Viral Video: ಪುಣೆಯಲ್ಲಿ ನದಿಗೆ ಹಾರಿ ಪ್ರವಾಹದಿಂದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್; ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ
ಈ ವಿಡಿಯೋದಲ್ಲಿ ಇಬ್ಬರು ಪೊಲೀಸರು ಪ್ರವಾಹದಿಂದ ತುಂಬಿ ಹರಿಯುವ ನದಿಯಲ್ಲಿ ಮುಳುಗಿ, ವ್ಯಕ್ತಿಯನ್ನು ರಕ್ಷಿಸುವುದನ್ನು ಕಾಣಬಹುದು. ಈ ವೀಡಿಯೊವನ್ನು ಈಗಾಗಲೇ 91 ಸಾವಿರ ಜನರು ವೀಕ್ಷಿಸಿದ್ದಾರೆ.
Maharashtra Rains: ಮಹಾರಾಷ್ಟ್ರದಲ್ಲಿ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಆತಂಕದ ಮಟ್ಟಕ್ಕೆ ಏರಿಕೆಯಾಗಿದೆ. ಮಳೆಯಿಂದಾಗಿ ಮಹಾರಾಷ್ಟ್ರದ (Maharashtra Rain) ಸುಮಾರು 130 ಹಳ್ಳಿಗಳು ಹಾನಿಗೀಡಾಗಿದ್ದು, ಕನಿಷ್ಠ 200 ಜನರನ್ನು ಸ್ಥಳಾಂತರಿಸಲಾಗಿದೆ. ನಿರಂತರ ಮಳೆಯಿಂದಾಗಿ ಭಾರತೀಯ ಹವಾಮಾನ ಇಲಾಖೆ (IMD) ಮಹಾರಾಷ್ಟ್ರದಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಿದೆ. ಪುಣೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರವಾಹದ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಎನ್‌ಸಿಪಿ ನಾಯಕಿ ಮತ್ತು ಸಂಸದೆ ಸುಪ್ರಿಯಾ ಸುಳೆ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ದತ್ತವಾಡಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ಗಳಾದ ಸದ್ದಾಂ ಶೇಖ್ ಮತ್ತು ಅಜಿತ್ ಪೋಕರೆಯ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪುಣೆ ಜಿಲ್ಲೆಯ ಶಿವಾನೆಯಲ್ಲಿರುವ ಬಾಗುಲ್ ಉದ್ಯಾನದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ರಕ್ಷಿಸಿರುವ ಸಾಹಸಕ್ಕೆ ಸುಪ್ರಿಯಾ ಸುಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
दत्तवाडी, पुणे पोलीस स्टेशनचे पोलीस शिपाई सद्दाम शेख व अजित पोकरे यांनी शिवणेतील बागुल उद्यानालगतच्या ओढ्यात वाहून जात असलेल्या व्यक्तीचे प्राण वाचवले. स्वतः जीव धोक्यात घालून त्यांनी दाखवलेले शाैर्य ‘सदरक्षणाय खलनिग्रहनाय’ हे ब्रीद सार्थ ठरवणारे आहे. त्यांच्या कामगिरीला सलाम! pic.twitter.com/kDDVQl9Ykn
— Supriya Sule (@supriya_sule) July 9, 2022
ಈ ವಿಡಿಯೋದಲ್ಲಿ ಇಬ್ಬರು ಪೊಲೀಸರು ಪ್ರವಾಹದಿಂದ ತುಂಬಿ ಹರಿಯುವ ನದಿಯಲ್ಲಿ ಮುಳುಗಿ, ವ್ಯಕ್ತಿಯನ್ನು ರಕ್ಷಿಸುವುದನ್ನು ಕಾಣಬಹುದು. ಈ ವೀಡಿಯೊವನ್ನು ಈಗಾಗಲೇ 91 ಸಾವಿರ ಜನರು ವೀಕ್ಷಿಸಿದ್ದಾರೆ. ಪುಣೆಯ ಕಾನ್‌ಸ್ಟೆಬಲ್‌ಗಳು ತಮ್ಮ ಧೈರ್ಯದಿಂದಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.