ಆಂಧ್ರಪ್ರದೇಶ: 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಗರ್ಭಿಣಿ, ಹೆರಿಗೆ ಬಳಿಕ ಸಾವು

|

Updated on: Feb 18, 2025 | 2:22 PM

ಹತ್ತನೇ ತರಗತಿ ಬಾಲಕಿಯೊಬ್ಬಳು ಹೆರಿಗೆ ಬಳಿಕ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಪಲಮನೇರು ಪ್ರದೇಶದ ಸ್ಥಳೀಯ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು, ಆಕೆ ಗರ್ಭಿಣಿಯಾಗಿದ್ದಳು, ಹೀಗಾಗಿ ಹೆರಿಗೆ ವೇಳೆ ಅಕಾಲಿಕ ಮರಣ ಸಂಭವಿಸಿದೆ. ಈ ಅಪರಾಧಕ್ಕೆ ಕಾರಣನಾದ ವ್ಯಕ್ತಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಆಂಧ್ರಪ್ರದೇಶ: 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಗರ್ಭಿಣಿ, ಹೆರಿಗೆ ಬಳಿಕ ಸಾವು
ಸಾಂದರ್ಭಿಕ ಚಿತ್ರ
Image Credit source: National Geographics
Follow us on

ಹತ್ತನೇ ತರಗತಿ ಬಾಲಕಿಯೊಬ್ಬಳು ಹೆರಿಗೆ ಬಳಿಕ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಪಲಮನೇರು ಪ್ರದೇಶದ ಸ್ಥಳೀಯ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು, ಆಕೆ ಗರ್ಭಿಣಿಯಾಗಿದ್ದಳು, ಹೀಗಾಗಿ ಹೆರಿಗೆ ವೇಳೆ ಅಕಾಲಿಕ ಮರಣ ಸಂಭವಿಸಿದೆ. ಈ ಅಪರಾಧಕ್ಕೆ ಕಾರಣನಾದ ವ್ಯಕ್ತಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ವರದಿ ಪ್ರಕಾರ, ಆರೋಪಿಯು ಸಂತ್ರಸ್ತೆಯ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿದ್ದ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದ, ಅಂತಿಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟಿದ್ದಾಳೆ. ಹೆರಿಯಾದ ಬಳಿಕ ಆರೋಗ್ಯ ಕ್ರಮೇಣವಾಗಿ ಕ್ಷೀಣಿಸುತ್ತಿತ್ತು.

ತೀವ್ರ ರಕ್ತಹೀನತೆ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದ ಆಕೆಯ ಸ್ಥಿತಿ ಹದಗೆಟ್ಟಿತು, ಇದರಿಂದಾಗಿ ತಿರುಪತಿಯ ಆಸ್ಪತ್ರೆಗೆ ವರ್ಗಾಯಿಸಬೇಕಾಯಿತು. ವೈದ್ಯಕೀಯ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರು ಭಾನುವಾರ ಕೊನೆಯುಸಿರೆಳೆದಿದ್ದಾಳೆ.

ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ರೂಪಿಸಲಾದ ಕಾನೂನು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ’ (ಪೋಕ್ಸೊ) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಅಧಿಕಾರಿಗಳು ಆರೋಪಿಗಳಿಗಾಗಿ ಸಕ್ರಿಯವಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ:  ಅತ್ತಿಗೆಯ ಸಹೋದರಿಯನ್ನು ಅತ್ಯಾಚಾರ ಮಾಡಿ, ಗರ್ಭಿಣಿಯಾದಾಗ ನಡುನೀರಿನಲ್ಲಿ ಕೈಬಿಟ್ಟು ಹೋದ ವ್ಯಕ್ತಿ

ಕಳೆದ ವಾರ, ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಕಾಂಚಿಕಚೆರ್ಲಾ ಮಂಡಲದ ಪರಿಟಾಲ ಗ್ರಾಮದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಮೂವರು  ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ . ಅಮೃತ್ ಸಾಯಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಆಕೆಯ ದೂರಿನ ಪ್ರಕಾರ, ಪ್ರೀತಿಯ ನೆಪದಲ್ಲಿ ತನ್ನೊಂದಿಗೆ ಸಂಬಂಧ ಹೊಂದಿದ್ದ ಹುಸೇನ್, ತನ್ನನ್ನು ತನ್ನ ಕೋಣೆಗೆ ಕರೆದೊಯ್ದನು, ನಂತರ ಅಲ್ಲಿ ಅವನು ಹೊರಟುಹೋಗಿದ್ದ ಮತ್ತು ಪಿಡ್ಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕಂಚಿಕಚೆರ್ಲಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ