ ಅಗತ್ಯ ವಸ್ತುಗಳು, ಹೂ, ಹಣ್ಣು, ತರಕಾರಿ ಬೆಲೆ ಎಷ್ಟಾಗಿದೆ? ಇಲ್ಲಿದೆ ಸಂಪೂರ್ಣ ವಿವರ

Follow us on

Related Stories

Most Read Stories

Click on your DTH Provider to Add TV9 Kannada