Watch ಡಾರ್ಜಲಿಂಗ್​​ನ ರಸ್ತೆಬದಿಯ ಸ್ಟಾಲ್​​​ನಲ್ಲಿ ಪಾನಿಪೂರಿ ತಯಾರಿಸಿ ಜನರಿಗೆ ನೀಡಿದ ಮಮತಾ ಬ್ಯಾನರ್ಜಿ

ಗರಿಗರಿಯಾದ ಪೂರಿಯೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿಸಿ ನಂತರ ಅದನ್ನು ಹುಣಸೆಹುಳಿ ನೀರಿನಲ್ಲಿ ಮುಳುಗಿಸಿದ ಪಾನಿಪೂರಿಯನ್ನು ಮಮತಾ ಜನರಿಗೆ ನೀಡುತ್ತಿರುವುದು ವಿಡಿಯೊದಲ್ಲಿದೆ.

Watch  ಡಾರ್ಜಲಿಂಗ್​​ನ ರಸ್ತೆಬದಿಯ ಸ್ಟಾಲ್​​​ನಲ್ಲಿ ಪಾನಿಪೂರಿ ತಯಾರಿಸಿ ಜನರಿಗೆ ನೀಡಿದ ಮಮತಾ ಬ್ಯಾನರ್ಜಿ
ಜನರಿಗೆ ಪಾನಿಪೂರಿ ನೀಡುತ್ತಿರುವ ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 13, 2022 | 3:01 PM

ಡಾರ್ಜಲಿಂಗ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಂಗಳವಾರ ಡಾರ್ಜಲಿಂಗ್​​ನ (Darjeeling) ರಸ್ತೆ ಬದಿಯಲ್ಲಿರುವ ಪಾನಿಪೂರಿ ಸ್ಟಾಲ್ಲ್​​ನಲ್ಲಿ ಪಾನಿಪೂರಿ (Panipuri) ತಯಾರಿಸಿ ಜನರಿಗೆ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ. ಡಾರ್ಜಲಿಂಗ್​​ಗೆ ಭೇಟಿ ನೀಡಿದ ಪ್ರವಾಸಿಗರು ಮತ್ತು ಮಕ್ಕಳೊಂದಿಗೆ ಸಂವಾದ ಮಾಡುತ್ತಾ ಅವರಿಗೆ ಪಾನಿಪೂರಿ ನೀಡುತ್ತಿರುವ ಮಮತಾ ದೀದಿಯನ್ನು ವಿಡಿಯೊದಲ್ಲಿ ಕಾಣಬಹುದು. ಗರಿಗರಿಯಾದ ಪೂರಿಯೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿಸಿ ನಂತರ ಅದನ್ನು ಹುಣಸೆಹುಳಿ ನೀರಿನಲ್ಲಿ ಮುಳುಗಿಸಿದ ಪಾನಿಪೂರಿಯನ್ನು ಮಮತಾ ಜನರಿಗೆ ನೀಡುತ್ತಿರುವುದು ವಿಡಿಯೊದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಪಾನಿಪೂರಿಯನ್ನು ಪುಚ್ಕಾ ಎಂದು ಕರೆಯಲಾಗುತ್ತದೆ. ಮಹಿಳೆಯರ ಸ್ವಸಹಾಯ ಗುಂಪು ಕ್ವೀನ್ ಆಫ್ ಹಿಲ್ಸ್ ಗೆ ಭೇಟಿ ನೀಡಿದ ಮಮತಾ ಅಲ್ಲಿ ಪಾನಿಪೂರಿ ಮಾಡಿ ಜನರಿಗೆ ನೀಡಿದ್ದಾರೆ .

ಟಿಎಂಸಿ ಕೂಡಾ ಈ ವಿಡಿಯೊವನ್ನು ಟ್ವೀಟ್ ಮಾಡಿದ್ದು, ನಮ್ಮ ಗೌರವಾನ್ವಿತ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರು ಡಾರ್ಜಲಿಂಗ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಸ್ಟಾಲ್ ಗೆ ಭೇಟಿನೀಡಿ ಅಲ್ಲಿ ಪುಚ್ಕಾ ತಯಾರಿಸಿ ಮಕ್ಕಳಿಗೆ ನೀಡಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ
Image
Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್
Image
Watch ಮಹಾರಾಷ್ಟ್ರದ ನಾನೆಘಾಟ್​​​ನಲ್ಲಿರುವ ಹಿಮ್ಮುಖ ಜಲಪಾತದ ವಿಸ್ಮಯಕ್ಕೆ ದಂಗಾದ ನೆಟ್ಟಿಗರು
Image
Viral Video: ಎಲಾನ್ ಮಸ್ಕ್​ನ ಸ್ಪೇಸ್​ಎಕ್ಸ್​ ಪ್ಲಾಂಟ್​​ನಲ್ಲಿ ರಾಕೆಟ್ ಬೂಸ್ಟರ್​ ಸ್ಫೋಟ; ವಿಡಿಯೋ ಇಲ್ಲಿದೆ

ಗೋರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದಲ್ಲಿ ಹೊಸದಾಗಿ ಆಯ್ಕೆ ಆದ ಮಂಡಳಿ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಮಮತಾ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದರು. ಈ ಹಿಂದೆ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದಾಗ ಮಮತಾ ಅವರು ಜನಪ್ರಿಯ ಟಿಬೆಟಿಯನ್ ತಿಂಡಿ ಮೊಮೊ ತಯಾರಿಸಿದ್ದರು. 2019ರಲ್ಲಿ ದಿಘಾದಿಂದ ಕೊಲ್ಕತ್ತಾಕ್ಕೆ ಮರಳುವಾಗ ಅವರು ಚಹಾ ತಯಾರಿಸಿ ಎಲ್ಲರಿಗೂ ನೀಡಿದ್ದರು.

ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ