Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್

ಹಸುವಿನ ಕಾಲಿಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆಯುವಾಗ ಆ ಯುವಕರೆಲ್ಲರೂ ತಮಗೆ ಇನ್ನಷ್ಟು ಶಕ್ತಿ ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಯುವಕರು; ವಿಡಿಯೋ ವೈರಲ್
ಬೆಟ್ಟದ ಕೆಳಗೆ ಬಿದ್ದ ಹಸುವನ್ನು ಕಾಪಾಡಿದ ಯುವಕರುImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 12, 2022 | 3:26 PM

ಬೆಟ್ಟದಿಂದ ಕೆಳಗೆ ಬಿದ್ದಿದ್ದ ಹಸುವೊಂದನ್ನು ರಕ್ಷಿಸಲು ಯುವಕರ ತಂಡ ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ. ಕಳೆದ 2 ದಿನಗಳಿಂದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಗುಡ್ಡದಿಂದ ಕೆಳಗೆ ಬಿದ್ದ ಹಸುವನ್ನು ಕಾಪಾಡಲು ಯುವಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಹಸುವಿಗೆ ಹಗ್ಗ ಕಟ್ಟಿ ಮೇಲೆಳೆದು ಅದರ ಜೀವ ಕಾಪಾಡಿದ್ದಾರೆ. ಸಾಲಾಗಿ ಬೆಟ್ಟದ ತುದಿಯಲ್ಲಿ ನಿಂತಿರುವ ಯುವಕರು ಹಗ್ಗದ ಮೂಲಕ ಹಸುವನ್ನು ಮೇಲಕ್ಕೆ ಎಳೆಯುತ್ತಿರುವ ದೃಶ್ಯ ಎಲ್ಲರ ಮನಗೆದ್ದಿದೆ.

ಆ ಯುವಕರಲ್ಲಿ ಒಬ್ಬಾತ ಬೆಟ್ಟದ ತುದಿಯಲ್ಲಿ ನಿಂತು, ಹಗ್ಗವನ್ನು ಎಳೆದುಕೊಡುತ್ತಿದ್ದಾನೆ. ಆ ಯುವಕ ಆಗಾಗ ಕೆಳಗೆ ಬಗ್ಗಿ ಹಸುವಿನ ಪರಿಸ್ಥಿತಿ ಈಗ ಹೇಗಿದೆ? ಎಂಬುದನ್ನು ಪರೀಕ್ಷಿಸುತ್ತಿದ್ದಾನೆ. ಹಸು ಸುರಕ್ಷಿತವಾಗಿದೆ ಮತ್ತು ಕೊಂಚ ಮೇಲಕ್ಕೆ ಬಂದಿದೆ ಎಂಬುದು ಖಚಿತವಾಗುತ್ತಿದ್ದಂತೆ ಗೆಳೆಯರ ಸಹಾಯದಿಂದ ಮತ್ತೆ ಹಗ್ಗಕ್ಕೆ ಕೈಹಾಕಿ ಮೇಲಕ್ಕೆ ಎಳೆದುಕೊಳ್ಳುತ್ತಿದ್ದಾನೆ.

ಇದನ್ನೂ ಓದಿ
Image
Viral Video: ಮದುವೆ ದಿನ ವಿಭಿನ್ನ ಒಪ್ಪಂದಕ್ಕೆ ಸಹಿ ಹಾಕಿದ ನವಜೋಡಿ, ವಿಧಿಸಲಾದ ಷರತ್ತುಗಳು ಏನೇನು ಗೊತ್ತಾ?
Image
Shocking News: ಪುರುಷನಿಗೂ ಪಿರಿಯಡ್ಸ್​!; ಹೊಟ್ಟೆ ನೋವೆಂದು ಡಾಕ್ಟರ್ ಬಳಿ ಹೋದವನಿಗೆ ಶಾಕ್
Image
Love Story: ಕೈಕೊಟ್ಟ ಪ್ರಿಯತಮನ ತಂದೆಯನ್ನೇ ಮದುವೆಯಾದ ಯುವತಿ..!
Image
Viral Video: ಮಳೆಯಿಂದಾಗಿ ಕುದುರೆ ಸವಾರಿ ಮಾಡಿ ಫುಡ್ ನೀಡಿದ ಸ್ವಿಗ್ಗಿ ಡೆಲಿವರಿ ಬಾಯ್; ವಿಡಿಯೋ ವೈರಲ್

ರೆಡ್ಡಿಟ್​ನಲ್ಲಿ ಈ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಚಿತ್ರೀಕರಿಸಲಾಗಿದೆ. ಹಸುವಿನ ಕಾಲಿಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆಯುವಾಗ ಆ ಯುವಕರೆಲ್ಲರೂ ತಮಗೆ ಇನ್ನಷ್ಟು ಶಕ್ತಿ ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಕೆಲವು ಗಂಟೆಗಳ ಪ್ರಯತ್ನದಿಂದ ಕೊನೆಗೂ ಆ ಯುವಕರ ತಂಡ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದೆ. ಆ ಹಸುವಿನ ಕಾಲಿಗೆ ಹಗ್ಗವನ್ನು ಕಟ್ಟಿ ಮೇಲೆಳೆದುಕೊಳ್ಳಲಾಗಿದೆ. ಯುವಕರ ಧೈರ್ಯ ಮತ್ತು ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published On - 3:25 pm, Tue, 12 July 22

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!