Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂ: ತಿನ್ಸುಕಿಯಾದಲ್ಲಿ ಆರ್ಮಿ ಕ್ಯಾಂಪ್ ಹೊರಗೆ ಗ್ರೆನೇಡ್​ ಸ್ಫೋಟ

ಅಸ್ಸಾಂನ ತಿನ್ಸುಕಿಯಾದ ಸೇನಾ ಶಿಬಿರದ ಹೊರಗೆ ಗ್ರೆನೇಡ್​ ಸ್ಫೋಟಗೊಂಡಿದೆ. ಸೇನಾ ಕ್ಯಾಂಪ್​ ಒಳಗೆ ಮೋಟಾರ್​ಸೈಕಲ್​ನಲ್ಲಿ ಬಂದ ಇಬ್ಬರು ಗ್ರೆನೇಡ್​ ಎಸೆದಿದ್ದಾರೆ. ಸೇನಾ ಶಿಬಿರದ ಗೇಟ್‌ ಬಳಿ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು. ಅಧಿಕಾರಿಗಳ ಪ್ರಕಾರ, ಸದ್ಯಕ್ಕೆ ಯಾವುದೇ ಸಾವುನೋವುಗಳ ವರದಿಯಾಗಿಲ್ಲ.

ಅಸ್ಸಾಂ: ತಿನ್ಸುಕಿಯಾದಲ್ಲಿ ಆರ್ಮಿ ಕ್ಯಾಂಪ್ ಹೊರಗೆ ಗ್ರೆನೇಡ್​ ಸ್ಫೋಟ
ಸೈನಿಕರು-ಸಾಂದರ್ಭಿಕ ಚಿತ್ರImage Credit source: India TV
Follow us
ನಯನಾ ರಾಜೀವ್
|

Updated on: Nov 23, 2023 | 10:09 AM

ಅಸ್ಸಾಂನ ತಿನ್ಸುಕಿಯಾದ ಸೇನಾ ಶಿಬಿರದ ಹೊರಗೆ ಗ್ರೆನೇಡ್​ ಸ್ಫೋಟಗೊಂಡಿದೆ. ಸೇನಾ ಕ್ಯಾಂಪ್​ ಒಳಗೆ ಮೋಟಾರ್​ಸೈಕಲ್​ನಲ್ಲಿ ಬಂದ ಇಬ್ಬರು ಗ್ರೆನೇಡ್​ ಎಸೆದಿದ್ದಾರೆ. ಸೇನಾ ಶಿಬಿರದ ಗೇಟ್‌ ಬಳಿ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದರು. ಅಧಿಕಾರಿಗಳ ಪ್ರಕಾರ, ಸದ್ಯಕ್ಕೆ ಯಾವುದೇ ಸಾವುನೋವುಗಳ ವರದಿಯಾಗಿಲ್ಲ.

ಸಂಜೆ ಡಿರಾಕ್‌ನಲ್ಲಿರುವ ಸೇನಾ ಶಿಬಿರದ ಗೇಟ್‌ಗಳ ಮುಂದೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಅಪರಾಧಿಗಳನ್ನು ಹಿಡಿಯಲು ಮಾನವ ಹುಡುಕಾಟವನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಅಕ್ಟೋಬರ್ 1 ರಿಂದ, ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯಿದೆ, 1958 (AFSPA) ಅನ್ವಯವನ್ನು ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ – ದಿಬ್ರುಗಢ್, ತಿನ್ಸುಕಿಯಾ, ಶಿವಸಾಗರ್ ಮತ್ತು ಚರೈಡಿಯೊದಲ್ಲಿ ವಿಸ್ತರಿಸಲಾಯಿತು.

ಮತ್ತಷ್ಟು ಓದಿ: ರಜೌರಿ ಎನ್​ಕೌಂಟರ್​: ಕರ್ನಾಟಕದ ಯೋಧ ಸೇರಿದಂತೆ ನಾಲ್ವರು ಹುತಾತ್ಮ

ರಜೌರಿ ಎನ್​ಕೌಂಟರ್​: ಕರ್ನಾಟಕದ ಯೋಧ ಸೇರಿದಂತೆ ನಾಲ್ವರು ಹುತಾತ್ಮ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಕರ್ನಾಟಕದ ಯೋಧ ಸೇರಿದಂತೆ ನಾಲ್ವರು ಹುತಾತ್ಮರಾಗಿದ್ದಾರೆ. ಇಬ್ಬರು ಕ್ಯಾಪ್ಟನ್ ಮಟ್ಟದ ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದರೆ, ಒಬ್ಬ ಯೋಧ ಗಾಯಗೊಂಡಿದ್ದಾರೆ. ಬುಧವಾರ (ಸೆಪ್ಟೆಂಬರ್ 22) ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

ಗಾಯಗೊಂಡ ಯೋಧನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ಸ್ಥಳದಲ್ಲೇ ಇಬ್ಬರು ಭಯೋತ್ಪಾದಕರನ್ನು ಸುತ್ತುವರಿದಿದ್ದು, ಭೀಕರ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರನ್ನು ಹತ್ಯೆಗೈಯಲು ಹೆಚ್ಚಿನ ಸೈನಿಕರನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ