Shocking News: ಮನೆಯ ಯಜಮಾನಿಯನ್ನು ಕೊಂದು ಹಾಕಿದ ಪಿಟ್ ಬುಲ್! ವೈದ್ಯರು ಹೇಳಿದ್ದೇನು ಗೊತ್ತಾ?
82 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಸಾಕುನಾಯಿ ತನ್ನ ಮನೆಯಲ್ಲಿ ಕೊಂದು ಹಾಕಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನಿವೃತ್ತ ಶಾಲಾ ಶಿಕ್ಷಕಿ ಸುಶೀಲಾ ತ್ರಿಪಾಠಿ ಮಂಗಳವಾರ ಬೆಳಗ್ಗೆ ತನ್ನ ಮನೆಯ ಮೇಲ್ಛಾವಣಿಯಲ್ಲಿದ್ದಾಗ ಆಕೆಯ ಮುದ್ದಿನ ಪಿಟ್ ಬುಲ್ ಆಕೆಯ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದ್ದಾರೆ.
ಲಕ್ನೋ: ನಗರದ ಖೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಸಾಕುನಾಯಿ ತನ್ನ ಮನೆಯಲ್ಲಿ ಕೊಂದು ಹಾಕಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನಿವೃತ್ತ ಶಾಲಾ ಶಿಕ್ಷಕಿ ಸುಶೀಲಾ ತ್ರಿಪಾಠಿ ಮಂಗಳವಾರ ಬೆಳಗ್ಗೆ ತನ್ನ ಮನೆಯ ಮೇಲ್ಛಾವಣಿಯಲ್ಲಿದ್ದಾಗ ಆಕೆಯ ಮುದ್ದಿನ ಪಿಟ್ ಬುಲ್ ಆಕೆಯ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದ್ದಾರೆ. ಮನೆಯ ಕೆಲಸದವರು ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಮಗನಿಗೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಖಚಿತ ಪಡಿಸಿದ್ದಾರೆ. ನಂತರ ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆ ತನ್ನ ಕಿರಿಯ ಮಗನೊಂದಿಗೆ ವಾಸಿವಾಗಿದ್ದರು. ಆಕೆಯ ಮೇಲೆ ದಾಳಿ ಮಾಡಿದ ಪಿಟ್ ಬುಲ್ ಸೇರಿದಂತೆ ಇದರ ಜೊತೆಗೆ ಎರಡು ಸಾಕು ನಾಯಿಗಳಿದ್ದವು. ಖೈಸರ್‌ಬಾಗ್‌ನ ಸಹಾಯಕ ಪೊಲೀಸ್ ಕಮಿಷನರ್ ಯೋಗೇಶ್ ಕುಮಾರ್, ಬಂಗಾಲಿ ಟೋಲಾ ಪ್ರದೇಶದ ಸುಶೀಲಾ ತ್ರಿಪಾಠಿ (82) ಅವರ ಸಾಕು ನಾಯಿ ದಾಳಿ ಮಾಡಿದೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಲಕ್ನೋ ಪುರಸಭೆಯ ಅಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಮುನ್ಸಿಪಲ್ ಕಾರ್ಪೊರೇಷನ್‌ನ ತಂಡವು ಬುಧವಾರ ಬೆಳಿಗ್ಗೆ ತ್ರಿಪಾಠಿ ಅವರ ನಿವಾಸ ಬಂದಿದ್ದಾರೆ ಆದರೆ ಅವರ ಮನೆಗೆ ಬೀಗ ಹಾಕಿದ್ದರು ಎನ್ನಲಾಗಿದೆ. ಎಲ್‌ಎಂಸಿಯ ಪಶುವೈದ್ಯಾಧಿಕಾರಿ ಡಾ.ಅಭಿನವ್ ವರ್ಮಾ, ಅವರು ತಿಳಿಸಿರುವಂತೆ ಪಿಟ್ ಬುಲ್ ನಾಯಿಯನ್ನು ಸಾಕುಪ್ರಾಣಿಯಾಗಿ ಸಾಕಲು ಕುಟುಂಬಕ್ಕೆ ಪರವಾನಗಿ ಇದೆಯೇ ಎಂದು ಪರಿಶೀಲಿಸಲು ಮನೆಗೆ ಹೋಗಿದ್ದರು. ಆದರೆ ಮನೆಗೆ ಬೀಗ ಹಾಕಿದ್ದರಿಂದ ಅದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ನಾಯಿ ಎಲ್ಲಿದೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಮತ್ತು ಅದರ ಬಗ್ಗೆ ಮಗನನ್ನು ಕೇಳಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಟ್ ಬುಲ್ ಮಧ್ಯಮ ಗಾತ್ರದ, ಚಿಕ್ಕ ಕೂದಲಿನ ನಾಯಿಯಾಗಿದ್ದು, ತರಬೇತಿ ಪಡೆಯದೇ ಜನರು ಇದನ್ನು ಮನೆಯ ಸಾಕುಪ್ರಾಣಿಯಾಗಿ ಇರಿಸಿಕೊಳ್ಳಲು ತುಂಬಾ ಅಪಾಯ ಎಂದು ಹೇಳಿದ್ದಾರೆ. ಸಾರ್ವಜನಿಕ ಸುರಕ್ಷತೆಯ ಉದ್ದೇಶಗಳಿಗಾಗಿ ಜಾರಿಗೊಳಿಸಲಾದ UK ಯ ಅಪಾಯಕಾರಿ ನಾಯಿಗಳ ಕಾಯಿದೆ, 1991 ರಲ್ಲಿ ಇಂತಹ ನಾಯಿಗಳನ್ನು ಪಟ್ಟಿ ಮಾಡಲಾಗಿದೆ.
Published On - 4:33 pm, Wed, 13 July 22