Shocking News: ರಾಜಸ್ಥಾನದ ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯ ಹೊರತೆಗೆದ ವೈದ್ಯರು!
ಜೋಧ್‌ಪುರದ ಎಂಡಿಎಂ ಆಸ್ಪತ್ರೆಯಲ್ಲಿ 2 ದಿನಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ನಾಣ್ಯಗಳನ್ನು ಹೊರಗೆ ತೆಗೆಯಲಾಗಿದೆ. ಆ ವ್ಯಕ್ತಿ ಖಿನ್ನತೆಯಿಂದ ಈ ನಾಣ್ಯಗಳನ್ನು ನುಂಗಿದ್ದ ಎಂದು ಹೇಳಲಾಗಿದೆ.
ಜೋಧ್ಪುರ: ರಾಜಸ್ಥಾನದಲ್ಲಿ (Rajasthan) ವ್ಯಕ್ತಿಯೊಬ್ಬನ ಹೊಟ್ಟೆಯಿಂದ ವೈದ್ಯರು 63 ನಾಣ್ಯಗಳನ್ನು ಹೊರತೆಗೆದಿರುವ ವಿಚಿತ್ರವಾದ ಘಟನೆ ನಡೆದಿದೆ. 36 ವರ್ಷದ ವ್ಯಕ್ತಿ ತೀವ್ರ ಹೊಟ್ಟೆನೋವು ಎಂದು ಒದ್ದಾಡಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೊಟ್ಟೆನೋವೆಂದು ಬಂದ ರೋಗಿಯನ್ನು ಪರೀಕ್ಷಿಸಿದಾಗ ಆತನ ಹೊಟ್ಟೆಯಲ್ಲಿ ನಾಣ್ಯಗಳು ಇರುವುದು ಪತ್ತೆಯಾಗಿದೆ. ರಾಜಸ್ಥಾನದ ವೈದ್ಯರು ಎಂಡೋಸ್ಕೋಪಿಕ್ ಪ್ರಕ್ರಿಯೆಯ ಮೂಲಕ ಆ ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯಗಳನ್ನು ಹೊರತೆಗೆದಿದ್ದಾರೆ.
ಜೋಧ್‌ಪುರದ ಎಂಡಿಎಂ ಆಸ್ಪತ್ರೆಯಲ್ಲಿ 2 ದಿನಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ನಾಣ್ಯಗಳನ್ನು ಹೊರಗೆ ತೆಗೆಯಲಾಗಿದೆ. ಆ ವ್ಯಕ್ತಿ ಖಿನ್ನತೆಯಿಂದ ಈ ನಾಣ್ಯಗಳನ್ನು ನುಂಗಿದ್ದ ಎಂದು ಹೇಳಲಾಗಿದೆ. “ಆಸ್ಪತ್ರೆಗೆ ಬಂದ ಅವರು 10-15 ನಾಣ್ಯಗಳನ್ನು ನುಂಗಿದ್ದಾರೆ ಎಂದು ನಮ್ಮ ಬಳಿ ಹೇಳಿದರು. ನಾವು ಹೊಟ್ಟೆಯ ಎಕ್ಸ್-ರೇ ನಡೆಸಿದಾಗ ನಾಣ್ಯಗಳ ರಾಶಿಯೇ ಅಲ್ಲಿರುವುದು ಕಂಡುಬಂದಿತು” ಎಂದು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ನರೇಂದ್ರ ಭಾರ್ಗವ್ ವಿವರಿಸಿದ್ದಾರೆ.
Doctors removed a glass tumbler from a woman’s bladder in Tunisia after she went to them complaining of urinary tract infection (UTI). A scan of the woman’s bladder had revealed a large bladder stone with a glass encased. It was used for ‘erotic purpose’ ? pic.twitter.com/TKh4vY3Zsv
— Tushar ॐ♫₹ (@Tushar_KN) March 17, 2022
ಇದನ್ನೂ ಓದಿ: Shocking News: ಮನೆಯ ಯಜಮಾನಿಯನ್ನು ಕೊಂದು ಹಾಕಿದ ಪಿಟ್ ಬುಲ್! ವೈದ್ಯರು ಹೇಳಿದ್ದೇನು ಗೊತ್ತಾ?
ವೈದ್ಯರು ಎರಡು ದಿನಗಳಲ್ಲಿ 1 ರೂ.ನ 63 ನಾಣ್ಯಗಳನ್ನು ಸೇವಿಸಿರುವುದು ಪತ್ತೆಯಾಗಿದೆ. ಅವುಗಳನ್ನು ಹೊರತೆಗೆಯಲಾಗಿದ್ದು, ರೋಗಿ ಚೆನ್ನಾಗಿದ್ದಾರೆ. ಸ್ವಲ್ಪ ಸಮಯದ ನಂತರ ಅವರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಭಾರ್ಗವ ಹೇಳಿದ್ದಾರೆ.