ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಲು 500 ಉಚಿತ ಎಸಿ ವ್ಯಾನ್​ಗಳಿಗೆ ಆಂಧ್ರ ಪ್ರದೇಶ ಸಿಎಂ ಚಾಲನೆ

| Updated By: ಸುಷ್ಮಾ ಚಕ್ರೆ

Updated on: Apr 01, 2022 | 4:15 PM

ಆಂಧ್ರಪ್ರದೇಶದ ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗಳನ್ನು ತಲುಪಲು ಎಸಿ ವಾಹನವನ್ನು ಉಚಿತವಾಗಿ ಪಡೆಯಬಹುದು. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಇಂದು 500 ಹವಾನಿಯಂತ್ರಿತ ವ್ಯಾನ್‌ಗಳನ್ನು ಉದ್ಘಾಟಿಸಿದ್ದಾರೆ.

ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಲು 500 ಉಚಿತ ಎಸಿ ವ್ಯಾನ್​ಗಳಿಗೆ ಆಂಧ್ರ ಪ್ರದೇಶ ಸಿಎಂ ಚಾಲನೆ
ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ
Follow us on

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಗರ್ಭಿಣಿಯರು, ತಾಯಂದಿರು ಮತ್ತು ಶಿಶುಗಳಿಗೆ ಉಚಿತವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಜಿಪಿಎಸ್ ಮತ್ತು ಸುಧಾರಿತ ಸಾಧನಗಳನ್ನು ಅಳವಡಿಸಲಾಗಿರುವ 500 ಎಸಿ ವಾಹನಗಳನ್ನು ಜಾರಿಗೆ ತರಲಾಗಿದೆ. ವಿಜಯವಾಡದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಈ ವಾಹನಗಳಿಗೆ ಚಾಲನೆ ನೀಡಿದ್ದಾರೆ. ಆಂಧ್ರಪ್ರದೇಶದ ಗರ್ಭಿಣಿಯರು ಈಗ ಹೆರಿಗೆಗಾಗಿ ಆಸ್ಪತ್ರೆಗಳನ್ನು ತಲುಪಲು ಹವಾನಿಯಂತ್ರಿತ ವಾಹನವನ್ನು ಉಚಿತವಾಗಿ ಪಡೆಯಬಹುದು. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಇಂದು 500 ಹವಾನಿಯಂತ್ರಿತ ವ್ಯಾನ್‌ಗಳನ್ನು ಸೇವೆಗೆ ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ವಿಜಯವಾಡದ ಬೆಂಜ್ ಸರ್ಕಲ್‌ನಲ್ಲಿ ಡಾ. ವೈಎಸ್‌ಆರ್ ತಲ್ಲಿ ಬಿದ್ದ ಎಕ್ಸ್‌ಪ್ರೆಸ್ ಎಂಬ ಹೆಸರಿನ ವಾಹನಗಳ ಉದ್ಘಾಟನೆ ನಡೆಯಿತು. ರಾಜ್ಯ ಸರ್ಕಾರವು ವಿಸ್ತರಿಸಿರುವ ಈ ಸೇವೆಯು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ತಾಯಿ ಮತ್ತು ಶಿಶುವನ್ನು ಮನೆಗೆ ಹಿಂದಿರುಗಿಸುತ್ತದೆ. ರಾಜ್ಯ ಸರ್ಕಾರ ಗುರುತಿಸಿರುವ ಅರ್ಹ ಫಲಾನುಭವಿಗಳಿಗೆ ಹೊಸ ಸೌಲಭ್ಯ ದೊರೆಯಲಿದೆ.

“ಡಾ. ವೈಎಸ್‌ಆರ್ ತಲ್ಲಿ ಬಿದ್ದ ಎಕ್ಸ್‌ಪ್ರೆಸ್” ಯೋಜನೆಯಡಿ, ಪ್ರತಿ ಜಿಲ್ಲೆಗೆ 30 ವಾಹನಗಳನ್ನು ಸೇವೆಗೆ ನೀಡಲಾಗುತ್ತದೆ. ಈ ಯೋಜನೆಯಿಂದ ವರ್ಷದಲ್ಲಿ 4 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಆಂಧ್ರಪ್ರದೇಶದಲ್ಲಿ ಈಗಾಗಲೇ 104 ಮತ್ತು 108 ಆ್ಯಂಬುಲೆನ್ಸ್ ವಾಹನಗಳು ನಡೆಯುತ್ತಿದ್ದು, ಇದೀಗ ಪರಿಚಯಿಸಲಾಗಿರುವ ವಾಹನಗಳು ಹೆಚ್ಚುವರಿಯಾಗಿದೆ.

GPS ಅಳವಿಡಿಸಿರುವುದರಿಂದ ಈ ವಾಹನಗಳ ಟ್ರ್ಯಾಕಿಂಗ್ ಸುಲಭವಾಗಿರುತ್ತದೆ. ಇದರಿಂದ ಫಲಾನುಭವಿಗಳು ಸರಿಯಾದ ಸಮಯಕ್ಕೆ ಸೇವೆಯನ್ನು ಪಡೆಯಬಹುದು. ಪ್ರತಿ ಐದು ವಾಹನಗಳಿಗೆ ಒಬ್ಬ ವಿಆರ್‌ಒ (ಗ್ರಾಮ ಕಂದಾಯ ಅಧಿಕಾರಿ) ಮತ್ತು ಪ್ರತಿ ಜಿಲ್ಲೆಗೆ ಸಂಬಂಧಿಸಿದ ವಾಹನಗಳ ಮೇಲ್ವಿಚಾರಣೆಗೆ ಒಬ್ಬ ತಹಶೀಲ್ದಾರ್‌ಗೆ ನಿರ್ದೇಶನ ನೀಡುವಂತೆ ಜಂಟಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಗರ್ಭಿಣಿ ಮಹಿಳೆಯರ ಸಹಾಯಕ್ಕಾಗಿ ಕೇಂದ್ರೀಕೃತ ಕಾಲ್ ಸೆಂಟರ್ ಅನ್ನು ಸಹ ಸ್ಥಾಪಿಸಲಾಗಿದೆ. ಕಾಲ್ ಸೆಂಟರ್ ಜೊತೆಗೆ, ಹೆರಿಗೆಗೂ ಮುನ್ನ ಮಹಿಳೆಯರು, ನರ್ಸ್​ಗಳು ಮತ್ತು ಚಾಲಕರ ನಡುವಿನ ಸಮನ್ವಯಕ್ಕಾಗಿ ಡಾ.ವೈಎಸ್ಆರ್ ತಲ್ಲಿ ಬಿದ್ದ ಎಕ್ಸ್‌ಪ್ರೆಸ್ ಅಪ್ಲಿಕೇಶನ್ ಅನ್ನು ಸ್ಥಾಪಿಸಲಾಗಿದೆ.

ಮಹಿಳೆಯರು ಮತ್ತು ನವಜಾತ ಶಿಶುವನ್ನು ಸರ್ಕಾರಿ ಆಸ್ಪತ್ರೆಯಿಂದ ಸುರಕ್ಷಿತವಾಗಿ ಅವರ ಮನೆಗೆ ಸಾಗಿಸಲು ವೈಎಸ್‌ಆರ್ ತಲ್ಲಿ ಬಿದ್ದ ಎಕ್ಸ್‌ಪ್ರೆಸ್ ವಾಹನಗಳ ಮೂಲಕ ಸಾರಿಗೆ ಸೌಲಭ್ಯದ ಜೊತೆಗೆ ವೈಎಸ್‌ಆರ್ ಆರೋಗ್ಯ ಆಸರ ಅಡಿಯಲ್ಲಿ ತಾಯಂದಿರಿಗೆ ಸರ್ಕಾರವು 5,000 ರೂ. ಹಣವನ್ನು ಹೆರಿಗೆಯಾದ ನಂತರ ಚಿಕಿತ್ಸೆಯ ಭತ್ಯೆಯಾಗಿ ನೀಡುತ್ತಿದೆ.

ಇದನ್ನೂ ಓದಿ: ಪಾದಯಾತ್ರೆ ನಡೆಸುತ್ತಿದ್ದ ಆಂಧ್ರ ಸಿಎಂ ಸೋದರಿ ವೈ.ಎಸ್.ಶರ್ಮಿಳಾ ಮೇಲೆ ಜೇನುನೊಣ ದಾಳಿ; ಟವೆಲ್​ ಬೀಸುತ್ತ ಓಡಿದ ಕಾರ್ಯಕರ್ತರು

Shocking News: ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ; ಕಾಸರಗೋಡಿನಲ್ಲೊಂದು ಆಘಾತಕಾರಿ ಘಟನೆ

Published On - 4:15 pm, Fri, 1 April 22