AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದುವೆಯಾದ ಪತ್ನಿ ಕೊರಳನ್ನೇ ಕತ್ತರಿಸಿ ಕೊಲೆ ಮಾಡಿದ ಪತಿ, ನ್ಯಾಯಕ್ಕಾಗಿ ಕುಟುಂಬಸ್ಥರ ಅಳಲು

ಗಂಡನ ಚಿತ್ರಹಿಂಸೆ ಸಹಿಸಲಾಗದೆ ಚೈತ್ರಾ ತವರು ಮನೆ ಸೇರಿದ್ದರು. ಅಷ್ಟಕ್ಕೂ ಸುಮ್ಮನಾಗದ ದಿಲೀಪ್ ಅಲ್ಲಿಗೆಯೇ ಹೋಗಿ ಕೊರಳು ಕತ್ತರಿಸಿ ಬಳಿಕ ಕ್ಷಮಿಸಿ ಎಂದು ಹೆಂಡತಿಗೆ ಚಿಕಿತ್ಸೆ ಕೊಡಿಸಿದ್ದ. ಚಿಕಿತ್ಸೆ ಮಗಿಸಿ ಮನೆ ಸೇರಿದ್ದ ಚೈತ್ರಾ ಸತತ ಎರಡು ತಿಂಗಳು ನೋವು ತಿಂದು ಪ್ರಾಣಬಿಟ್ಟಿದ್ದಾರೆ. ಕಂಪ್ಯೂಟರ್ ಸೆಂಟರ್ ನಲ್ಲಿ ಅರಳಿದ ಪ್ರೀತಿ ಸಾವಿನಲ್ಲಿ ಅಂತ್ಯ ಕಂಡಿದೆ.

ಪ್ರೀತಿಸಿ ಮದುವೆಯಾದ ಪತ್ನಿ ಕೊರಳನ್ನೇ ಕತ್ತರಿಸಿ ಕೊಲೆ ಮಾಡಿದ ಪತಿ, ನ್ಯಾಯಕ್ಕಾಗಿ ಕುಟುಂಬಸ್ಥರ ಅಳಲು
ಚೈತ್ರಾ ಕೊಲೆಯಾದ ಮಹಿಳೆ, ದಿಲೀಪ್ ಆರೋಪಿ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಆಯೇಷಾ ಬಾನು

Updated on: Nov 23, 2023 | 9:37 AM

ತುಮಕೂರು, ನ.23: ಒಬ್ಬರನೊಬ್ಬರು ಪ್ರೀತಿಸಿ  (Love) ತಮ್ಮಿಷ್ಟದಂತೆಯೇ ಮದುವೆಯಾಗಿದ್ದ ಜೋಡಿ ನಡುವೆ ಅನುಮಾನದ ಭೂತ ಆವರಿಸಿದ್ದು ಪತಿ ತನ್ನ ಪತ್ನಿಯನ್ನೇ ಕೊಲೆ (Murder) ಮಾಡಿದ ಘಟನೆ ತುಮಕೂರು ತಾಲೂಕಿನ ದೊಡ್ಡಸಾರಂಗಿ ಪಾಳ್ಯದಲ್ಲಿ ನಡೆದಿದೆ. ಚೈತ್ರಾ ಕೊಲೆಯಾದ ಮಹಿಳೆ, ದಿಲೀಪ್ ಆರೋಪಿ. ಗಂಡನ ಚಿತ್ರಹಿಂಸೆ ಸಹಿಸಲಾಗದೆ ಚೈತ್ರಾ ತವರು ಮನೆ ಸೇರಿದ್ದರು. ಅಷ್ಟಕ್ಕೂ ಸುಮ್ಮನಾಗದ ದಿಲೀಪ್ ಅಲ್ಲಿಗೆಯೇ ಹೋಗಿ ಕೊರಳು ಕತ್ತರಿಸಿ ಬಳಿಕ ಕ್ಷಮಿಸಿ ಎಂದು ಹೆಂಡತಿಗೆ ಚಿಕಿತ್ಸೆ ಕೊಡಿಸಿದ್ದ. ಚಿಕಿತ್ಸೆ ಮಗಿಸಿ ಮನೆ ಸೇರಿದ್ದ ಚೈತ್ರಾ ಸತತ ಎರಡು ತಿಂಗಳು ನೋವು ತಿಂದು ಪ್ರಾಣಬಿಟ್ಟಿದ್ದಾರೆ. ಕಂಪ್ಯೂಟರ್ ಸೆಂಟರ್ ನಲ್ಲಿ ಅರಳಿದ ಪ್ರೀತಿ ಸಾವಿನಲ್ಲಿ ಅಂತ್ಯ ಕಂಡಿದೆ. ನ್ಯಾಯಕ್ಕಾಗಿ ಚೈತ್ರ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

ಗ್ರಾಮದ ಚೈತ್ರಾ ಹಾಗೂ ತುಮಕೂರು ತಾಲೂಕಿನ ಮೈದಾಳ ಗ್ರಾಮದ ದಿಲೀಪ್ ನಡುವೆ ಪ್ರೀತಿಯಾಗಿತ್ತು. ಕಂಪ್ಯೂಟರ್ ಸೆಂಟರ್​ಗೆ ಹೋಗುವಾಗ ಇಬ್ಬರಲ್ಲೂ ಪ್ರೀತಿಯಾಗಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಸುಖ, ಸಂತೋಷದಿಂದ ಸಂಸಾರ ನಡೆಸುತ್ತಿದ್ದ ಈ ಜೋಡಿಗಳ ನಡುವೆ ವರ್ಷ ಕಳೆಯುತ್ತಿದ್ದಂತೆ ಅನುಮಾನದ ಭೂತ ಹುಟ್ಟುಕೊಂಡಿತ್ತು. ಪತಿ ದಿಲೀಪ್​ ತಾನು ಪ್ರೀತಿಸಿ ಮದುವೆಯಾದ ಪತ್ನಿ ಮೇಲೆ ಸದಾ ಅನುಮಾನ ಪಡುತ್ತಿದ್ದ. ಅನುಮಾನದಿಂದ ಪತ್ನಿಗೆ ದಿನನಿತ್ಯ ಹಿಂಸೆ‌ ಕೊಡುತ್ತಿದ್ದ. ಹೊಡೆದು, ಬಡಿದು ಚಿತ್ರಹಿಂಸೆ ನೀಡುತ್ತಿದ್ದ. ಇದನ್ನ ಸಹಿಸಲಾಗದೇ ಚೈತ್ರಾ ತವರು ಮನೆ ಸೇರಿದ್ದರು. ಅಷ್ಟೂ ಬಿಡದೆ ದಿಲೀಪ್ ಸೀದಾ ಪತ್ನಿಯ ತವರು ಮನೆಗೆ ಹೋಗಿ ಪತ್ನಿಗೆ ಚಾಕು ಹಾಕಿದ್ದ. ಕೊರಳಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದ. ಬಳಿಕ ತಪ್ಪಾಗಿದೆ ಕ್ಷಮಿಸಿ ಎಂದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದ.

ಇದನ್ನೂ ಓದಿ: ಮಧ್ಯಪ್ರದೇಶ: ಚಲಿಸುತ್ತಿದ್ದ ಕಾರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಓರ್ವನ ಬಂಧನ

ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಚೈತ್ರಾ ಅವರು ಸ್ವಲ್ಪ ಚೇತರಿಕೆಯಾದ ಹಿನ್ನೆಲೆ ವಾಪಸ್ ತವರು ಮನೆಗೆ ತೆರಳಿದ್ದರು. ತವರು ಮನೆಯವರೇ ಚೈತ್ರಾಳನ್ನ ನೋಡಿಕೊಳ್ಳುತ್ತಿದ್ದರು. ಸತತ ಎರಡು ತಿಂಗಳು ನೋವು ಅನುಭವಿಸಿ ಚೈತ್ರಾ ಸಾವನ್ನಪ್ಪಿದ್ದರೆ. ಮಗಳ ಸಾವಿನಿಂದ ನೊಂದ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಕೊಲೆ ಯತ್ನ

ಇನ್ನು ಈ ಹಿಂದೆ ಕೂಡ ದಿಲೀಪ್ ಇದೇ ರೀತಿ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದ. ಆಗ ಚೈತ್ರಾ ಕುಟುಂಬದವರು ಬುದ್ದಿ ಹೇಳಿ ಸುಮ್ಮನಾಗಿದ್ದರು. ಮೊದ ಮೊದಲು ಕಂಪನಿ ಉದ್ಯೋಗಿ ಅಂತಾ ಹೇಳಿ ವಂಚಿಸಿ ಮದುವೆಯಾಗಿದ್ದ ದಿಲೀಪ್ ಆಟೋ ಓಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ಗ್ರಾ.ಪಂ ಸದಸ್ಯನ ಮೇಲೆಯೇ ದೊಣ್ಣೆಯಿಂದ ಹಲ್ಲೆ ಮಾಡಿದ ಕಾರ್ಯದರ್ಶಿ

ಇನ್ನು ಮತ್ತೊಂದೆಡೆ ತುಮಕೂರು ತಾಲೂಕಿನ ತಿಮ್ಮರಾಜನಹಳ್ಳಿಯಲ್ಲಿ ಗ್ರಾ.ಪಂ ಸದಸ್ಯನ ಮೇಲೆಯೇ ಕಾರ್ಯದರ್ಶಿ ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಹಲ್ಲೆಗೊಳಗಾದ ತಿಮ್ಮರಾಜನಹಳ್ಳಿ ಗ್ರಾ.ಪಂ. ಸದಸ್ಯ ಚಂದ್ರಮೌಳಿ ಅವರ ಕಾಲು ಮುರಿದಿದೆ.

ಕಾರ್ಯದರ್ಶಿ ಸಂತೋಷ್ ಹಾಗೂ ಚಂದ್ರಮೌಳಿ ನಡುವೆ ಸಣ್ಣ ಜಗಳವಾಗಿತ್ತು. ಮಹಿಳೆಯೋರ್ವಳ ಅಂಗಡಿ ಲೈಸೆನ್ಸ್ ರಿನಿವಲ್ ಮಾಡುವ‌ ವಿಚಾರದಲ್ಲಿ ನಡೆದಿದ್ದ ಜಗಳ ಎನ್ನಲಾಗಿದೆ. ಫೋನಿನಲ್ಲಿ ಮಾತನಾಡುವ ವೇಳೆ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ರು. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಕಾರ್ಯದರ್ಶಿ ಸಂತೋಷ್, ಕುಟುಂಬದವರ ಜೊತೆ ಬಂದು ಚಂದ್ರಮೌಳಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಾರ್ಡ್ ಸಭೆ ಮುಗಿಸಿ ಹೊರಬರುತ್ತಿದ್ದಂತೆ ಹಲ್ಲೆ ಇಬ್ಬರು ಹೆಂಗಸರು ಮತ್ತು ಇಬ್ಬರು ಗಂಡಸರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಚಂದ್ರಮೌಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ