ಹಣೆಗೆ ಸಿಂಧೂರ ಹಚ್ಚಿದಾಕ್ಷಣ ಮದುವೆ ಎನಿಸಿಕೊಳ್ಳುವುದಿಲ್ಲ: ಪಾಟ್ನಾ ಹೈಕೋರ್ಟ್​

ಹಣೆಗೆ ಸಿಂಧೂರ ಹಚ್ಚಿದಾಕ್ಷಣ ಅದು ಮದುವೆ(Marriage) ಎನಿಸಿಕೊಳ್ಳುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್​ ಹೇಳಿದೆ. ಮದುವೆಗೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆಗೆ ಯಾವ ವಿಧಿ ವಿಧಾನಗಳಿವೆಯೋ ಅವೆಲ್ಲವನ್ನೂ ಅನುಸರಿಸಬೇಕು, ಒತ್ತಾಯ ಮಾಡಿ ಹಣೆಗೆ ಸಿಂಧೂರವಿಟ್ಟಾಕ್ಷಣ ಅದು ಮದುವೆಯಾಗದು, ಹೀಗಾದರೆ ಅದನ್ನು ಮಾನ್ಯವೆಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.

ಹಣೆಗೆ ಸಿಂಧೂರ ಹಚ್ಚಿದಾಕ್ಷಣ ಮದುವೆ ಎನಿಸಿಕೊಳ್ಳುವುದಿಲ್ಲ: ಪಾಟ್ನಾ ಹೈಕೋರ್ಟ್​
ಮದುವೆ- ಸಾಂದರ್ಭಿಕ ಚಿತ್ರImage Credit source: India Times
Follow us
ನಯನಾ ರಾಜೀವ್
|

Updated on: Nov 23, 2023 | 12:44 PM

ಹಣೆಗೆ ಸಿಂಧೂರ ಹಚ್ಚಿದಾಕ್ಷಣ ಅದು ಮದುವೆ(Marriage) ಎನಿಸಿಕೊಳ್ಳುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್​ ಹೇಳಿದೆ. ಮದುವೆಗೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆಗೆ ಯಾವ ವಿಧಿ ವಿಧಾನಗಳಿವೆಯೋ ಅವೆಲ್ಲವನ್ನೂ ಅನುಸರಿಸಬೇಕು, ಒತ್ತಾಯ ಮಾಡಿ ಹಣೆಗೆ ಸಿಂಧೂರವಿಟ್ಟಾಕ್ಷಣ ಅದು ಮದುವೆಯಾಗದು, ಹೀಗಾದರೆ ಅದನ್ನು ಮಾನ್ಯವೆಂದು ಪರಿಗಣಿಸುವುದಿಲ್ಲ ಎಂದು ಹೇಳಿದೆ.

ಹಿಂದೂ ಧರ್ಮದಲ್ಲಿ ಮದುವೆಗೆ ಅದರದ್ದೇ ಆದ ವ್ಯಾಖ್ಯಾನವಿದೆ, ಸಂಪ್ರದಾಯ, ವಿಧಿವಿಧಾನಗಳಿವೆ, ಅಗ್ನಿ ಮುಂದೆ 7 ಸುತ್ತು ಪ್ರದಕ್ಷಿಣೆ ಹಾಕಬೇಕು, ಸಪ್ತಪದಿ ತುಳಿಯಬೇಕು, ಕನ್ಯಾದಾನ ಮಾಡಬೇಕು ಹೀಗೆ ಹತ್ತು ಹಲವಾರು ವಿಧಿಗಳಿವೆ ಅದ್ಯಾವುದನ್ನೂ ಮಾಡದೆ ನೇರಾ ನೇರ ಬಂದು ಹಣೆಗೆ ಸಿಂಧೂರವಿಟ್ಟರೆ ಅದು ಮದುವೆ ಹೇಗಾಗುತ್ತದೆ ಎಂದು ಕೋರ್ಟ್​ ಪ್ರಶ್ನೆ ಮಾಡಿದೆ.

ವರ ವಧು ಇಬ್ಬರದ್ದೂ ಮದುವೆಗೆ ಒಪ್ಪಿಗೆ ಇರಬೇಕು ಎಂದು ಪಿಬಿ ಬಜಂತಾರಿ ಮತ್ತು ಅರುಣ್ ಕುಮಾರ್ ಝಾ ಅವರ ಪೀಠ ಹೇಳಿದೆ. ಲವಂತದ ಮದುವೆ ಪ್ರಕರಣದಲ್ಲಿ ನವೆಂಬರ್ 10 ರಂದು ಪಾಟ್ನಾ ಹೈಕೋರ್ಟ್ ಈ ತೀರ್ಪು ನೀಡಿತು. 10 ವರ್ಷಗಳ ಹಿಂದೆ ಸೇನೆಯಲ್ಲಿ ನಿಯೋಜಿತರಾಗಿದ್ದ ಯೋಧ ರವಿಕಾಂತ್ ಅವರು ಬಲವಂತವಾಗಿ ಮದುವೆಯಾಗಿದ್ದರು.ಸಪ್ತಪದಿ ತುಳಿಯದೆ ಮದುವೆ ಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ಮತ್ತಷ್ಟು ಓದಿ: ಆಕೆ ಸಹಾಯಕ್ಕಾಗಿ ಅಂಗಲಾಚ್ತಿದ್ಲು, ಯುವತಿಯನ್ನು ಹೊತ್ತುಕೊಂಡು ಬಲವಂತವಾಗಿ ಮದುವೆಯಾದ ವ್ಯಕ್ತಿ, ವಿಡಿಯೋ ವೈರಲ್

ಬಿಹಾರದ ಲಖಿಸರಾಯ್‌ನಲ್ಲಿ 10 ವರ್ಷಗಳ ಹಿಂದೆ ಸೇನಾ ಯೋಧರೊಬ್ಬರನ್ನು ಅಪಹರಿಸಲಾಗಿತ್ತು. ಇದಾದ ನಂತರ ಯುವತಿ ಜತೆ ಬಲವಂತವಾಗಿ ಮದುವೆ ಮಾಡಿಸಿದ್ದರು. ಜೂನ್ 30, 2013 ರಂದು ಯುವಕ ಮತ್ತು ಅವರ ಚಿಕ್ಕಪ್ಪನನ್ನು ಕೆಲವರು ಅಪಹರಿಸಿದ್ದರು. ಲಖಿಸರಾಯ್‌ನ ದೇವಸ್ಥಾನದಲ್ಲಿ ಪೂಜೆ ವೇಳೆ ಈ ಘಟನೆ ನಡೆದಿದೆ.

ನಂತರ ಅವರು ಮದುವೆಯಾದರು. ಯುವಕ ಸೀನ ರವಿಕಾಂತ್ ಅವರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದರು ಆದರೆ ಪೊಲೀಸರು ದೂರು ದಾಖಲಿಸಲಿಲ್ಲ.

ಇದಾದ ನಂತರ ಯುವಕ ಲಖಿಸರಾಯ್‌ನ ಸಿಜೆಎಂ ನ್ಯಾಯಾಲಯದಲ್ಲಿ ಈ ಬಗ್ಗೆ ದೂರು ನೀಡಿದ್ದರು. ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಆದರೆ 27 ಜನವರಿ 2020 ರಂದು ಮನವಿಯನ್ನು ತಿರಸ್ಕರಿಸಲಾಯಿತು. ಕೆಳ ನ್ಯಾಯಾಲಯದಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಅವರು ಪಾಟ್ನಾ ಹೈಕೋರ್ಟ್‌ನ ಮೊರೆ ಹೋಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ