AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ದಿನ ವಿಭಿನ್ನ ಒಪ್ಪಂದಕ್ಕೆ ಸಹಿ ಹಾಕಿದ ನವಜೋಡಿ, ವಿಧಿಸಲಾದ ಷರತ್ತುಗಳು ಏನೇನು ಗೊತ್ತಾ?

ಅಸ್ಸಾಂನಲ್ಲಿ ನಡೆದ ವಿವಾದ ಸಮಾರಂಭವೊಂದರಲ್ಲಿ ನವಜೋಡಿ ಜೀವನದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಒಪ್ಪಂದವನ್ನು ಮಾಡಿಕೊಂಡಿದೆ. ಒಪ್ಪಂದದಲ್ಲಿ ವಿಧಿಸಲಾದ ಷರತ್ತುಗಳು ಇಲ್ಲಿವೆ ನೋಡಿ.

Viral Video: ಮದುವೆ ದಿನ ವಿಭಿನ್ನ ಒಪ್ಪಂದಕ್ಕೆ ಸಹಿ ಹಾಕಿದ ನವಜೋಡಿ, ವಿಧಿಸಲಾದ ಷರತ್ತುಗಳು ಏನೇನು ಗೊತ್ತಾ?
ಒಪ್ಪಂದಕ್ಕೆ ಸಹಿ ಹಾಕಿದ ನವಜೋಡಿ
TV9 Web
| Edited By: |

Updated on: Jul 11, 2022 | 4:30 PM

Share

ಭಾರತದಲ್ಲಿ ಹಲವಾರು ಜೋಡಿಗಳು ತಮ್ಮ ಮದುವೆಯ ಸಮಯದಲ್ಲಿ ವಿಭಿನ್ನವಾಗಿ ಗುರುತಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿರುತ್ತವೆ. ಇದೀಗ ಅಸ್ಸಾಂನಲ್ಲಿ ನಡೆದ ವಿವಾದ ಸಮಾರಂಭವೊಂದರಲ್ಲಿ ನವಜೋಡಿ ಜೀವನದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಒಪ್ಪಂದವನ್ನು ಮಾಡಿಕೊಂಡಿದ್ದು, ಇದಕ್ಕೆ ನವ ಜೋಡಿ ಶಾಂತಿ ಮತ್ತು ಮಿಂಟು ಸಹಿ ಹಾಕಿದ್ದಾರೆ. ಅಷ್ಟಕ್ಕೂ ಗುತ್ತಿಗೆ ಎಂದು ತಲೆ ಬರಹ ಕೊಟ್ಟಿರುವ ಆ ದೊಡ್ಡ ಚೀಟಿಯಲ್ಲಿ ಏನು ಬರೆಯಲಾಗಿದೆ ಎಂದು ತಿಳಿದರೆ ನಗುವುದರ ಜೊತೆ ಇದು ಸರಿ ಎಂದು ಹೇಳುವಿರಿ.

ಇದನ್ನು ಓದಿ: Viral: ಪ್ರಯಾಣಿಕರಿಗೆ ‘ಕ್ಯೂಟ್ ಶುಲ್ಕ’ ವಿಧಿಸುತ್ತಿರುವ ಇಂಡಿಗೋ, ಏನಿದು ಕ್ಯೂಟ್ ಚಾರ್ಜಸ್?

ಇತ್ತೀಚೆಗಷ್ಟೇ ವರನೊಬ್ಬ ತನ್ನ ವಧುವಿನ ಪಾದಗಳನ್ನು ಮುಟ್ಟಿ ನಂತರ ತಾಳಿ ಕಟ್ಟಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ನವ ಜೋಡಿಯ ಒಪ್ಪಂದದ ವಿಡಿಯೋ ವೈರಲ್ ಆಗುತ್ತಿದೆ. ವೆಡ್ಲಾಕ್ ಫೋಟೋಗ್ರಫಿ ಅಸ್ಸಾಂ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಕ್ಲಿಪ್​ನಲ್ಲಿ, ಕೆಂಪು ಲೆಹೆಂಗಾವನ್ನು ಧರಿಸಿದ ವಧು ಮತ್ತು ವರ ಒಪ್ಪಂದಕ್ಕೆ ಸಹಿ ಹಾಕುವುದನ್ನು ತೋರಿಸುತ್ತದೆ. ದೊಡ್ಡ ಕಾಗದದ ಮೇಲೆ ಮುದ್ರಿತವಾದ ಒಪ್ಪಂದಕ್ಕೆ ವಧು ಸಂತೋಷದಿಂದ ಸಹಿ ಹಾಕುತ್ತಾರೆ.

ಇದನ್ನು ಓದಿ: Viral Video: ಮಳೆಯೊಂದಿಗೆ ಭೂಮಿಗೆ ಬಿದ್ದ ಮೀನುಗಳು! ಅಪರೂಪದ ಹವಾಮಾನ ವಿದ್ಯಮಾನಕ್ಕೆ ಸಾಕ್ಷಿಯಾದ ತೆಲಂಗಾಣ

ಒಪ್ಪಂದದಲ್ಲಿ ಇರುವುದು ಷರತ್ತುಗಳು ಏನೇನು?

ಒಪ್ಪಂದದ ಪ್ರಕಾರ, ವಧು ಪ್ರತಿದಿನ ಸೀರೆಯನ್ನು ಉಡಬೇಕು, ಸಂಗಾತಿಯೊಂದಿಗೆ ಮಾತ್ರ ತಡರಾತ್ರಿಯ ಪಾರ್ಟಿಗೆ ಅನುಮತಿ, ವಾರದ ಇತರ ದಿನಗಳಲ್ಲಿ ಯಾರು ಅಡುಗೆ ಮಾಡುತ್ತಾರೆ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ ಭಾನುವಾರ ಬೆಳಗಿನ ಉಪಾಹಾರ ನೀವು ಮಾಡಿರಿ ಎಂದು ಹೇಳಲಾಗಿದೆ, ಮನೆಯ ಆಹಾರಕ್ಕೆ ಯಾವಾಗಲು ಹೌದು ಎಂದು ಹೇಳಬೇಕು, ಪ್ರತಿ ತಿಂಗಳು ಒಂದು ಪಿಜ್ಜಾ ಮಾತ್ರ ತಿನ್ನುವುದು, ಪ್ರತಿದಿನ ಜಿಮ್‌ಗೆ ಹೋಗುವುದು, ಪ್ರತಿ 15 ದಿನಗಳ ನಂತರ ಶಾಪಿಂಗ್ ಮಾಡುವುದು ಮತ್ತು ಪ್ರತಿ ಪಾರ್ಟಿಯಲ್ಲಿ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡುವುದು ಸೇರಿದಂತೆ ಇನ್ನಿತರ ಷರತ್ತುಗಳನ್ನು ವಿಧಿಸಲಾಗಿದೆ.

ಇದನ್ನು ಓದಿ: Viral: ಟ್ವಿಟರ್ ಖರೀದಿ ಕೈಬಿಟ್ಟ ಎಲಾನ್ ಮಸ್ಕ್ “ಮಂಗಳದಲ್ಲಿ ಸಾಮಾಜಿಕ ಮಾಧ್ಯಮ ಸಾಮ್ರಾಜ್ಯವನ್ನು ಕಟ್ಟಲು ನಿರ್ಧಾರ”

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ