Viral: ಪ್ರಯಾಣಿಕರಿಗೆ ‘ಕ್ಯೂಟ್ ಶುಲ್ಕ’ ವಿಧಿಸುತ್ತಿರುವ ಇಂಡಿಗೋ, ಏನಿದು ಕ್ಯೂಟ್ ಚಾರ್ಜಸ್?
ಇಂಡಿಗೋ ವಿಮಾನ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ವಿಧಿಸುವ ಕ್ಯೂಟ್ ಶುಲ್ಕವು ಗೊಂದಲ ಉಂಟು ಮಾಡಿದೆ. ಈ ಕ್ಯೂಟ್ ಶುಲ್ಕ ಅಂದರೆ ಏನು ಗೊತ್ತಾ? ಇಲ್ಲಿದೆ ನೋಡಿ.
ಇಂಡಿಗೋ (IndiGo) ವಿಮಾನವು ತನ್ನ ಪ್ರಯಾಣಿಕರಿಗೆ ಕ್ಯೂಟ್ ಶುಲ್ಕ (Cute Charges) ವಿಧಿಸುತ್ತಿದೆ. ಇತ್ತೀಚೆಗಷ್ಟೇ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ತಮ್ಮ ಟಿಕೆಟ್ ದರದ ಬೆಲೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. “ಕ್ಯೂಟ್ ಶುಲ್ಕ” ಎಂದು ಕರೆಯಲ್ಪಡುವ ತನ್ನ ಟಿಕೆಟ್‌ನಲ್ಲಿನ ಒಂದು ನಿರ್ದಿಷ್ಟ ಅಂಶವನ್ನು ಇಂಟರ್ನೆಟ್‌ನ ಗಮನಕ್ಕೆ ತರುವುದು ಅವರ ಉದ್ದೇಶವಾಗಿತ್ತು. ಶಾಂತನು ಎಂಬ ಟ್ವಿಟರ್ ಬಳಕೆದಾರರು, ಟಿಕೆಟ್ನಲ್ಲಿರುವ ಬೆಲೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಇದಕ್ಕೆ ಅವರು ಹಾಸ್ಯವಾಗಿ ಶೀರ್ಷಿಕೆಯನ್ನು ಕೂಡ ನೀಡಿದ್ದಾರೆ.
ಇದನ್ನೂ ಓದಿ: Viral Video: ಆಟೋದಲ್ಲಿ 27 ಜನರು ಪ್ರಯಾಣಿಸುತ್ತಿರುವುದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು!
ಶಾಂತನು ಅವರು ಹಂಚಿಕೊಂಡ ಪೋಸ್ಟ್ನಲ್ಲಿ ಕ್ಯೂಟ್ ಶುಲ್ಕವನ್ನು ಹೆಚ್ಚು ಹೈಲೈಟ್ ಮಾಡಿದ್ದಾರೆ. ವಿಮಾನಯಾನ ಸಂಸ್ಥೆ ತನ್ನಿಂದ ಮುದ್ದಾದ ಶುಲ್ಕವನ್ನು ಏಕೆ ವಿಧಿಸುತ್ತಿದೆ ಎಂದು ಅವರು ಚೆನ್ನಾಗಿ ತಿಳಿದಿರುವಾಗ ಹಾಸ್ಯವಾಗಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೆ “ನಾನು ವಯಸ್ಸಿಗೆ ಮುದ್ದಾಗಿದ್ದೇನೆ ಎಂದು ನನಗೆ ತಿಳಿದಿದೆ, ಆದರೆ ಇಂಡಿಗೋ ನನಗೆ ಶುಲ್ಕ ವಿಧಿಸಲು ಪ್ರಾರಂಭಿಸುತ್ತದೆ ಎಂದು ಯಾವತ್ತೂ ಭಾವಿಸಿರಲಿಲ್ಲ” ಎಂದು ಶೀರ್ಷಕೆ ಬರೆದುಕೊಂಡಿದ್ದಾರೆ.
I know I’m getting cuter with age but never thought @IndiGo6E would start charging me for it. pic.twitter.com/L7p9I3VfKX
— Shantanu (@shantanub) July 10, 2022
ಕ್ಯೂಟ್ ಶುಲ್ಕದ ಫೋಟೋ ಇದೀಗ ವೈರಲ್ ಪಡೆದಿದ್ದು, ನೆಟ್ಟಿಗರು ಹಾಸ್ಯವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನೆಟ್ಟಿಗರೊಬ್ಬರು ತಾನು 9 ವರ್ಷಗಳ ಹಿಂದೆ ಕ್ಯೂಟ್ ಶುಲ್ಕ ಕಟ್ಟಿದ ಬಗ್ಗೆ ಹಂಚಿಕೊಂಡಿದ್ದ ಪೋಸ್ಟ್ ಅನ್ನು ಮರು ಹಂಚಿಕೊಂಡು ನಾನು ನಿಮಗಿಂತ ಮುಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
I knew I was always ahead of time! ? This time 9 years#CuteCoincidence pic.twitter.com/7Ta5Z9CCn7
— Sanjib Chakravorty (@isanzc) July 11, 2022
ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, “ಹೇ ಏರ್‌ಲೈನ್, ಈ ಶುಲ್ಕಗಳು ಯಾವುದು, ನೀವು ನನ್ನೊಂದಿಗೆ ಚುರುಕಾಗಿ ವರ್ತಿಸಲು ಪ್ರಯತ್ನಿಸುತ್ತಿದ್ದೀರಾ, ಇಲ್ಲ, ಸ್ಮಾರ್ಟ್ ಅಲ್ಲ, ಕೇವಲ ಮುದ್ದಾಗಿದೆ” ಎಂದು ಹೇಳಿದ್ದಾರೆ. ಮಗದೊಬ್ಬರು ಪ್ರತಿಕ್ರಿಯಿಸಿ, “ಅವರು ಇದನ್ನು ‘ಸಾಮಾನ್ಯ ಬಳಕೆದಾರ ಟರ್ಮಿನಲ್ ಸಲಕರಣೆ’ (Common User Terminal Equipment) (CUTE) ಶುಲ್ಕಗಳು ಎಂದು ಕರೆಯುತ್ತಾರೆ, ಇದು ವಿಮಾನ ನಿಲ್ದಾಣದಲ್ಲಿ ಲೋಹ ಪತ್ತೆ ಮಾಡುವ ಯಂತ್ರಗಳು, ಎಸ್ಕಲೇಟರ್‌ಗಳು ಮತ್ತು ಇತರ ಸಲಕರಣೆಗಳ ಬಳಕೆಗೆ ಶುಲ್ಕಗಳನ್ನು ಒಳಗೊಂಡಿರುತ್ತದೆ. ಇದನ್ನು ಪ್ರಯಾಣಿಕರ ನಿರ್ವಹಣೆ ಶುಲ್ಕ ಎಂದೂ ಕರೆಯಲಾಗುತ್ತದೆ. ಶುಲ್ಕಗಳು ಒಂದು ವಿಮಾನ ನಿಲ್ದಾಣದಿಂದ ಇನ್ನೊಂದಕ್ಕೆ ಬದಲಾಗುತ್ತವೆ” ಎಂದಿದ್ದಾರೆ.
They call it "Common User Terminal Equipment" (CUTE) fees, which include charges for the use of metal detecting machines, escalators and other equipment in the airport. It's also referred to as passenger handling fee. The charges vary from one airport to the other.
— Prabodh Kant (@prabodh_kant) July 11, 2022
ಇದನ್ನೂ ಓದಿ: Viral Video: ಮಳೆಯೊಂದಿಗೆ ಭೂಮಿಗೆ ಬಿದ್ದ ಮೀನುಗಳು! ಅಪರೂಪದ ಹವಾಮಾನ ವಿದ್ಯಮಾನಕ್ಕೆ ಸಾಕ್ಷಿಯಾದ ತೆಲಂಗಾಣ
Published On - 3:48 pm, Mon, 11 July 22