AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧ ಪೋಷಕರನ್ನು ಬೈಕ್​ನಲ್ಲಿ ಕೂರಿಸಿಕೊಂಡು ಹೋಗುವಾಗ ಲಾರಿ ಡಿಕ್ಕಿ, ಇಬ್ಬರು ಸಾವು, ಓರ್ವನ ಸ್ಥಿತಿ ಚಿಂತಾಜನಕ

ಟ್ರಕ್​ ಚಾಲಕ ಬ್ರೇಕ್​ ಹಾಕುವಷ್ಟರಲ್ಲಿ ವೃದ್ಧ ದಂಪತಿ ಸಾವನ್ನಪ್ಪಿದ್ದರು, ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟ್ರಕ್ ಚಾಲಕ ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದ ಆದರೆ ಸ್ಥಳದಲ್ಲಿದ್ದವರು ಆತನನ್ನು ಹಿಡಿದಿದ್ದಾರೆ, ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಚಾಲಕನನ್ನು ಬಂಧಿಸಲಾಗಿದೆ.

ವೃದ್ಧ ಪೋಷಕರನ್ನು ಬೈಕ್​ನಲ್ಲಿ ಕೂರಿಸಿಕೊಂಡು ಹೋಗುವಾಗ ಲಾರಿ ಡಿಕ್ಕಿ, ಇಬ್ಬರು ಸಾವು, ಓರ್ವನ ಸ್ಥಿತಿ ಚಿಂತಾಜನಕ
ನಯನಾ ರಾಜೀವ್
|

Updated on: Jun 17, 2024 | 2:22 PM

Share

ಬೈಕ್​ಗೆ ಲಾರಿ​ ಡಿಕ್ಕಿ ಹೊಡೆದು ಮೂವರು ಸವಾರರನ್ನು 200 ಮೀಟರ್​ಗಳಷ್ಟು ದೂರ ಎಳೆದೊಯ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಯುವಕನೊಬ್ಬ ವೃದ್ಧ ಪೋಷಕರನ್ನು ಬೈಕ್​ ಮೇಲೆ ಕೂರಿಸಿಕೊಂಡು ಎಲ್ಲಿಗೋ ತೆರಳುತ್ತಿದ್ದ, ಯಮನಂತೆ ಬಂದ ಟ್ರಕ್​ ಕಾರಿಗೆ ಗುದ್ದಿ ಬಳಿಕ ಮೂವರನ್ನು 200 ಮೀಟರ್​ ದೂರ ಎಳೆದೊಯ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಟ್ರಕ್​ ಚಾಲಕ ಬ್ರೇಕ್​ ಹಾಕುವಷ್ಟರಲ್ಲಿ ವೃದ್ಧ ದಂಪತಿ ಸಾವನ್ನಪ್ಪಿದ್ದರು, ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟ್ರಕ್ ಚಾಲಕ ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದ ಆದರೆ ಸ್ಥಳದಲ್ಲಿದ್ದವರು ಆತನನ್ನು ಹಿಡಿದಿದ್ದಾರೆ, ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಚಾಲಕನನ್ನು ಬಂಧಿಸಲಾಗಿದೆ.

ಮಹಾಮಾಯಾ ದೇವಸ್ಥಾನದ ಬಳಿ ಘಟನೆ ನಡೆದಿದೆ, ಮೃತ ದಂಪತಿಯನ್ನು 72 ವರ್ಷದ ಲಾಲು ಓರಾನ್ ಮತ್ತು 65 ವರ್ಷದ ಪಾರ್ವತಿ ದೇವಿ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಈ ವರ್ಷ ದಾಖಲೆ ಸಂಖ್ಯೆ ರಸ್ತೆ ಅಪಘಾತ: ಅಂಕಿಅಂಶ ನೋಡಿದ್ರೆ ಬೆಚ್ಚಿಬೀಳ್ತೀರಿ!

ಭಾನುವಾರ ಸಂಜೆ 4 ಗಂಟೆಗೆ ಯುವಕ ನ್ನ ಪೋಷಕರೊಂದಿಗೆ ಬೈಕ್‌ನಲ್ಲಿ ಜೀಲ್ ಟೋಲಾ ಗ್ರಾಮದಿಂದ ಹೊರಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಾರ್ಗಮಧ್ಯೆ ವೇಗವಾಗಿ ಬಂದ ಟ್ರಕ್ ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸಮೇತ ಮೂವರೂ ಲಾರಿಯಡಿ ಸಿಲುಕಿದ್ದಾರೆ. ಟ್ರಕ್ ನಿಲ್ಲದೆ ಮುಂದೆ ಸಾಗಿತು. ಟ್ರಕ್ ಮೂವರನ್ನೂ ಎಳೆದುಕೊಂಡು 200 ಮೀಟರ್ ಮುಂದೆ ಕೊಂಡೊಯ್ಯಿತು.

ಟ್ರಕ್ ಚಾಲಕ ಲಾರಿಗೆ ಬ್ರೇಕ್ ಹಾಕಿದ್ದಾನೆ. ಕೆಳಗಿಳಿದು ನೋಡಿದಾಗ ವೃದ್ಧ ದಂಪತಿ ಮೃತಪಟ್ಟಿರುವುದು ಕಂಡು ಬಂತು. ಅವನ ಮಗ ನೋವಿನಿಂದ ನರಳುತ್ತಿದ್ದ. ಸದ್ಯ ಆರೋಪಿ ಟ್ರಕ್ ಚಾಲಕ ಪೊಲೀಸರ ವಶದಲ್ಲಿದ್ದಾನೆ. ಆತನ ವಿರುದ್ಧ ಮುಂದಿನ ಕ್ರಮ ಜರುಗಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ