ಆಂಧ್ರ ರಾಜಕೀಯದಲ್ಲಿ ಸಂಚಲನ: ಪರಿಷತ್ತನ್ನೇ ರದ್ದುಪಡಿಸುವ ನಿರ್ಧಾರ ಕೈಗೊಂಡ ಜಗನ್!

|

Updated on: Jan 29, 2020 | 6:45 AM

ಹೈದರಾಬಾದ್​: ಆಂಧ್ರದಲ್ಲಿ ವಿಧಾನಪರಿಷತ್ ರದ್ದುಪಡಿಸುವ ಮಹತ್ವದ ನಿರ್ಧಾರವನ್ನ ಸಿಎಂ ಜಗನ್ ಮೋಹನರೆಡ್ಡಿ ಕೈಗೊಂಡಿದ್ದಾರೆ. ಈ ಹಿಂದೆಯೂ ಹಲವು ಮಹತ್ವದ ನಿರ್ಣಯಗಳನ್ನ ಜಗನ್ ಮೋಹನ್ ರೆಡ್ಡಿ ಕೈಗೊಂಡಿದ್ದರು. ಇದೀಗ ಪರಿಷತ್​ನ ರದ್ದುಪಡಿಸಿರೋದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. 3 ರಾಜಧಾನಿಗಳ ರಚನೆಗೆ ಟಿಡಿಪಿ ವಿರೋಧ: ಆಂಧ್ರಪ್ರದೇಶದಲ್ಲಿ 3 ರಾಜಧಾನಿಗಳನ್ನು ರಚಿಸುವ ಜಗನ್ ಮೋಹನರೆಡ್ಡಿ ಅವರ ಯೋಜನೆಗೆ ಆಂಧ್ರ ವಿಧಾನಪರಿಷತ್ತು ತಡೆಯೊಡ್ಡಿತ್ತು. ಈ ಮಸೂದೆ ಜಾರಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತರೂ ಪರಿಷತ್ತಿನಲ್ಲಿ ಅನುಮೋದನೆ ದೊರೆಯದೆ ವಿಳಂಬವಾಗುತ್ತಿತ್ತು. ಅಮರಾವತಿಯಲ್ಲಿಯೇ ರಾಜಧಾನಿ ರಚನೆಯಾಗಬೇಕೆಂದು ವಾದಿಸಿದ್ದ […]

ಆಂಧ್ರ ರಾಜಕೀಯದಲ್ಲಿ ಸಂಚಲನ: ಪರಿಷತ್ತನ್ನೇ ರದ್ದುಪಡಿಸುವ ನಿರ್ಧಾರ ಕೈಗೊಂಡ ಜಗನ್!
Follow us on

ಹೈದರಾಬಾದ್​: ಆಂಧ್ರದಲ್ಲಿ ವಿಧಾನಪರಿಷತ್ ರದ್ದುಪಡಿಸುವ ಮಹತ್ವದ ನಿರ್ಧಾರವನ್ನ ಸಿಎಂ ಜಗನ್ ಮೋಹನರೆಡ್ಡಿ ಕೈಗೊಂಡಿದ್ದಾರೆ. ಈ ಹಿಂದೆಯೂ ಹಲವು ಮಹತ್ವದ ನಿರ್ಣಯಗಳನ್ನ ಜಗನ್ ಮೋಹನ್ ರೆಡ್ಡಿ ಕೈಗೊಂಡಿದ್ದರು. ಇದೀಗ ಪರಿಷತ್​ನ ರದ್ದುಪಡಿಸಿರೋದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

3 ರಾಜಧಾನಿಗಳ ರಚನೆಗೆ ಟಿಡಿಪಿ ವಿರೋಧ:
ಆಂಧ್ರಪ್ರದೇಶದಲ್ಲಿ 3 ರಾಜಧಾನಿಗಳನ್ನು ರಚಿಸುವ ಜಗನ್ ಮೋಹನರೆಡ್ಡಿ ಅವರ ಯೋಜನೆಗೆ ಆಂಧ್ರ ವಿಧಾನಪರಿಷತ್ತು ತಡೆಯೊಡ್ಡಿತ್ತು. ಈ ಮಸೂದೆ ಜಾರಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತರೂ ಪರಿಷತ್ತಿನಲ್ಲಿ ಅನುಮೋದನೆ ದೊರೆಯದೆ ವಿಳಂಬವಾಗುತ್ತಿತ್ತು. ಅಮರಾವತಿಯಲ್ಲಿಯೇ ರಾಜಧಾನಿ ರಚನೆಯಾಗಬೇಕೆಂದು ವಾದಿಸಿದ್ದ ವಿರೋಧ ಪಕ್ಷ ಟಿಡಿಪಿ 3 ರಾಜಧಾನಿಗಳ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಪರಿಷತ್ತಿನಲ್ಲಿ ಟಿಡಿಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು 3 ರಾಜಧಾನಿಗಳ ರಚನೆ ನಿರ್ಧಾರ ಜಾರಿಯಾಗುವುದನ್ನ ತಡೆಯುವಲ್ಲಿ ಯಶಸ್ವಿಯಾಗಿತ್ತು.

ಎಲ್ಲಾ ಬೆಳವಣಿಗೆಗಳ ಮೊದಲ ಹಂತವಾಗಿ ವಿಧಾನಪರಿಷತ್ತನ್ನೇ ರದ್ದುಪಡಿಸುವ ನಿರ್ಧಾರವನ್ನು ಜಗನಮೋಹನ ರೆಡ್ಡಿ ತೆಗೆದುಕೊಂಡಿದ್ದಾರೆ. ನಂತರ ಆಂಧ್ರದಲ್ಲಿ 3 ರಾಜಧಾನಿಗಳ ರಚನೆಯ ಮುಂದಿನ ಕ್ರಮಗಳ ಕುರಿತು ಮುಖ್ಯಮಂತ್ರಿ ಚರ್ಚಿಸಿದ್ದಾರೆ. ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ವಿಧಾನಸಭೆಯಲ್ಲಿ ಬಹುಸಂಖ್ಯೆಯ ಶಾಸಕರು ಪರಿಷತ್ತು ರದ್ದುಮಾಡುವ ನಿರ್ಧಾರದ ಪರವಾಗಿ ಮತಚಲಾಯಿಸಿದ್ದಾರೆ.

Published On - 7:14 am, Tue, 28 January 20