Viral: ಟ್ವಿಟರ್ ಖರೀದಿ ಕೈಬಿಟ್ಟ ಎಲಾನ್ ಮಸ್ಕ್ “ಮಂಗಳದಲ್ಲಿ ಸಾಮಾಜಿಕ ಮಾಧ್ಯಮ ಸಾಮ್ರಾಜ್ಯವನ್ನು ಕಟ್ಟಲು ನಿರ್ಧಾರ”
ಟ್ವಿಟರ್ ಖರೀದಿಸುವ 44 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ತಾನು ಮುಂದುವರಿಯುವುದಿಲ್ಲ ಎಂದ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್, ಮಂಗಳದಲ್ಲಿ ಹೊಸ ಸಾಮಾಜಿಕ ಮಾಧ್ಯಮ ಸಾಮ್ರಜ್ಯ ಕಟ್ಟುತ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಮೈಕ್ರೋಬ್ಲಾಗಿಂಗ್ ಸೈಟ್ ತನಗೆ ನಕಲಿ ಖಾತೆಗಳು ಅಥವಾ ಬಾಟ್‌ಗಳಲ್ಲಿ ಬಳಸಬಹುದಾದ ಮತ್ತು ಕಾಂಕ್ರೀಟ್ ಡೇಟಾವನ್ನು ಒದಗಿಸಲು ನಿರಾಕರಿಸಿದ ನಂತರ ಟ್ವಿಟರ್ ಖರೀದಿಸುವ ಒಪ್ಪಂದವನ್ನು ಉದ್ಯಮಿ ಎಲಾನ್ ಮಸ್ಕ್ ಕೈಬಿಟ್ಟಿದ್ದಾರೆ. ಟ್ವಿಟರ್ ಖರೀದಿಸುವ 44 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ತಾನು ಮುಂದುವರಿಯುವುದಿಲ್ಲ ಎಂದು ಎಲಾನ್ ಮಸ್ಕ್ ಶುಕ್ರವಾರ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಒಪ್ಪಂದವನ್ನು ಪೂರೈಸಲು ವಿಫಲವಾದರೆ ಎಲಾನ್ ಮಸ್ಕ್ (Elon Musk) ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್ ಹೇಳಿದೆ. ಇದೀಗ ಎಲಾನ್ ಮಸ್ಕ್ ಅವರ ನಿರ್ಧಾರವು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಕಾಮೆಂಟ್ಗಳಿಗೆ ತುತ್ತಾಗಿದೆ.
ಇದನ್ನೂ ಓದಿ: Viral Video: ಪುಣೆಯಲ್ಲಿ ನದಿಗೆ ಹಾರಿ ಪ್ರವಾಹದಿಂದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್; ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ
ಏಪ್ರಿಲ್ ಆರಂಭದಲ್ಲಿ ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಯ 9.2 ಶೇಕಡಾ ಪಾಲನ್ನು ಸ್ವಾಧೀನಪಡಿಸಿಕೊಂಡ ನಂತರ ಅದರ ಅತಿದೊಡ್ಡ ವೈಯಕ್ತಿಕ ಪಾಲುದಾರರಾಗಿ ಹೊರಹೊಮ್ಮಿದರು. 2022ರ ಏಪ್ರಿಲ್ 25 ರಂದು 44 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಎಲಾನ್ ಮಸ್ಕ್ ಟ್ವಿಟರ್ ಮಾಲೀಕತ್ವವನ್ನು ಪಡೆದುಕೊಳ್ಳುತ್ತಾರೆ ಎಂದು ಘೋಷಿಸಲಾಯಿತು. ಇದೀಗ ಟ್ವಿಟರ್ ಖರೀದಿಸುವ ವಿಚಾರದಿಂದ ಅವರು ಹಿಂದೆ ಸರಿದಿದ್ದಾರೆ. ಇದರ ಪ್ರತಿಯಾಗಿ ಟ್ವಿಟರ್ ಸಂಸ್ಥೆಯು ಎಲಾನ್ ಮಾಸ್ಕ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಟೀಕೆಗಳನ್ನು ಮಾಡಲು ಆರಂಭಿಸಿದ್ದಾರೆ.
ಇದನ್ನೂ ಓದಿ: Viral Video: ಆಟೋದಲ್ಲಿ 27 ಜನರು ಪ್ರಯಾಣಿಸುತ್ತಿರುವುದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು!
ಅನೇಕ ನೆಟಿಜನ್‌ಗಳು ಮಸ್ಕ್ ಅವರ ಟ್ವೀಟ್‌ಗಳು ಆಗಾಗ್ಗೆ ಹುಬ್ಬುಗಳನ್ನು ಮೇಲೆತ್ತುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಭಾವನೆಯನ್ನು ಪ್ರತಿಧ್ವನಿಸುತ್ತಾ ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, “ಎಲಾನ್ ಮಸ್ಕ್ ಗಮನ ಸೆಳೆಯಲು ಮುಂದೆ ಏನನ್ನು ಖರೀದಿಸುವುದಿಲ್ಲ ಎಂದು ನಾನು ಆಶ್ಚರ್ಯ ಪಡುತ್ತೇನೆ?” ಎಂದಿದ್ದಾರೆ.
I wonder what Elon Musk won’t buy next to get attention??
— ?Princess? (@ItsGottaBeNea) July 9, 2022
ಬ್ರೇಕಿಂಗ್ ನ್ಯೂಸ್, ಮಂಗಳದಲ್ಲಿ ಹೊಸ ಸಾಮ್ರಾಜ್ಯ
ಎಲಾನ್ ಮಸ್ಕ್ ಅವರ ನಿರ್ಧಾರದ ಬಗ್ಗೆ ಹಾಸ್ಯವಾಗಿ ಕಾಮೆಂಟ್ ಮಾಡಿದ ಮತ್ತೊಬ್ಬ ನೆಟ್ಟಿಗ, “ಬ್ರೇಕಿಂಗ್ ನ್ಯೂಸ್: ಟ್ವಿಟರ್‌ನಿಂದ ಮೊಕದ್ದಮೆ ಹೂಡುವ ಬದಲು, ಎಲೋನ್ ಮಸ್ಕ್ ಭೂಮಿಯನ್ನು ತೊರೆಯಲು, ಮಂಗಳವನ್ನು ವಸಾಹತುವನ್ನಾಗಿ ಮಾಡಲು ಮತ್ತು ಅಲ್ಲಿ ತನ್ನ ಹೊಸ ಸಾಮಾಜಿಕ ಮಾಧ್ಯಮ ಸಾಮ್ರಾಜ್ಯವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಅದನ್ನು ಹುತಾತ್ಮ ಎಂದು ಕರೆಯಲಾಗುವುದು” ಎಂದಿದ್ದಾರೆ.
BREAKING NEWS: Rather than get sued by Twitter, Elon Musk has decided to leave earth, colonize Mars, and start his new Social Media empire there. It's going to be called "Martyr".
— Derrick is PRO CHOICE♎ #BLM ?? ?️? (@Spawn_03) July 9, 2022
ಮಗದೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, “ಬ್ರೇಕಿಂಗ್! ಎಲೋನ್ ಮಸ್ಕ್ ಈಗ ಟ್ರೂತ್ ಸೋಶಿಯಲ್ ಅನ್ನು ಸ್ವಾದೀನಪಡಿಸಿಕೊಳ್ಳುತ್ತಾರೆ ಮತ್ತು ಅದನ್ನು ಕ್ವಿಟರ್ ಎಂದು ಕರೆಯುತ್ತಾರೆ ಎಂದು ಮೂಲಗಳು ಹೇಳುತ್ತವೆ” ಎಂದಿದ್ದಾರೆ.
Breaking! Sources say that Elon Musk will now acquire Truth Social and call it Qwitter.
— Captain Obvious (@TheFungi669) July 9, 2022
ಇದನ್ನೂ ಓದಿ: Viral: 40 ಟ್ವೀಟ್‌ಗಳಲ್ಲಿ 40 ಉಪಯುಕ್ತ ಪರಿಕಲ್ಪನೆಗಳು, ಓದಲು ಏಳು ನಿಮಿಷ, ಜೀವಿತಾವಧಿ ಹೊಂದಿರುವ ಮೌಲ್ಯ
Published On - 1:34 pm, Mon, 11 July 22