Uma Maheswari Death: ನಂದಮೂರಿ ರಾಮಾರಾವ್ ಕುಟುಂಬದಲ್ಲಿ ವಿಷಾದ.. ಎನ್‌ಟಿಆರ್‌ ಕೊನೆಯ ಪುತ್ರಿ ಉಮಾಮಹೇಶ್ವರಿ ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Aug 01, 2022 | 4:58 PM

NTR: ನಂದಮೂರಿ ತಾರಕ ರಾಮಾರಾವ್ ಕುಟುಂಬದಲ್ಲಿ ವಿಷಾದ ತುಂಬಿದೆ. ದಿವಂಗತ ದಿಗ್ಗಜ ನಟ, ಮಾಜಿ ಮುಖ್ಯಮಂತ್ರಿ ಎನ್​ಟಿಆರ್ -ಬಸವತಾರಕಂ ದಂಪತಿಯ ಮಗಳು ಉಮಾ ಮಹೇಶ್ವರಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Uma Maheswari Death: ನಂದಮೂರಿ ರಾಮಾರಾವ್ ಕುಟುಂಬದಲ್ಲಿ ವಿಷಾದ.. ಎನ್‌ಟಿಆರ್‌ ಕೊನೆಯ ಪುತ್ರಿ ಉಮಾಮಹೇಶ್ವರಿ ಆತ್ಮಹತ್ಯೆ
ನಂದಮೂರಿ ರಾಮಾರಾವ್ ಕುಟುಂಬದಲ್ಲಿ ವಿಷಾದ.. ಎನ್‌ಟಿಆರ್‌ ಕೊನೆಯ ಪುತ್ರಿ ಉಮಾಮಹೇಶ್ವರಿ ನಿಧನ
Follow us on

ಹೈದರಾಬಾದ್: ನಂದಮೂರಿ ತಾರಕ ರಾಮಾರಾವ್ (NTR) ಕುಟುಂಬದಲ್ಲಿ ವಿಷಾದ ತುಂಬಿದೆ. ದಿವಂಗತ ದಿಗ್ಗಜ ನಟ, ಮಾಜಿ ಮುಖ್ಯಮಂತ್ರಿ ಎನ್​ಟಿಆರ್ -ಬಸವತಾರಕಂ ದಂಪತಿಯ ಮಗಳು ಉಮಾ ಮಹೇಶ್ವರಿ (Uma Maheswari) ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮಾಮಹೇಶ್ವರಿ (52) ನಿಧನದಿಂದ ನಂದಮೂರಿ ಎನ್‌ಟಿಆರ್‌ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ.

ಎನ್‌ಟಿಆರ್‌ ಅವರ ಕೊನೆಯ ಪುತ್ರಿ ಉಮಾ ಮಹೇಶ್ವರಿ ಜೂಬಿಲಿ ಹಿಲ್ಸ್‌ನಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ ಟಿಆರ್ ಪುತ್ರಿಯರ ಪೈಕಿ ದಗ್ಗುಪಾಟಿ ಪುರಂದೇಶ್ವರಿ ಸಹ ಒಬ್ಬರು. ಮತ್ತೊಬ್ಬರು ಚಂದ್ರಬಾಬು ನಾಯ್ಡು ಪತ್ನಿ ಭುವನೇಶ್ವರಿ. ಮತ್ತೊಬ್ಬ ಮಗಳು ಲೋಕೇಶ್ವರಿ. ಎನ್‌ಟಿಆರ್‌ ದಂಪತಿಗೆ 11 ಮಂದಿ ಮಕ್ಕಳು. 7 ಮಂದಿ ಪುತ್ರರು- 4 ಮಂದಿ ಪುತ್ರಿಯರು. ಜಯಕೃಷ್ಣ, ಸಾಯಿಕೃಷ್ಣ, ಹರಿಕೃಷ್ಣ, ಮೋಹನಕೃಷ್ಣ, ಬಾಲಕೃಷ್ಣ, ರಾಮಕೃಷ್ಣ, ಜಯಶಂಕರ ಕೃಷ್ಣ ಗಂಡುಮಕ್ಕಳು. ಹೆಣ್ಣು ಮಕ್ಕಳು ಲೋಕೇಶ್ವರಿ, ದಗ್ಗುಬಾಟಿ ಪುರಂದೇಶ್ವರಿ, ನಾರಾ ಭುವನೇಶ್ವರಿ, ಕಂಠಮನೇನಿ ಉಮಾಮಹೇಶ್ವರಿ – ನಾಲ್ವರು ಪುತ್ರಿಯರು.

To read more in Telugu click here 

Published On - 4:25 pm, Mon, 1 August 22