ಕ್ರಿಕೆಟ್ ಬೆಟ್ಟಿಂಗ್ನಷ್ಟೇ ಚುನಾವಣಾ ಬೆಟ್ಟಿಂಗ್ ಕೂಡ ಚಾಲ್ತಿಯಲ್ಲಿದೆ. ಯಾವ ಪಕ್ಷ ಗೆಲ್ಲುತ್ತೆ ಎನ್ನುವುದರ ಬಗ್ಗೆ ಬೆಟ್ಟಿಂಗ್ ಕಟ್ಟುವುದು ಸಾಮಾನ್ಯ ಅದಕ್ಕೆ ತಕ್ಕಂತೆ ಹಣವನ್ನು ಬಿಟ್ಟಿಂಗ್ ಮೇಲೆ ಸುರಿಯುತ್ತಾರೆ. ಆದರೆ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿತ್ತು. 2019ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕುಟುಂಬದಲ್ಲಿ ಇಬ್ಬರು ಬೆಟ್ಟಿಂಗ್ ಕಟ್ಟಿದ್ದರು.
ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ಕೇಶ್ವಾಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 2019ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನೆಚ್ಚಿನ ನಾಯಕ ಗೆಲ್ಲುತ್ತಾರೆ ಎಂದು ಒಂದೇ ಕುಟುಂಬದ ಇಬ್ಬರ ನಡುವೆ ಬಾಜಿ ಕಟ್ಟಲಾಗಿತ್ತು. ತಮ್ಮ ನಾಯಕ ಯಶಸ್ವಿಯಾಗದಿದ್ದರೆ, ತನ್ನ ನಾಯಕ ಯಶಸ್ವಿಯಾಗುವವರೆಗೂ ತಾನು ಹಳ್ಳಿಗೆ ಕಾಲಿಡುವುದಿಲ್ಲ ಎಂದು ವಿಜಯಲಕ್ಷ್ಮೀ ಶಪಥ ಮಾಡಿದ್ದರು.
ವಿಜಯಲಕ್ಷ್ಮೀ ಹಾಗೂ ಕುಟುಂಬದ ನಡುವೆ ನಡೆದ ಬೆಟ್ಟಿಂಗ್ನಲ್ಲಿ ಒಂದೊಮ್ಮೆ ಚಂದ್ರಬಾಬು ನಾಯ್ಡು ಅವರು ಚುನಾವಣೆಯಲ್ಲಿ ಗೆಲ್ಲದಿದ್ದರೆ ತಾನು ಊರು ಬಿಟ್ಟು ಹೋಗುವುದಾಗಿ ಶಪಥ ಮಾಡಿದ್ದರು. ಅದಾದ ಬಳಿಕ ಜಗನ್ಮೋಹನ್ ರೆಡ್ಡಿ ಗೆದ್ದಿದ್ದರು, ವಿಜಯಲಕ್ಷ್ಮೀ ಊರು ಬಿಟ್ಟು ಹೋಗಿದ್ದರು, ಯಾವುದೇ ಕಾರ್ಯಕ್ರಮಕ್ಕೂ ಊರಿಗೆ ಬಂದಿರಲಿಲ್ಲ.
ಮತ್ತಷ್ಟು ಓದಿ: AP CM Swearing in Ceremony: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು
ಇದೀಗ ಚಂದ್ರಬಾಬು ನಾಯ್ಡು ಗೆದ್ದ ಖುಷಿಯಲ್ಲೇ ಊರಿಗೆ ಮರಳಿದ್ದಾರೆ. ಕುಟುಂಬದವರೂ ಆಕೆಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.
ಮತ್ತೆ ಕೇಶವಪುರಕ್ಕೆ ಬಂದಿದ್ದರಿಂದ ಗ್ರಾಮಸ್ಥರು ವಿಜಯಲಕ್ಷ್ಮಿ ಕುಟುಂಬದವರು ಶಾಲು ಹೊದಿಸಿ, ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಐದನೇ ವರ್ಷದ ಬಳಿಕ ಮನೆಗೆ ಬಂದಿದ್ದಕ್ಕೆ ವಿಜಯಲಕ್ಷ್ಮಿ ಸಂತಸ ವ್ಯಕ್ತಪಡಿಸಿದರು.