ಆಂಧ್ರಪ್ರದೇಶ: ಸರ್ಕಾರಿ ಶಾಲೆಯಲ್ಲಿ ಹಲ್ಲಿ ಬಿದ್ದಿರುವ ಬಿಸಿಯೂಟ ಸೇವಿಸಿ 64 ಮಕ್ಕಳು ಅಸ್ವಸ್ಥ

|

Updated on: Nov 23, 2023 | 11:34 AM

ಸರ್ಕಾರಿ ಶಾಲೆಯ 64 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ನಗರದಲ್ಲಿ ನಡೆದಿದೆ. ಅನ್ನಮಯ್ಯದ ಟೇಕುಲಪಾಲೆಂ ಗ್ರಾಮದ ಮಂಡಲ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ದಿ ಹಿಂದೂ ವರದಿ ಪ್ರಕಾರ, ಅಕ್ಕಿ ಬೇಯಿಸುವಾಗ ಹಲ್ಲಿಯೊಂದು ಪಾತ್ರೆಯೊಳಗೆ ಬಿದ್ದಿತ್ತು, ಮತ್ತು ಸರಿಯಾಗಿ ಪರಿಶೀಲಿಸದೆ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.

ಆಂಧ್ರಪ್ರದೇಶ: ಸರ್ಕಾರಿ ಶಾಲೆಯಲ್ಲಿ ಹಲ್ಲಿ ಬಿದ್ದಿರುವ ಬಿಸಿಯೂಟ ಸೇವಿಸಿ 64 ಮಕ್ಕಳು ಅಸ್ವಸ್ಥ
ಹಲ್ಲಿ
Image Credit source: English Jagaran
Follow us on

ಸರ್ಕಾರಿ ಶಾಲೆಯ 64 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ನಗರದಲ್ಲಿ ನಡೆದಿದೆ. ಅನ್ನಮಯ್ಯದ ಟೇಕುಲಪಾಲೆಂ ಗ್ರಾಮದ ಮಂಡಲ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ದಿ ಹಿಂದೂ ವರದಿ ಪ್ರಕಾರ, ಅಕ್ಕಿ ಬೇಯಿಸುವಾಗ ಹಲ್ಲಿಯೊಂದು ಪಾತ್ರೆಯೊಳಗೆ ಬಿದ್ದಿತ್ತು, ಮತ್ತು ಸರಿಯಾಗಿ ಪರಿಶೀಲಿಸದೆ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.

ಆಹಾರವನ್ನು ಸೇವಿಸಿದ ಒಂದು ಗಂಟೆಯೊಳಗೆ ಮಕ್ಕಳು ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ ಮತ್ತು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಅಕ್ಟೋಬರ್​ನಲ್ಲಿ ಚೆಂಬೂರಿನ ಅನಿಕಗಾಂವ್​ ಹಿಂದಿ-ಮಾಧ್ಯಮ ಶಾಲೆಯ 11 ರಿಂದ 12ನೇ ವರ್ಷ ವಯಸ್ಸಿನ 16 ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಸೇವನೆ ಮಾಡಿದ್ದರು, ನಂತರ ಅನಾರೋಗ್ಯ ಕಾಡಿ ಆಸ್ಪತ್ರೆಗೆ ದಾಖಲಾಗಿತ್ತು.

ಮತ್ತಷ್ಟು ಓದಿ: ಬೆಳಗಾವಿ: ಮದುವೆ ಊಟ ಮಾಡಿ 100ಕ್ಕೂ ಹೆಚ್ಚು ಜನ ಅಸ್ವಸ್ಥ: ದೃಷ್ಟಿ ಕಳೆದುಕೊಂಡ ಓರ್ವ ವ್ಯಕ್ತಿ

ಘಟನೆ ನಡೆದ ದಿನ ಹಿಂದಿ ಹಾಗೂ ಮರಾಠಿ ಮಾಧ್ಯಮದ ಸುಮಾರು 240 ವಿದ್ಯಾರ್ಥಿಗಳಿಗೆ ಆಹಾರ ಒದಗಿಸಲಾಗಿತ್ತು. 24 ಸ್ಥಳೀಯ ಶಾಲೆಗಳಲ್ಲಿ ಸುಮಾರು 6,797 ಮಕ್ಕಳಿಗೆ ಒದಗಿಸುವ ಶಾಂತೈ ಮಹಿಳಾ ಉದ್ಯೋಗಿ ಸಹಕಾರ ಸಂಘವು ಊಟವನ್ನು ಒದಗಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ