ಪಾರ್ಸೆಲ್ನಲ್ಲಿ ಶವವಿಟ್ಟು ಕಳುಹಿಸಿದ್ದ ಆರೋಪಿ ಶ್ರೀಧರ್ ವರ್ಮಾ ಎಂಬಾತನನ್ನು ಪಶ್ಚಿಮ ಗೋದಾವರಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ವರ್ಮಾ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಭೀಮಾವರಂಗೆ ಕರೆತರಲಾಗಿದೆ. ಈತ ತುಳಸಿಯವರ ಮೈದುನ.
ಡಿಸೆಂಬರ್ 19 ರಂದು ಉಂಡಿ ಮಂಡಲದ ಯಂಡಗಂಡಿ ಗ್ರಾಮದ ನಾಗ ತುಳಸಿ ಎಂಬುವರು ಕ್ಷತ್ರಿಯ ಸೇವಾ ಸಮಿತಿಯಿಂದ ಪಾರ್ಸೆಲ್ ಸ್ವೀಕರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಎಲೆಕ್ಟ್ರಿಕಲ್ ಉಪಕರಣಗಳು ಇರಬೇಕಿದ್ದ ಪಾರ್ಸೆಲ್ನಲ್ಲಿ ಶವ ಪತ್ತೆಯಾಗಿತ್ತು.
ಮೃತರನ್ನು ಕಲ್ಲ ಮಂಡಲದ ಗಾಂಧಿನಗರ ಗ್ರಾಮದ ನಿವಾಸಿ ಬ್ಯಾರೆ ಪರ್ದಲಯ್ಯ ಎಂದು ಗುರುತಿಸಲಾಗಿದೆ.
ಶ್ರೀಧರ್ ವರ್ಮಾ ಮೋಸದ ಜಾಲ ಹೆಣೆದಿದ್ದ, ಆತ ಮೂರು ಮಹಿಳೆಯರನ್ನು ಮದುವೆಯಾಗಿದ್ದ, ಆರೋಪಿ ಮೂರು ಜಿಲ್ಲೆಗಳಲ್ಲಿ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಆತ ಉದ್ದೇಶಪೂರ್ವಕವಾಗಿಯೇ ತುಳಸಿಯವರಿಗೆ ಪಾರ್ಸೆಲ್ ಕಳುಹಿಸಿದ್ದ ಎನ್ನಲಾಗಿದೆ. ಆಸ್ತಿಗಾಗಿ ಈ ಕೃತ್ಯವೆಸಗಿದ್ದಾನೆ. ಕೆಲಸವಿದೆ ಎಂದು ಕಾರ್ಮಿಕನನ್ನು ನಂಬಿಸಿ ಕರೆದೊಯ್ದು ನಡುರಸ್ತೆಯಲ್ಲಿ ಕಾರಿನಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ತುಳಸಿ ಪಾಲು ಜತೆಗೆ ತಮ್ಮ ಪಾಲಿಗೆ ಬರಬೇಕಾದ ಆಸ್ತಿಯನ್ನು ಪಡೆಯಲು ಶ್ರೀಧರ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಇದರಲ್ಲಿ ತುಳಸಿ ಸಹೋದರಿ ರೇವತಿಯದ್ದೂ ಕೈವಾಡವಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮತ್ತಷ್ಟು ಓದಿ: ಆರ್ಡರ್ ಮಾಡಿದ್ದು ಎಲೆಕ್ಟ್ರಾನಿಕ್ ಉಪಕರಣಗಳು ಬಂದಿದ್ದು ಶವ, ಪಾರ್ಸೆಲ್ ನೋಡಿ ಬೆಚ್ಚಿಬಿದ್ದ ಮಹಿಳೆ
ಪಾರ್ಸೆಲ್ನಲ್ಲಿದ್ದ ಶವ ನೋಡಿ ಓಡಿ ಬಂದು ತಮ್ಮ ಮನೆಯಲ್ಲಿ ತುಳಸಿ ಆಶ್ರಯ ಪಡೆಯಬಹುದು ಆಗ ಬೆದರಿಸಿ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದ್ದ. ಮೃತದೇಹ ನೋಡಿ ಎಲ್ಲರೂ ಜೋರಾಗಿ ಕೂಗಿಕೊಂಡು ಬಂದರು. ಪೊಲೀಸರಿಗೆ ಕರೆ ಮಾಡಿದೆ. ಅಷ್ಟರಲ್ಲಿ ಪೊಲೀಸರ ಪ್ರವೇಶದಿಂದ ಎಲ್ಲವೂ ಸ್ತಬ್ಧವಾಗಿತ್ತು.
ಶ್ರೀಧರವರ್ಮನನ್ನು ಪ್ರೀತಿಸಿ ಮದುವೆಯಾಗಿದ್ದ ರೇವತಿಗೆ ಎಲ್ಲವೂ ಗೊತ್ತಿತ್ತು ಎಂದು ವರದಿಯಾಗಿದೆ. ರೇವತಿಗಿಂತ ಮೊದಲೇ ರಾಣಿಯನ್ನು ಮದುವೆಯಾಗಿರುವುದು ದೃಢಪಟ್ಟಿದೆ. ಇವರಿಗೆ ವಿಜಯಲಕ್ಷ್ಮಿ ಎಂಬ ಯುವತಿಯೂ ಸಹಕರಿಸಿದ್ದು ತನಿಖೆಯಲ್ಲಿ ಬಯಲಾಗಿದೆ.
ಕ್ರಿಮಿನಲ್ ದಾಖಲೆ ಹೊಂದಿರುವ ಶ್ರೀಧರ್ ವರ್ಮಾ ಅವರ ಇನ್ನೂ ಹಲವು ಅಪರಾಧಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನುತ್ತವೆ ಪೊಲೀಸ್ ಮೂಲಗಳು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Fri, 27 December 24